‘ಪ್ರೇಮದ ಊರಲಿ’ ಸಿನಿಮಾ ಧಮಾಕಾ; 8 ನೇ ದಿನದ ಕಲೆಕ್ಷನ್‌ನಲ್ಲಿ ಭಾರಿ ಜಿಗಿತ

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಬೆಂಬಲದೊಂದಿಗೆ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸತತ ಮುನ್ನಡೆ ಸಾಧಿಸುತ್ತಿದೆ. ಗಾಂಧಿ ಜಯಂತಿಯಂದು 3.46 ಕೋಟಿ ರೂಪಾಯಿ ಗಳಿಸುವ ಮೂಲಕ ಒಟ್ಟು 9.82 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ವೀಕೆಂಡ್‌ನಲ್ಲಿ ಚಿತ್ರವು 10 ಕೋಟಿ ರೂಪಾಯಿಗಳ ಬೃಹತ್ ಮೈಲಿಗಲ್ಲನ್ನು ದಾಟುವ ನಿರೀಕ್ಷೆಯಿದೆ.

ಪ್ರೇಮದ ಊರಲಿ’ ಸಿನಿಮಾ ಧಮಾಕಾ; 8 ನೇ ದಿನದ ಕಲೆಕ್ಷನ್‌ನಲ್ಲಿ ಭಾರಿ ಜಿಗಿತ
ಪ್ರೇಮದ ಊರಲಿ

Updated on: Oct 03, 2026 | 7:47 AM

ಮುಖ್ಯಾಂಶಗಳು

  • ಗಾಂಧಿ ಜಯಂತಿಯಂದು 'ಪ್ರೇಮದ ಊರಲಿ' ಭರ್ಜರಿ ಕಲೆಕ್ಷನ್
  • ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ
  • 13 ಲಕ್ಷದಿಂದ 9.82 ಕೋಟಿಗೆ ಜಂಪ್

ಚಿತ್ರಮಂದಿರಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಮುನ್ನುಗ್ಗುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ. ಪ್ರದರ್ಶನ ಆರಂಭವಾದ ಮೊದಲ ದಿನದಿಂದಲೇ ಹಂತ ಹಂತವಾಗಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿದ್ದ ಈ ಚಿತ್ರ, ಗಾಂಧಿ ಜಯಂತಿ ರಜಾದಿನದ ಲಾಭವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿದೆ.

ವಿಶ್ವಾದ್ಯಂತ ಒಟ್ಟು 2,190 ಪ್ರದರ್ಶನಗಳನ್ನು ಕಂಡು ಬೃಹತ್ ಯಶಸ್ಸು ಸಾಧಿಸಿರುವ ಈ ಸಿನಿಮಾ, ಇದುವರೆಗೆ 9.82 ಕೋಟಿ ರೂಪಾಯಿ ಗ್ರಾಸ್ ಹಾಗೂ 8.59 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ 10 ಕೋಟಿ ರೂಪಾಯಿ ಸಮೀಪದಲ್ಲಿದೆ. ವಿಶೇಷವೆಂದರೆ, ಭಾರತದಲ್ಲೇ 9.82 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಕಂಡಿದ್ದು, ದೇಶೀಯ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಮೊದಲ ದಿನ (ಸೆಪ್ಟೆಂಬರ್ 25) ಕೇವಲ 13 ಲಕ್ಷ ರೂಪಾಯಿ ಕಲೆಕ್ಷನ್‌ನೊಂದಿಗೆ ಸಾಧಾರಣ ಆರಂಭ ಕಂಡಿದ್ದ ಈ ಸಿನಿಮಾ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಾಗಿ ವಾರದ ದಿನಗಳಲ್ಲೂ ಸತತ ಏರಿಕೆ ಕಾಣುತ್ತಾ ಬಂದಿತ್ತು. ಸೆಪ್ಟೆಂಬರ್ 29 ಮಂಗಳವಾರ 1.09 ಕೋಟಿ ರೂಪಾಯಿ, ಸೆಪ್ಟೆಂಬರ್ 30 ಬುಧವಾರ 1.28 ಕೋಟಿ ರೂಪಾಯಿ ಹಾಗೂ ಅಕ್ಟೋಬರ್ 1 ಗುರುವಾರ 1.86 ಕೋಟಿ ರೈಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ಅಲ್ಲಿ ಪಾರುಪತ್ಯ ಸಾಧಿಸಿತ್ತು.

ಅಕ್ಟೋಬರ್ 2 ರ ಗಾಂಧಿ ಜಯಂತಿಯ ಸಾರ್ವಜನಿಕ ರಜಾದಿನವು ಚಿತ್ರತಂಡದ ಪಾಲಿಗೆ ಬಂಪರ್ ಕೊಡುಗೆಯಾಗಿ ಪರಿಣಮಿಸಿತು. ರಜೆಯ ಲಾಭವನ್ನು ಸಿನಿಮಾ ಸಂಪೂರ್ಣವಾಗಿ ಪಡೆದುಕೊಂಡಿದ್ದು, 8 ನೇ ದಿನ ಬರೋಬ್ಬರಿ 3.46 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದೆ. ಶೇ. 82 ರಷ್ಟು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಚಿತ್ರಮಂದಿರಗಳತ್ತ ಜನಸಾಗರವೇ ಹರಿದುಬಂದಿದೆ.

ಇದನ್ನೂ ಓದಿ: ‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ್ ಮಾತು

ಶುಕ್ರವಾರದ ರಜಾದಿನದಲ್ಲಿ ಸಿಕ್ಕ ಈ ಅಭೂತಪೂರ್ವ ಬೆಂಬಲದ ನಂತರ, ಇದೀಗ ಶನಿವಾರ ಮತ್ತು ಭಾನುವಾರದ ವೀಕೆಂಡ್ ಆರಂಭವಾಗುತ್ತಿದ್ದು, ಇಂದು ಮತ್ತು ನಾಳೆ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಹೌಸ್‌ಫುಲ್ ಶೋಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ವೀಕೆಂಡ್‌ನಲ್ಲಿ ‘ಪ್ರೇಮದ ಊರಲಿ’ ಚಿತ್ರವು ಸುಲಭವಾಗಿ ಬೃಹತ್ ಮೈಲಿಗಲ್ಲನ್ನು ದಾಟಲಿದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಹಾಗೂ ವಿತರಕರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us