‘ಪ್ರೇಮದ ಊರಲಿ’ ಎಫೆಕ್ಟ್ ‘ಬೃಂದಾವಿಹಾರಿ’ ಸಿನಿಮಾ ರಿಲೀಸ್ ಮುಂದೂಡಿಕೆ
‘ಬೃಂದಾವಿಹಾರಿ’ ಸಿನಿಮಾದ ಮುಂದಿನ ವಾರ ರಿಲೀಸ್ ಆಗಬೇಕಿತ್ತು. ಸಿನಿಮಾದ ಬಿಡುಗಡೆ ಅಕ್ಟೋಬರ್ 16ಕ್ಕೆ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಣೆ ಮಾಡಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಗಿದೆ. ಈ ಹಠಾತ್ ಬದಲಾವಣೆಗೆ ‘ಪ್ರೇಮದ ಊರಲಿ’ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ನೀಡುತ್ತಿರುವ ಅದ್ಭುತ ಪ್ರದರ್ಶನ ಕಾರಣ ಎನ್ನಲಾಗುತ್ತಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟ, ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾದ ಮುಂದಿನ ವಾರ ರಿಲೀಸ್ ಆಗಬೇಕಿತ್ತು. ಸಿನಿಮಾದ ಬಿಡುಗಡೆ ಅಕ್ಟೋಬರ್ 16ಕ್ಕೆ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಣೆ ಮಾಡಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಗಿದೆ. ಈ ಹಠಾತ್ ಬದಲಾವಣೆಗೆ ‘ಪ್ರೇಮದ ಊರಲಿ’ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ನೀಡುತ್ತಿರುವ ಅದ್ಭುತ ಪ್ರದರ್ಶನ ಕಾರಣ ಎನ್ನಲಾಗುತ್ತಿದೆ.
ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಲಾಂಚ್ ಅಡಿಯಲ್ಲಿ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ ‘ಬೃಂದಾವಿಹಾರಿ’ ಸಿನಿಮಾ ಅನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದು ಈ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಬೇಕಿತ್ತು, ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ನವೆಂಬರ್ ತಿಂಗಳಿಗೆ ಮುಂದೂಡಲಾಗಿದೆ.
‘ಪ್ರೇಮದ ಊರಲಿ’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಒಂದು ವೇಳೆ ಅಕ್ಟೋಬರ್ 16 ರಂದೇ ‘ಬೃಂದಾವಿಹಾರಿ’ ಬಿಡುಗಡೆಯಾದರೆ ಥಿಯೇಟರ್‌ಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ, ಜೊತೆಗೆ ‘ಬೃಂದಾವಿಹಾರಿ’ ಮತ್ತು ‘ಪ್ರೇಮದ ಊರಲಿ’ ಸಿನಿಮಾಗಳು ಬಹುತೇಕ ಒಂದೇ ಜಾನರ್ನ ಸಿನಿಮಾ ಆಗಿರುವ ಕಾರಣ ಪರಸ್ಪರ ಪೈಪೋಟಿ ಉಂಟಾಗಬಹುದು ಎಂಬ ಕಾಳಜಿ ಚಿತ್ರತಂಡಕ್ಕಿದೆ. ಕನ್ನಡದ ಮತ್ತೊಂದು ಸಿನಿಮಾ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಇಡೀ ಚಿತ್ರರಂಗಕ್ಕೂ ಹಾಗೂ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿರುವುದರಿಂದ, ಪರಸ್ಪರ ಸಹಕಾರ ನೀಡುವ ಉದ್ದೇಶದಿಂದ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹಾಗೂ ನಾಯಕ ನಟ ಗಣೇಶ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ:‘ಪ್ರೇಮದ ಊರಲಿ’ ಸಿನಿಮಾದ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಬೃಂದಾವಿಹಾರಿ’ ಸಿನಿಮಾವು ರೊಮ್ಯಾಂಟಿಕ್ ಕೌಟುಂಬಿಕ ಸಿನಿಮಾ ಆಗಿದ್ದು, ‘ಪ್ರೇಮದ ಊರಲಿ’ ಸಿನಿಮಾ ಹೊಂದಿರುವ ರೀತಿಯದ್ದೇ ಕಥಾ ವಿಷಯವನ್ನು ಒಳಗೊಂಡಿದೆ. ಎರಡೂ ಒಂದೇ ರೀತಿಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಎದುರಾಗುವುದು ಸರಿಯಲ್ಲ ಎಂಬ ಕಾರಣ, ಹಾಗೂ ಅನವಶ್ಯಕ ಪೈಪೋಟಿಯನ್ನು ಅವಾಯ್ಡ್ ಮಾಡುವ ಕಾರಣದಿಂದಾಗಿ ನಿರ್ಮಾಪಕರು ಜಾಣ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.
ಅಲ್ಲದೆ ಅಕ್ಟೋಬರ್ 16ರಂದೇ ಪರಭಾಷೆ ಸಿನಿಮಾಗಳ ಹಾವಳಿಯೂ ಜೋರಾಗಿಯೇ ಇರಲಿದೆ. ಅದೇ ದಿನ ತೆಲುಗಿನ ವಿಜಯ್ ದೇವರಕೊಂಡ-ರಶ್ಮಿಕಾ ನಟನೆಯ ‘ರಣಬಾಲಿ’ ಸಿನಿಮಾ ರಿಲೀಸ್ ಆಗಲಿದೆ. ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಸಹ ರಿಲೀಸ್ ಆಗಲಿದೆ. ಹಾಗಾಗಿ ಚಿತ್ರತಂಡ ಯೋಜಿತ ನಿರ್ಣಯವನ್ನು ತೆಗೆದುಕೊಂಡು ‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ರ ಬದಲಿಗೆ ನವೆಂಬರ್ 20ಕ್ಕೆ ರಿಲೀಸ್ ಮಾಡುವ ನಿರ್ಧಾರ ಕೈಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




