‘ಬೃಂದಾವಿಹಾರಿ’ ಸಿನಿಮಾಕ್ಕೆ ಬೆಂಬಲ ನೀಡಿದ ‘ಪ್ರೇಮದ ಊರಲಿ’ ತಂಡ

‘ಪ್ರೇಮದ ಊರಲಿ’ ಸಿನಿಮಾ ತಂಡ ‘ಬೃಂದಾವಿಹಾರಿ’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಗಣೇಶ್ ನಟನೆಯ ‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಬೇಕಿತ್ತು. ಆಗ ‘ಪ್ರೇಮದ ಊರಲಿ’ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿತ್ತು. ಆ ಸಿನಿಮಾಕ್ಕೆ ತೊಂದರೆ ಕೊಡಬಾರದೆಂದು ಚಿತ್ರತಂಡವು ಸಿನಿಮಾ ಬಿಡುಗಡೆಯನ್ನು ಮುಂದೂಡಿತ್ತು. ಅದೇ ಕಾರಣಕ್ಕೆ ಈಗ ‘ಪ್ರೇಮದ ಊರಲಿ’ ತಂಡ ‘ಬೃಂದಾವಿಹಾರಿ’ಯ ಬೆಂಬಲಕ್ಕೆ ನಿಂತಿದೆ.

‘ಬೃಂದಾವಿಹಾರಿ’ ಸಿನಿಮಾಕ್ಕೆ ಬೆಂಬಲ ನೀಡಿದ ‘ಪ್ರೇಮದ ಊರಲಿ’ ತಂಡ
Premada Oorali Brindavihari

Updated on: Nov 11, 2026 | 7:22 PM

ಮುಖ್ಯಾಂಶಗಳು

  • ಬೃಂದಾವಿಹಾರಿ ಸಿನಿಮಾ ರಿಲೀಸ್ ಆಗಲಿದೆ
  • ಸಿನಿಮಾಕ್ಕೆ ‘ಪ್ರೇಮದ ಊರಲಿ’ ಬೆಂಬಲ
  • ‘ಬೃಂದಾವಿಹಾರಿ’ ಸಿನಿಮಾ ಶೀಘ್ರ ರಿಲೀಸ್

ಗಣೇಶ್ ನಟನೆಯ ‘ಬೃಂದಾವಿಹಾರಿ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಗಣೇಶ್ ಹಾಗೂ ಚಿತ್ರತಂಡದ ಇತರರು ಸಿನಿಮಾದ ಪ್ರಚಾರ ಆರಂಭಿಸಿದ್ದಾರೆ. ಇದರ ನಡುವೆ ಬ್ಲಾಕ್ ಬಸ್ಟರ್ ಎನಿಸಿಕೊಂಡಿರುವ ‘ಪ್ರೇಮದ ಊರಲಿ’ ಸಿನಿಮಾ ತಂಡ ‘ಬೃಂದಾವಿಹಾರಿ’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಗಣೇಶ್ ನಟನೆಯ ‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಬೇಕಿತ್ತು. ಆಗ ‘ಪ್ರೇಮದ ಊರಲಿ’ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿತ್ತು. ಆ ಸಿನಿಮಾಕ್ಕೆ ತೊಂದರೆ ಕೊಡಬಾರದೆಂದು ಚಿತ್ರತಂಡವು ಸಿನಿಮಾ ಬಿಡುಗಡೆಯನ್ನು ಮುಂದೂಡಿತ್ತು. ಅದೇ ಕಾರಣಕ್ಕೆ ಈಗ ‘ಪ್ರೇಮದ ಊರಲಿ’ ತಂಡ ‘ಬೃಂದಾವಿಹಾರಿ’ಯ ಬೆಂಬಲಕ್ಕೆ ನಿಂತಿದೆ.

‘ಬೃಂದಾವಿಹಾರಿ’ ಸಿನಿಮಾದ ಕಾರ್ಯಕ್ರಮದಲ್ಲಿ ‘ಪ್ರೇಮದ ಊರಲಿ’ ಚಿತ್ರತಂಡ ಭಾಗಿ ಆಗಲಿದೆ. ಆ ಮೂಲಕ ಸಿನಿಮಾಕ್ಕೆ ಪ್ರಚಾರ ನೀಡಲಿದೆ. ‘ಪ್ರೇಮದ ಊರಲಿ’ ಸಿನಿಮಾನಲ್ಲಿ ನಟಿಸಿರುವ ಪಾತ್ರವರ್ಗ, ಸಿನಿಮಾದ ತಂತ್ರಜ್ಞರುಗಳು ಸಹ ‘ಬೃಂದಾವಿಹಾರಿ’ ಸಿನಿಮಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ‘ಬೃಂದಾವಿಹಾರಿ’ ಸಿನಿಮಾಕ್ಕೆ ಶುಭಾಶಯಗಳನ್ನು ಕೋರಲಿದ್ದಾರೆ.

Loading...

‘ಬೃಂದಾವಿಹಾರಿ’ ಹೆಸರೇ ಸೂಚಿಸುವಂತೆ ಕೌಟುಂಬಿಕ ಕತೆಯನ್ನು ಒಳಗೊಂಡ ಸಿನಿಮಾ ಆಗಿದ್ದು, ಈ ಸಿನಿಮಾ ಅಕ್ಟೋಬರ್ 16ರಂದೇ ರಿಲೀಸ್ ಆಗಬೇಕಿತ್ತು. ಆದರೆ ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬೆಂಬಲ ನೀಡುವ ಕಾರಣಕ್ಕೆ ನವೆಂಬರ್ 20ಕ್ಕೆ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಗಿತ್ತು. ಈಗ ಸಿನಿಮಾ ಬಿಡುಗಡೆಗೆ 9 ದಿನಗಳಷ್ಟೆ ಬಾಕಿ ಇದ್ದು, ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ಭಾಗಿ ಆಗಿದೆ.

ಇದನ್ನೂ ಓದಿ:‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?

‘ಬೃಂದಾವಿಹಾರಿ’ ಸಿನಿಮಾದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲಾಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಆದರೆ ಅದೆಲ್ಲ ಗಾಳಿ ಸುದ್ದಿಯನ್ನು ತಳ್ಳಿ ಹಾಕಿರುವ ನಟ ಗಣೇಶ್, ‘ನವೆಂಬರ್ 20ಕ್ಕೆ ಸಿನಿಮಾ ರಿಲೀಸ್ ಆಗಲಿದೆ’ ಎಂದಿದ್ದಾರೆ. ‘ಬೃಂದಾವಿಹಾರಿ’ ಸಿನಿಮಾನಲ್ಲಿ ಮಾಧವ ಎಂಬ ಯುವಕನ ಪಾತ್ರದಲ್ಲಿ ಗಣೇಶ್ ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಗಣೇಶ್ ಅವರ ಈ ಹಿಂದಿನ ಸೂಪರ್ ಹಿಟ್ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ಇದೇ ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದರು. ಸಿನಿಮಾನಲ್ಲಿ ಗಣೇಶ್ ಜೊತೆಗೆ ದೇವಿಕಾ ಭಟ್, ಮಾಳವಿಕಾ ಶರ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us