Shivarajkumar Birthday: ಶಿವರಾಜ್​ಕುಮಾರ್​ಗೆ 61ನೇ ವರ್ಷದ ಬರ್ತ್​ಡೇ; ಮಧ್ಯರಾತ್ರಿಯಿಂದಲೇ ಮುಗಿಲುಮುಟ್ಟಿದ ಸಂಭ್ರಮ

ಜುಲೈ 11ರ ರಾತ್ರಿಯೇ ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣನ ಮನೆ ಬಳಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Shivarajkumar Birthday: ಶಿವರಾಜ್​ಕುಮಾರ್​ಗೆ 61ನೇ ವರ್ಷದ ಬರ್ತ್​ಡೇ; ಮಧ್ಯರಾತ್ರಿಯಿಂದಲೇ ಮುಗಿಲುಮುಟ್ಟಿದ ಸಂಭ್ರಮ
ಶಿವರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Jul 12, 2023 | 7:11 AM

ಶಿವರಾಜ್​ಕುಮಾರ್ (Shivarajkumar) ಅವರು ಇಂದು (ಜುಲೈ 12) 61ನೇ ವರ್ಷದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ವಿಶ್​ ಬರುತ್ತಿದೆ. ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಶಿವರಾಜ್​ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಅವರ ನಟನೆಯ ಸಿನಿಮಾ ತಂಡದಿಂದ ಪೋಸ್ಟರ್, ಟೀಸರ್ ರಿಲೀಸ್ ಮಾಡೋಕೆ ಸಿದ್ಧತೆ ನಡೆದಿದೆ. ಜುಲೈ11ರ ಮಧ್ಯರಾತ್ರಿ ಶಿವರಾಜ್​ಕುಮಾರ್ ಅವರ ಮನೆಯ ಮುಂದೆ ಸಂಭ್ರಮ ಮುಗಿಲುಮುಟ್ಟಿತ್ತು.

ಶಿವರಾಜ್​ಕುಮಾರ್ ಅವರು ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಬ್ಯುಸಿ ಆಗಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಹಾಗೂ ‘ಜೈಲರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಿಂದ ಪೋಸ್ಟರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಇಂದು ಬೆಳಗ್ಗೆ 11:45ಕ್ಕೆ ‘ಘೋಸ್ಟ್​’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್​ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಅವರ ನಟನೆಯ ಇನ್ನೂ ಕೆಲವು ಸಿನಿಮಾಗಳ ತಂಡದಿಂದ ಹೊಸ ಅಪ್​ಡೇಟ್ ಸಿಗೋ ಸಾಧ್ಯತೆ ಇದೆ.

ಜುಲೈ 11ರ ರಾತ್ರಿಯೇ ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣನ ಮನೆ ಬಳಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಂದು ಬೆಳಗ್ಗೆ ಫ್ಯಾನ್ಸ್ ಜೊತೆ ಶಿವಣ್ಣ ಕೇಕ್ ಕತ್ತರಿಸಲಿದ್ದಾರೆ. ಇದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಅಭಿಮಾನಿಗಳ ಜೊತೆ ಶಿವಣ್ಣ ಡಾ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್​​ಕುಮಾರ್ ಸಮಾಧಿ ಸ್ಥಳಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ.

ಬಳಿಕ ಬೆಂಗಳೂರಿನ ಸಂತೋಷ್ ಚಿತ್ರಮಂದಿರಕ್ಕೆ ಶಿವರಾಜ್​ಕುಮಾರ್ ಭೇಟಿ ನೀಡಲಿದ್ದಾರೆ. ಅಲ್ಲಿ ‘ಘೋಸ್ಟ್’ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಚಿತ್ರತಂಡದೊಂದಿಗೆ ಅವರು ಮತ್ತೊಮ್ಮೆ ಕೇಕ್ ಕತ್ತರಿಸಲಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ಶಿವರಾಜ್​ಕುಮಾರ್ ಅವರ ಹೆಸರಿನಲ್ಲಿ ರಕ್ತದಾನ, ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಜನ್ಮದಿನಕ್ಕಾಗಿ ಗುಡ್​ ನ್ಯೂಸ್​ ನೀಡಿದ ‘ಘೋಸ್ಟ್​’; ಈ ಬಾರಿಯ ಆಚರಣೆ ‘ಬಿಗ್​ ಡ್ಯಾಡಿ’ ಜೊತೆ

ಶಿವರಾಜ್​ಕುಮಾರ್ ಅವರ ಜನ್ಮದಿನವನ್ನು ಫ್ಯಾನ್ಸ್ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವರಾಜ್​ಕುಮಾರ್ ಕೂಡ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ವಯಸ್ಸು 61 ಆದರೂ ಇನ್ನೂ ನವ ಯುವಕರನ್ನು ನಾಚಿಸುವಂತೆ ಇದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ. ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್