Big Daddy Teaser: ಶಿವರಾಜ್​ಕುಮಾರ್​ ಹೇಳಿದ ‘OG’ ಡೈಲಾಗ್​ ಕೇಳಿ ತಲೆ ಕೆಡಿಸಿಕೊಂಡ ಪವನ್​ ಕಲ್ಯಾಣ್​ ಫ್ಯಾನ್ಸ್​

Ghost Kannada Movie: ‘ಒರಿಜಿನಲ್​ ಗ್ಯಾಂಗ್​ಸ್ಟರ್​’ ಡೈಲಾಗ್​ನಿಂದ ‘ಘೋಸ್ಟ್​’ ಸಿನಿಮಾದ ‘ಬಿಗ್​ ಡ್ಯಾಡಿ’ ಟೀಸರ್​ ಬಗ್ಗೆ ಟಾಲಿವುಡ್​ ಮಂದಿ ಕೂಡ ಮಾತನಾಡುತ್ತಿದ್ದಾರೆ. ತುಂಬ ಮಾಸ್​ ಆಗಿ ಈ ಟೀಸರ್​ ಮೂಡಿಬಂದಿದೆ.

Big Daddy Teaser: ಶಿವರಾಜ್​ಕುಮಾರ್​ ಹೇಳಿದ ‘OG’ ಡೈಲಾಗ್​ ಕೇಳಿ ತಲೆ ಕೆಡಿಸಿಕೊಂಡ ಪವನ್​ ಕಲ್ಯಾಣ್​ ಫ್ಯಾನ್ಸ್​
ಶಿವರಾಜ್​ಕುಮಾರ್​, ಪವನ್​ ಕಲ್ಯಾಣ್​

Updated on: Jul 13, 2023 | 11:36 AM

ನಟ ಶಿವರಾಜ್​ಕುಮಾರ್​ (Shivarajkumar) ಅವರ ‘ಘೋಸ್ಟ್​’ ಸಿನಿಮಾದ ‘ಬಿಗ್​ ಡ್ಯಾಡಿ’ ಟೀಸರ್​ (Big Daddy Teaser) ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾಗೆ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಶಿವರಾಜ್​ಕುಮಾರ್​ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜುಲೈ 12ರಂದು ಟೀಸರ್​ ರಿಲೀಸ್​ ಆಯಿತು. ಅದರಲ್ಲಿ ಶಿವಣ್ಣ ಹೇಳಿದ ಡೈಲಾಗ್​ ಸಖತ್​ ವೈರಲ್​ ಆಗಿದೆ. ‘ನೀವು ಗನ್​ನಲ್ಲಿ ಎಷ್ಟು ಜನರನ್ನ ಹೆದರಿಸಿದ್ದೀರೋ ಅದಕ್ಕಿಂತ ಹೆಚ್ಚು ಜನರನ್ನ ನಾನು ಬರೀ ಕಣ್ಣಲ್ಲಿ ಹೆದರಿಸಿದೀನಿ. ನನ್ನನ್ನು ಅವರು ಒ.ಜಿ. ಅಂತಾರೆ. ಒರಿಜಿನಲ್​ ಗ್ಯಾಂಗ್​ಸ್ಟರ್​’ ಎಂಬ ಡೈಲಾಗ್​ ಹೈಲೈಟ್​ ಆಗಿದೆ. ಅದನ್ನು ಕೇಳಿ ಪವನ್​ ಕಲ್ಯಾಣ್​ (Pawan Kalyan) ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ. ಕಾರಣ ಏನು? ಇಲ್ಲಿದೆ ವಿವರ..

