ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಿದರು. ಜೊತೆಗೆ, ಸುದ್ದಿಗೋಷ್ಠಿ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಲಿಖಿತ ದೂರು ನೀಡ್ತೇನೆ ಎಂದು ಹೇಳಿದರು.
ಫಿಲ್ಮ್ ಚೇಂಬರ್ ವಿರುದ್ಧ ಸಂಬರಗಿ ಕಿಡಿಕಿಡಿ..
ಇಂದ್ರಜಿತ್ ಲಂಕೇಶ್ 2006ರಲ್ಲಿ ಐಶ್ವರ್ಯಾ ಚಿತ್ರ ಮಾಡಿದ್ದ. ಆ ಚಿತ್ರದಲ್ಲಿ ನಾನು ಪಾರ್ಟ್‌ನರ್ ಆಗಿದ್ದೆ. ಚಿತ್ರರಂಗಕ್ಕೆ ನನ್ನ ಕೊಡುಗೆ ಏನೆಂದು ಕೇಳಿದವರಿಗೆ ಗೂಗಲ್ನಲ್ಲಿ ಹುಡುಕಿದರೆ ಸಾಕು ನನ್ನ ಕೊಡುಗೆ ಗೊತ್ತಾಗುತ್ತದೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.