AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಧನ್ವೀರ್ ವಿರುದ್ಧ ಎರಡು ಎಫ್​​ಐಆರ್ ದಾಖಲು

ವಿಜಯಲಕ್ಷ್ಮಿ ಮತ್ತು ದರ್ಶನ್ ಅವರಿಗೆ ಆಪ್ತರಾಗಿರುವ ನಾಗರಾಜು, ಬೋಜರಾಜು, ಹಾಗೂ ಇನ್ನೂ ಕೆಲವರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಠಾಣೆಗಳಲ್ಲಿ ದೂರುಗಳನ್ನು ದಾಖಲು ಮಾಡಿದ್ದರು. ನಾಲ್ಕೂ ಕಡೆ ಎನ್​​ಸಿಆರ್ ಮಾತ್ರವೇ ದಾಖಲು ಮಾಡಲಾಗಿತ್ತು. ಆದರೆ ಇದೀಗ ಅವುಗಳಲ್ಲಿ ಎರಡು ಪ್ರಕರಣಗಳಲ್ಲಿ ಧನ್ವೀರ್ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಇನ್ನೂ ಒಂದು ಪ್ರಕರಣದಲ್ಲಿಯೂ ಎಫ್​​ಐಆರ್ ದಾಖಲಾಗುವ ಸಾಧ್ಯತೆ ಇದೆ.

ನಟ ಧನ್ವೀರ್ ವಿರುದ್ಧ ಎರಡು ಎಫ್​​ಐಆರ್ ದಾಖಲು
Dhanveer Gowda
ಮಂಜುನಾಥ ಸಿ.
|

Updated on: Oct 29, 2026 | 11:34 AM

Share

ಮುಖ್ಯಾಂಶಗಳು

  • ನಟ ಧನ್ವೀರ್ ಗೌಡ ವಿರುದ್ಧ ಎಫ್​​ಐಆರ್ ದಾಖಲು
  • ಆರ್​ಆರ್ ನಗರ ಮತ್ತು ಬಸವೇಶ್ವರ ನಗರ ಠಾಣೆಯಲ್ಲಿ ದೂರು
  • ಧನ್ವೀರ್ ವಿರುದ್ಧ ಇನ್ನೂ ಎರಡು ಎಫ್​ಐಆರ್ ದಾಖಲಾಗುವ ಸಾಧ್ಯತೆ

ನಟ ಧನ್ವೀರ್ ಗೌಡ ವಿರುದ್ಧ ಕಳೆದ ಕೆಲ ದಿನಗಳಲ್ಲಿ ನಾಲ್ಕು ದೂರುಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ವಿಜಯಲಕ್ಷ್ಮಿ ಮತ್ತು ದರ್ಶನ್ ಅವರಿಗೆ ಆಪ್ತರಾಗಿರುವ ನಾಗರಾಜು, ಬೋಜರಾಜು, ಹಾಗೂ ಇನ್ನೂ ಕೆಲವರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಠಾಣೆಗಳಲ್ಲಿ ದೂರುಗಳನ್ನು ದಾಖಲು ಮಾಡಿದ್ದರು. ನಾಲ್ಕೂ ಕಡೆ ಎನ್​​ಸಿಆರ್ ಮಾತ್ರವೇ ದಾಖಲು ಮಾಡಲಾಗಿತ್ತು. ಆದರೆ ಇದೀಗ ಅವುಗಳಲ್ಲಿ ಎರಡು ಪ್ರಕರಣಗಳಲ್ಲಿ ಧನ್ವೀರ್ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಇನ್ನೂ ಒಂದು ಪ್ರಕರಣದಲ್ಲಿಯೂ ಎಫ್​​ಐಆರ್ ದಾಖಲಾಗುವ ಸಾಧ್ಯತೆ ಇದೆ.

ಧನ್ವೀರ್ ವಿರುದ್ಧ ಮೊದಲಿಗೆ ದರ್ಶನ್ ಪಿಎ ನಾಗರಾಜು, ರಾಜರಾಜೇಶ್ವರಿ ನಗರದಲ್ಲಿ ದೂರು ದಾಖಲು ಮಾಡಿದ್ದರು. ಧನ್ವೀರ್ ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ಕೆಟ್ಟದಾಗಿ ಸಂದೇಶಗಳನ್ನು ಕಳಿಸಿದ್ದಾರೆಂದು ದೂರು ದಾಖಲಿಸಿದ್ದರು. ಇದೀಗ ಆರ್​​ಆರ್ ನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ಎಫ್​​ಐಆರ್ ದಾಖಲಿಸಲಾಗಿದೆ.

ಅದಾದ ಬಳಿಕ ನಾಗರಾಜು ಅವರ ಗೆಳೆಯರೇ ಆಗಿರುವ ಬೋಜರಾಜು ಸಹ ಧನ್ವೀರ್ ವಿರುದ್ಧ ಬೆದರಿಕೆ ಆರೋಪ ಮಾಡಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧನ್ವೀರ್ ತಮಗೆ ಬೆದರಿಕೆ ಹಾಕಿದ್ದಾಗಿ ಆರೋಪ ಮಾಡಿದ್ದ ಬೋಜರಾಜು, ಬೆದರಿಕೆಗೆ ಸಂಬಂಧಿಸಿದಂತೆ ಕಾಲ್ ರೆಕಾರ್ಡಿಂಗ್​​ಗಳನ್ನು ಪೊಲೀಸರಿಗೆ ನೀಡಿದ್ದರು. ಇದೀಗ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲೂ ಸಹ ಧನ್ವೀರ್ ವಿರುದ್ಧ ಎಫ್​​ಐಆರ್ ದಾಖಲಾಗಿದೆ.ಭೋಜರಾಜು ದೂರು ಆಧರಿಸಿ FIR BNS ಸೆಕ್ಷನ್ 351(2), 352ರ ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ಧನ್ವೀರ್ ಗೌಡ ವಿರುದ್ಧ ಪ್ರತಿಭಟನೆ, ಆನ್​​ಲೈನ್​​ನಲ್ಲೂ ಆಕ್ರೋಶ

ಇದರ ಜೊತೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲೂ ಸಹ ಧನ್ವೀರ್ ವಿರುದ್ಧ ದೂರು ದಾಖಲಾಗಿತ್ತು. ಧನ್ವೀರ್ ತಮ್ಮಿಂದ ಹಣ ಮತ್ತು ಕಾರು ತೆಗೆದುಕೊಂಡಿದ್ದು, ಮರಳಿ ಕೇಳಿದ್ದಕ್ಕೆ ದಬ್ಬಾಳಿಕೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿ ಸಹ ಎಫ್​​ಐಆರ್ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆರ್​​ಆರ್ ನಗರ ಪೊಲೀಸರು ಮತ್ತು ಬಸವೇಶ್ವರ ನಗರ ಪೊಲೀಸರು ಧನ್ವೀರ್​​ಗೆ ನೊಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದರ ಜೊತೆಗೆ ವೈರಲ್ ಆಗಿರುವ ಧನ್ವೀರ್ ಅವರದ್ದು ಎನ್ನಲಾದ ಆಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದು, ಹತ್ತು ಕೋಟಿ ಹಣದ ಬಗ್ಗೆಯೂ ತನಿಖೆ ನಡೆಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More