ಟಾಲಿವುಡ್​ ನಟ ಪವನ್​ ಕಲ್ಯಾಣ್​ ಅವರು ‘ಒಜಿ’ ಶೀರ್ಷಿಕೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ‘ಒಜಿ’ ಎಂದರೆ ಒರಿಜಿನಲ್​ ಗ್ಯಾಂಗ್​ಸ್ಟರ್​. ಇದೇ ಡೈಲಾಗ್​ ಅನ್ನು ಶಿವಣ್ಣ ಕೂಡ ಹೇಳಿರುವುದರಿಂದ ಪವನ್​ ಕಲ್ಯಾಣ್​ ಅಭಿಮಾನಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ. ಅಂದಹಾಗೆ, ಒರಿಜಿನಲ್​ ಗ್ಯಾಂಗ್​ಸ್ಟರ್​ ಎಂದು ಡೈಲಾಗ್​ ಹೊಡೆದಿರುವುದು ಶಿವರಾಜ್​ಕುಮಾರ್​ ಮಾತ್ರವಲ್ಲ. ಈಗಾಗಲೇ ಅನೇಕ ಹಾಲಿವುಡ್​ ಚಿತ್ರಗಳಲ್ಲಿ ಈ ಡೈಲಾಗ್​ ಫೇಮಸ್​ ಆಗಿದೆ.

ಇದನ್ನೂ ಓದಿ: Big Daddy Teaser: ಹತ್ತಾರು ಗನ್ನು ವರ್ಸಸ್​ ಶಿವಣ್ಣನ ಕಣ್ಣು: ‘ಬಿಗ್​ ಡ್ಯಾಡಿ’ ನೋಡಿ ಉಘೇ ಉಘೇ ಎಂದ ಫ್ಯಾನ್ಸ್​

ಈಗ ಸಿನಿಮಾಗಳಿಗೆ ಭಾಷೆಯ ಗಡಿ ಇಲ್ಲ. ಪ್ಯಾನ್​ ಇಂಡಿಯಾ ಚಿತ್ರಗಳ ಸಂಖ್ಯೆ ಹೆಚ್ಚಿರುವುದು ಮತ್ತು ಒಟಿಟಿ ವ್ಯಾಪ್ತಿ ವಿಸ್ತರಿಸಿರುವುದರಿಂದ ಒಂದು ಭಾಷೆಯ ಚಿತ್ರರಂಗದ ಬೆಳವಣಿಗಳನ್ನು ಇನ್ನೊಂದು ಭಾಷೆಯ ಚಿತ್ರರಂಗದವರು ಬಹಳ ಹತ್ತಿರದಿಂದ ಗಮನಿಸುತ್ತಾರೆ. ‘ಒರಿಜಿನಲ್​ ಗ್ಯಾಂಗ್​ಸ್ಟರ್​’ ಡೈಲಾಗ್​ನಿಂದ ಕನ್ನಡದ ‘ಘೋಸ್ಟ್​’ ಸಿನಿಮಾದ ‘ಬಿಗ್​ ಡ್ಯಾಡಿ’ ಟೀಸರ್​ ಬಗ್ಗೆ ಟಾಲಿವುಡ್​ ಮಂದಿ ಕೂಡ ಮಾತನಾಡುತ್ತಿದ್ದಾರೆ. ಯೂಟ್ಯೂಬ್​ನಲ್ಲಿ ಈ ಟೀಸರ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡು ಮುನ್ನುಗ್ಗತ್ತಿದೆ. ತುಂಬ ಮಾಸ್​ ಆಗಿ ಈ ಟೀಸರ್​ ಮೂಡಿಬಂದಿದೆ.

Ghost - Bigg Daddy is Born | Big Daddy | Dr.Shivarajkumar |Sandesh N | Srini

ಪವನ್​ ಕಲ್ಯಾಣ್​ ಅವರ ‘ಒಜಿ’ ಚಿತ್ರಕ್ಕೆ ಸುಜೀತ್​ ನಿರ್ದೇಶನ ಮಾಡುತ್ತಿದ್ದಾರೆ. ಕೊನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ‘ಆರ್​ಆರ್​ಆರ್​’ ಸಿನಿಮಾ ಮಾಡಿದ ‘ಡಿವಿವಿ ಎಂಟರ್​ಟೇನ್ಮೆಂಟ್​’ ಮೂಲಕ ‘ಒಜಿ’ ಚಿತ್ರ ನಿರ್ಮಾಣವಾಗುತ್ತಿದೆ. ಪವನ್​ ಕಲ್ಯಾಣ್​ ಜೊತೆ ಪ್ರಿಯಾಂಕಾ ಅರುಣ್​ ಮೋಹನ್​, ಇಮ್ರಾನ್​ ಹಷ್ಮಿ, ಪ್ರಕಾಶ್​ ರಾಜ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us