ರಾಮನಗರ: ಮಹಾಮಾರಿ ಕೊರೊನಾ ಭೀತಿಯ ನಡುವೆಯೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ರೇವತಿ ವಿವಾಹ ಮಹೋತ್ಸವ ಸರಳವಾಗಿ ನೆರವೇರಿದೆ. ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಹೆಚ್ಡಿಕೆ ತೋಟದ ಮನೆಯಲ್ಲಿ ಯುವರಾಜನ ಕಲ್ಯಾಣ ನಡೆದಿದೆ.
ಏಪ್ರಿಲ್ 17 ರಂದು ಮದುವೆ ಮಾಡುಲು ಮೊದಲೇ ದಿನಾಂಕ ಫಿಕ್ಸ್ ಆಗಿತ್ತು. ಹಾಗಾಗಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಮದುವೆ ಶಾಸ್ತ್ರ ಆರಂಭಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ನಿಖಿಲ್- ರೇವತಿ ಕಾಲಿಟ್ಟಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎರಡೂ ಕುಟುಂಬದ ಕಡಿಮೆ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
ಮದುವೆಗೆ ಹೆಚ್ಚು ಜನರು ಸೇರುವ ಕಾರಣ ಫಾರ್ಮ್‌ಹೌಸ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ವಿವಾಹ ಕಾರ್ಯಕ್ರಮಕ್ಕೆ ತೆರಳುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿಯೇ ಒಳಬಿಟ್ಟಿದ್ದಾರೆ.
Published On - 10:34 am, Fri, 17 April 20