Big Daddy Teaser: ಹತ್ತಾರು ಗನ್ನು ವರ್ಸಸ್​ ಶಿವಣ್ಣನ ಕಣ್ಣು: ‘ಬಿಗ್​ ಡ್ಯಾಡಿ’ ನೋಡಿ ಉಘೇ ಉಘೇ ಎಂದ ಫ್ಯಾನ್ಸ್​

Shivarajkumar Birthday: ಶಿವರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ಪರ್ಫೆಕ್ಟ್​ ಗಿಫ್ಟ್ ಆಗಿ ‘ಘೋಸ್ಟ್​’ ಚಿತ್ರದ ‘ಬಿಗ್​ ಡ್ಯಾಡಿ’ ಟೀಸರ್​ ಬಿಡುಗಡೆ ಆಗಿದೆ. ಈ ಟೀಸರ್​ನಲ್ಲಿ ಶಿವರಾಜ್​ಕುಮಾರ್​ ಅವರನ್ನು ನೋಡಿದ ಅಭಿಮಾನಿಗಳಿಗೆ ‘ಓಂ’ ಸಿನಿಮಾ ನೆನಪಾಗಿದೆ.

Big Daddy Teaser: ಹತ್ತಾರು ಗನ್ನು ವರ್ಸಸ್​ ಶಿವಣ್ಣನ ಕಣ್ಣು: ‘ಬಿಗ್​ ಡ್ಯಾಡಿ’ ನೋಡಿ ಉಘೇ ಉಘೇ ಎಂದ ಫ್ಯಾನ್ಸ್​
ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Jul 12, 2023 | 12:28 PM

ನಟ ಶಿವರಾಜ್​ಕುಮಾರ್​ (Shivarajkumar) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಜುಲೈ 12) ಅವರ ಜನ್ಮದಿನದ ಪ್ರಯುಕ್ತ ಆ ಎಲ್ಲ ಸಿನಿಮಾಗಳಿಂದ ಅಪ್​ಡೇಟ್​ ಲಭ್ಯವಾಗಿದೆ. ಅದರಲ್ಲೂ ‘ಘೋಸ್ಟ್​’ ಸಿನಿಮಾದಿಂದ ಬಿಡುಗಡೆ ಆಗಿರುವ ‘ಬಿಗ್​ ಡ್ಯಾಡಿ’ ಟೀಸರ್​ (Big Daddy Teaser) ಹೆಚ್ಚಿನ ಹವಾ ಸೃಷ್ಟಿ ಮಾಡಿದೆ. ಈ ಟೀಸರ್​ಗಾಗಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಗೆ ತಕ್ಕಂತೆಯೇ ನಿರ್ದೇಶಕ ಶ್ರೀನಿ ಅವರು ಈ ಟೀಸರ್​ ಕಟ್ಟಿಕೊಟ್ಟಿದ್ದಾರೆ. ಹತ್ತಾರು ಗನ್​ ಹಿಡಿದು ಬರುವ ಗುಂಪನ್ನು ಶಿವಣ್ಣ ಕಣ್ಣಿನಲ್ಲೇ ಹೆದರಿಸುತ್ತಾರೆ. ಆಗ ಅವರು ಹೇಳುವ ಡೈಲಾಗ್​ ಕೂಡ ಖಡಕ್​ ಆಗಿದೆ. ಸದ್ಯ ಯೂಟ್ಯೂಬ್​ನಲ್ಲಿ ‘ಘೋಸ್ಟ್​’ ಸಿನಿಮಾದ (Ghost Kannada Movie) ‘ಬಿಗ್​ ಡ್ಯಾಡಿ’ ಟೀಸರ್​ ಧೂಳೆಬ್ಬಿಸುತ್ತಿದೆ.

ಅಂಡರ್​ವರ್ಲ್ಡ್​ ಕಥೆಯುಳ್ಳ ಸಿನಿಮಾಗಳು ಶಿವರಾಜ್​ಕುಮಾರ್​ ಅವರಿಗೆ ಹೊಸದೇನೂ ಅಲ್ಲ. ಆ ರೀತಿಯ ಹಲವು ಸಿನಿಮಾಗಳಲ್ಲಿ ಅವರು ನಟಿಸಿ ಯಶಸ್ಸು ಕಂಡಿದ್ದಾರೆ. ಹಾಗಿದ್ದರೂ ‘ಘೋಸ್ಟ್​’ ಸಿನಿಮಾ ವಿಶೇಷ ಎನಿಸಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್​ ಅವರು ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್​ ಗಮನ ಸೆಳೆಯುತ್ತಿದೆ. ತುಂಬ ರಗಡ್​ ಆಗಿ ಅವರು ಎಂಟ್ರಿ ನೀಡಿದ್ದಾರೆ. ಶಿವರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ‘ಬಿಗ್​ ಡ್ಯಾಡಿ’ ಟೀಸರ್​ ಸಖತ್​ ಇಷ್ಟ ಆಗಿದೆ.

‘ನೀವು ಗನ್​ನಲ್ಲಿ ಎಷ್ಟು ಜನರನ್ನು ಹೆದರಿಸಿದ್ದೀರೋ ಅದಕ್ಕಿಂತ ಜಾಸ್ತಿ ಜನರನ್ನ ನಾನು ಬರೀ ಕಣ್ಣಲ್ಲಿ ಹೆದರಿಸಿದ್ದೀನಿ. ಅವರು ನನ್ನ ಒ.ಜಿ. ಅಂತಾರೆ. ಒರಿಜಿನಲ್​ ಗ್ಯಾಂಗ್​ಸ್ಟರ್​’ ಎಂದು ಶಿವರಾಜ್​ಕುಮಾರ್​ ಅವರು ಭರ್ಜರಿಯಾಗಿ ಡೈಲಾಗ್ ಹೊಡೆದಿದ್ದಾರೆ. ಈ ಪಾತ್ರದಲ್ಲಿ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ವರ್ಷ ದಸರಾ ವೇಳೆಗೆ ‘ಘೋಸ್ಟ್​’ ಸಿನಿಮಾ ರಿಲೀಸ್​ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ’; ಹೇಗಿತ್ತು ನೋಡಿ ಶಿವರಾಜ್​ಕುಮಾರ್ ಮನೆ ಎದುರು ಬರ್ತ್​​ಡೇ ಸಂಭ್ರಮ

ಶಿವರಾಜ್​ಕುಮಾರ್​ ಅವರ ಹುಟ್ಟುಹಬ್ಬಕ್ಕೆ ಪರ್ಫೆಕ್ಟ್​ ಗಿಫ್ಟ್ ಆಗಿ ‘ಘೋಸ್ಟ್​’ ಸಿನಿಮಾದ ‘ಬಿಗ್​ ಡ್ಯಾಡಿ’ ಟೀಸರ್​ ಬಿಡುಗಡೆ ಆಗಿದೆ. ಈ ಟೀಸರ್​ನಲ್ಲಿ ಶಿವರಾಜ್​ಕುಮಾರ್​ ಅವರನ್ನು ನೋಡಿದ ಅಭಿಮಾನಿಗಳಿಗೆ ‘ಓಂ’ ಸಿನಿಮಾ ನೆನಪಾಗಿದೆ. ಒಟ್ಟಾರೆಯಾಗಿ ‘ಘೋಸ್ಟ್​’ ಚಿತ್ರ ಕೌತುಕ ಮೂಡಿಸಿದೆ. ‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್​ ಎನ್​. ಅವರು ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದತ್ತಣ್ಣ, ಅನುಪಮ್ ಖೇರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ಅಭಿಜಿತ್, ಜಯರಾಂ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