34 ವರ್ಷದ ಬಳಿಕ ಮತ್ತೆ ಬರ್ತಿದ್ದಾನೆ ‘ಇನ್​ಸ್ಪೆಕ್ಟರ್ ವಿಕ್ರಂ’

Shiva Rajkumar: 34 ವರ್ಷದ ಬಳಿಕ ಶಿವರಾಜ್ ಕುಮಾರ್ ಮತ್ತೊಮ್ಮೆ ಇನ್​ಸ್ಪೆಕ್ಟರ್ ವಿಕ್ರಂ ಆಗುತ್ತಿದ್ದಾರೆ. ನಿರ್ದೇಶನ ಯಾರದ್ದು?

34 ವರ್ಷದ ಬಳಿಕ ಮತ್ತೆ ಬರ್ತಿದ್ದಾನೆ 'ಇನ್​ಸ್ಪೆಕ್ಟರ್ ವಿಕ್ರಂ'
ಇನ್​ಸ್ಪೆಕ್ಟರ್ ವಿಕ್ರಂ
Follow us
ಮಂಜುನಾಥ ಸಿ.
|

Updated on: Jul 12, 2023 | 3:55 PM

ಶಿವರಾಜ್ ಕುಮಾರ್ (Shiva Rajkumar) ಅವರ 61 ವರ್ಷದ ಹುಟ್ಟುಹಬ್ಬವನ್ನು (Birthday) ಇಂದು (ಜುಲೈ 12) ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವಯಸ್ಸಿನಲ್ಲೂ ಕನ್ನಡದ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್ ಆಗಿರುವ ಶಿವಣ್ಣ ಅವರ ನಟನೆಯ ಹಲವು ಸಿನಿಮಾಗಳ ಪೋಸ್ಟರ್, ಟೀಸರ್, ಲುಕ್, ಹೊಸ ಸಿನಿಮಾಗಳ ಘೋಷಣೆಗಳು ಇಂದು ಆಗಿವೆ. ಇದರ ನಡುವೆ ಹೆಚ್ಚು ಗಮನ ಸೆಳೆದಿರುವುದು ಶಿವಣ್ಣ 34 ವರ್ಷಗಳ ಹಿಂದೆ ಮಾಡಿದ್ದ ಸಿನಿಮಾದ ಮುಂದಿನ ಭಾಗ ಘೋಷಣೆ ಆಗಿರುವುದು.

1989 ರಲ್ಲಿ ಬಿಡುಗಡೆ ಆಗಿದ್ದ ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆವರೆಗೆ ನೋಡಿರದ ರೀತಿಯ ಫನ್ನಿ ಆದರೆ ಬುದ್ಧಿವಂತ ಇನ್​ಸ್ಪೆಕ್ಟರ್ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದರು. ಕನ್ನಡದಲ್ಲಿ ಈವರೆಗೆ ಬಂದಿರುವ ಪೊಲೀಸ್ ಸಿನಿಮಾಗಳಲ್ಲಿ ಭಿನ್ನವಾದ ಸಿನಿಮಾ ಇನ್​ಸ್ಪೆಕ್ಟರ್ ವಿಕ್ರಂ ಆಗಿದೆ. ಇದೇ ಸಿನಿಮಾವನ್ನು ಮೂಲವಾಗಿರಿಸಿಕೊಂಡು ಈಗ ಇನ್​ಸ್ಟೆಪ್ಟರ್ ವಿಕ್ರಂ ರಿಟರ್ನ್ಸ್ ಹೆಸರಿನ ಸಿನಿಮಾವನ್ನು ಘೋಷಿಸಲಾಗಿದೆ.

ಇದನ್ನೂ ಓದಿ:ಶಿವರಾಜ್ ಕುಮಾರ್​ ಸಿನಿಮಾಕ್ಕೆ ಬಾಲಿವುಡ್​ನಿಂದ ಬಂದ ನಟ: ಯಾರು ಈ ರಾಹುಲ್ ಭೋಸ್?

