ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಕನ್ನಡ ಚಿತ್ರೋದ್ಯಮದಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ಚಿತ್ರ ವಿತರಣೆ ಮಾಡಿದ್ದೇನೆ. ಹಾಗಾಗಿ ಕನ್ನಡ ಚಿತ್ರೋದ್ಯಮಕ್ಕೆ ಸೇರಿದವನೇ ಎಂದು ಮಾತು ಆರಂಭಿಸಿದ ಪ್ರಶಾಂತ್ ಸಂಬರಗಿ ನಾನು ಫಿಲ್ಮ್ ಚೇಂಬರ್‌ಗೆ ಸದಸ್ಯನಾಗಿಲ್ಲ, ಆಗೋದು ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಟಾಂಗ್ ಕೊಟ್ಟಿದ್ದಾರೆ.
ನಾನು ಚಿತ್ರೋದ್ಯಮಿ ಅಲ್ಲಾ ಅಂತಾ ಸಾ.ರಾ.ಗೋವಿಂದು ನನ್ನನ್ನು ಪ್ರಶ್ನೆ ಮಾಡುತ್ತಾರೆ. ನಾನು ನನ್ನ ವೈಯಕ್ತಿಕ ಬೆಳವಣಿಗೆಗೂ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗಕ್ಕಾಗಿಯೂ ಕೆಲಸ ಮಾಡಿದ್ದೇನೆ ಎಂದು ಸಂಬರಗಿ ಹೇಳಿದರು.
‘ಬಾಹುಬಲಿ-2 ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ… ಯಾಕೆ?’
ನಾನು ಹಲವು ಕನ್ನಡ ಚಿತ್ರಗಳಲ್ಲಿ ಪಾರ್ಟ್‌ನರ್ ಆಗಿದ್ದೇನೆ. ಸಾ.ರಾ.ಗೋವಿಂದು ನನ್ನ ವಿರುದ್ಧ ಯಾವಾಗ್ಲೂ ಆರೋಪಿಸ್ತಾರೆ. ‘ಬಾಹುಬಲಿ’ ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ.. ಯಾಕೆ? ರಾಜ್ಯದಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಬಿಡಲ್ಲ ಎಂದು ಹೇಳಿದ್ದರು.
ಈ ವಿಚಾರವಾಗಿ ನಾನು ಸಾ.ರಾ.ಗೋವಿಂದು ಬಳಿ ಹೇಳಿದ್ದೆ. ಬಾಹುಬಲಿ-1 ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ರೀ ಆದರೆ ಈಗ ಬಾಹುಬಲಿ-2 ಚಿತ್ರ ಬಿಡುಗಡೆಗೆ ಏಕೆ ಅನುಮತಿ ನೀಡಲ್ಲ? ಬಾಹುಬಲಿ ಚಿತ್ರ ಅಂತಾರಾಷ್ಟ್ರೀಯ ಚಿತ್ರವಾಗಿದೆ ಎಂದಿದ್ದೆ. ಅದಕ್ಕೆ, ಆಗ ಅವರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಅಲ್ಲಿಂದ ನಮ್ಮ ಮಧ್ಯೆ ಮನಸ್ತಾಪ ಶುರುವಾಗಿದ್ದು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಸಂಜನಾ ಬಗ್ಗೆ ನನ್ನ ಬಾಯಿಂದ ಹೇಳಿ ಗಲೀಜು ಮಾಡಿಕೊಳ್ಳಲ್ಲ. ಸಂಜನಾ ಯಾವ ಮಟ್ಟದಲ್ಲಿ ಇದ್ದಾರೆಂದು ಇಂಡಸ್ಟ್ರಿಗೆ ಗೊತ್ತು. ಅವರ ಬಗ್ಗೆ ನಾನೇಕೆ ಮಾತನಾಡಲಿ ಎಂದ ಪ್ರಶಾಂತ್ ಜೊತೆಗೆ, ರಾಗಿಣಿ ಏನು ಘಮ್ ಘಮ್ ಅಂತಾ ನಾರುತ್ತಿದ್ದಾಳಾ? ಅಂತಾ ಖಾರವಾಗಿ ಪ್ರಶ್ನಿಸಿದ್ದಾರೆ.
ನಾನು ದೊಡ್ಡ ದೊಡ್ಡ ಕೆಲಸ ಮಾಡುವುದಕ್ಕೆ ಆಗಿಲ್ಲ. ನಾನು ಇಂಡಸ್ಟ್ರಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.