Panipuri Kitty: ‘ದುನಿಯಾ ವಿಜಯ್ ಹಾಕಿದ ಕೇಸ್ನಲ್ಲಿ ರಾಜಿ ಆಗಲ್ಲ’: ಪಾನಿಪುರಿ ಕಿಟ್ಟಿ ಹೇಳಿಕೆ
Panipuri Kitty | Duniya Vijay: ‘ಪೊಲೀಸರು ಕರೆದಿದ್ದಕ್ಕೆ ವಿಚಾರಣೆಗೆ ಹಾಜರಾಗಿದ್ದೇನೆ. ಲಾಯರ್ ಜೊತೆ ಮಾತನಾಡಿ ಮುಂದುವರಿಯುತ್ತೇನೆ’ ಎಂದು ಪಾನಿಪುರಿ ಕಿಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
2018ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ (Duniya Vijay) ಅವರು ಪ್ರತಿದೂರು ನೀಡಿದ್ದಾರೆ. ಕೋರ್ಟ್ ಆದೇಶದ ಮೇರೆಗೆ ಪಾನಿಪುರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್ಐಆರ್ (FIR) ದಾಖಲಿಸಲಾಗಿದೆ. ಈ ಕುರಿತು ಕಿಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪೊಲೀಸರು ಕರೆದಿದ್ದಕ್ಕೆ ವಿಚಾರಣೆಗೆ ಹಾಜರಾಗಿದ್ದೇನೆ. ಲಾಯರ್ ಜೊತೆ ಮಾತನಾಡಿ ಮುಂದುವರಿಯುತ್ತೇನೆ. ಯಾರೂ ಸಂಧಾನಕ್ಕೆ ಬಂದಿಲ್ಲ. ಈವರೆಗೂ ನಾನು ಅವರ ಜೊತೆ ಮಾತನಾಡಿಲ್ಲ. ಕಾನೂನಿನ ಹೋರಾಟವನ್ನೇ ಮಾಡುತ್ತೇನೆ’ ಎಂದು ಪಾನಿಪುರಿ ಕಿಟ್ಟಿ (Panipuri Kitty) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 14, 2022 09:51 AM