ಬೆಂಗಳೂರು: ಕೊರೊನಾ ಸಂಕಷ್ಟ.. ಲಾಕ್‌ಡೌನ್ ಬಿಕ್ಕಟ್ಟಿನಲ್ಲಿ ಕಳೆಗುಂದಿದ್ದ ಬಣ್ಣದ ಲೋಕ ನಿಧಾನವಾಗಿ ರಂಗೇರುತ್ತಿದೆ. ಮತ್ತೆ ಚಿತ್ರಮಂದಿರದಲ್ಲಿ ರಂಗಿನ ಪರದೆ ತೆರೆಯಲು ಸಜ್ಜಾಗಿದೆ. ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಸಿದ್ಧತೆಯ ಕಾರ್ಯ ಶುರುವಾಗಿದೆ.
ಸಂತೋಷ್ ಹಾಗೂ ನರ್ತಕಿ ಚತ್ರಮಂದಿರಗಳಲ್ಲಿ ಶೋ ಪ್ರಾರಂಭಿಸಲು ಸಿಬ್ಬಂದಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಧೂಳೆದ್ದಿದ್ದ ಸೀಟುಗಳನ್ನು, ಚಿತ್ರಮಂದಿರವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸಿನಿಮಾಗಳ ಟ್ರೈಲರ್, ಟೀಸರ್ಗಳನ್ನು ಪ್ರದರ್ಶಿಸಿ ಆಡಿಯೋ, ವಿಡಿಯೋ ಗುಣಮಟ್ಟ ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ 16ರ ಶುಕ್ರವಾರದಿಂದ ಚಿರು ಸರ್ಜಾ ಅಭಿನಯಿಸಿದ ಶಿವಾರ್ಜುನ ಸಿನಿಮಾ ರಿಲೀಸ್ ಆಗಲಿದೆ. ನರ್ತಕಿ ಚಿತ್ರಮಂದಿರದಲ್ಲಿ ಯಾವ ಸಿನಿಮಾ ಹಾಕಬೇಕು ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಆದರೆ ಶಿವರಾಜ್ ಕುಮಾರ್ ನಟನೆಯ ದ್ರೋಣ ಸಿನಿಮಾದಿಂದ ಪ್ರದರ್ಶನ ಆರಂಭಿಸೋ ಸಾಧ್ಯತೆ ಇದೆ.