‘ಇನ್​ಸ್ಪೆಕ್ಟರ್ ವಿಕ್ರಂ ರಿಟರ್ನ್ಸ್​’ ಸಿನಿಮಾದ ಪೋಸ್ಟರ್ ಇಂದು ಶಿವಣ್ಣನ ಹುಟ್ಟುಹಬ್ಬದ ಸಂದರ್ಭ ಬಿಡುಗಡೆ ಆಗಿದೆ. ಪೆನ್ಸಿಲ್​ನಲ್ಲಿ ಶಿವಣ್ಣನ ಸ್ಕೆಚ್ ಬಿಡಿಸಿರುವ ಮಾದರಿಯ ಪೋಸ್ಟರ್ ಇದಾಗಿದ್ದು ಪೋಸ್ಟರ್​ನಲ್ಲಿ ಪೊಲೀಸ್ ಸಮವಸ್ತ್ರದ ಮೇಲಿನ ಸ್ಟಾರ್​ಗಳು, ಹೊಗೆಯಾಡುತ್ತಿರುವ ಬಂದೂಕು, ಗುಂಡುಗಳು ಸಹ ಇವೆ. ಒಟ್ಟಾರೆ ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದ್ದು, 1989ರ ಇನ್​ಸ್ಪೆಕ್ಟರ್ ವಿಕ್ರಂ ರೀತಿಯಲ್ಲಿ ಹಾಸ್ಯ ಮೂಲವಾಗಿರುತ್ತದೆಯೋ ಅಥವಾ ಮಾಸ್ ಎಲಿಮೆಂಟ್​ಗಳನ್ನೇ ಮುಖ್ಯವಾಗಿರಿಸಿಕೊಂಡು ನಿರ್ದೇಶಕರು ಕತೆ ಹೇಳಲಿದ್ದಾರೆಯೋ ಕಾದು ನೋಡಬೇಕಿದೆ.

‘ಇನ್​ಸ್ಪೆಕ್ಟರ್ ವಿಕ್ರಂ ರಿಟರ್ನ್ಸ್​’ ಸಿನಿಮಾವನ್ನು ಲಕ್ಕಿ ಗೋಪಾಲ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಮೈಲಾರಿ ಎಂ. ಈ ಸಿನಿಮಾದ ಇತರೆ ಪಾತ್ರವರ್ಗ ಇನ್ನಷ್ಟೆ ಘೋಷಣೆ ಆಗಬೇಕಿದೆ. ‘ಇನ್​ಸ್ಪೆಕ್ಟರ್ ವಿಕ್ರಂ’ ಹೆಸರಿನಲ್ಲಿ 2021 ರಲ್ಲಿ ಒಂದು ಸಿನಿಮಾ ಈಗಾಗಲೇ ಬಂದಿದೆ. ಆ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿದ್ದರು, ಸಿನಿಮಾಕ್ಕೆ ಭಾವನಾ ನಾಯಕಿ. ಈ ಸಿನಿಮಾ ಸಹ ಶಿವರಾಜ್​ಕುಮಾರ್ ಅವರ 1989ರ ಇನ್​ಸ್ಪೆಕ್ಟರ್ ಸಿನಿಮಾವೇ ಸ್ಪೂರ್ತಿಯಾಗಿತ್ತು. ಆದರೆ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಹೆಚ್ಚಿನ ಕರಾಮತ್ತು ಮಾಡಲಿಲ್ಲ.

1989ರ ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಚಿ ಗುರುದತ್, ಕೆಎಸ್ ಅಶ್ವತ್ಥ್, ಅಪರ್ಣಾ, ಕಾವ್ಯಾ, ಸುಂದರ್ ಕೃಷ್ಣ ಅರಸ್, ಹೊನ್ನವಳ್ಳಿ ಕೃಷ್ಣ, ಅವಿನಾಶ್ ಇನ್ನಿತರರು ನಟಿಸಿದ್ದರು. ಸಿನಿಮಾಕ್ಕೆ ವಿಜಯ್ ಆನಂದ್ ಸಂಗೀತ ನೀಡಿದ್ದರು. ಈ ಸಿನಿಮಾ ಬಿಡುಗಡೆ ಆದಾಗ ಭಾರಿ ದೊಡ್ಡ ಹಿಟ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?