ತಾಕತ್ತಿದ್ದರೆ ಮಾಡಿ ತೋರಿಸಲಿ: ದರ್ಶನ್​ಗೆ ಉಮಾಪತಿ ಸವಾಲ್

|

Updated on: Feb 20, 2024 | 7:47 PM

Umapathy Srinivas: ‘ಕಾಟೇರ’ ಸಿನಿಮಾದ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅನ್ನು ‘ತಗಡು’, ‘ಗುಮ್ಮಿಸ್ಕೋತೀಯ’ ಎಂದು ಕೀಳು ಪದಬಳಸಿ ಮಾತನಾಡಿದ್ದ ದರ್ಶನ್​ಗೆ, ಉಮಾಪತಿ ಶ್ರೀನಿವಾಸ್ ಖಡಕ್ ಆಗಿಯೇ ಪ್ರತ್ಯುತ್ತರ ನೀಡಿದ್ದಾರೆ.

ತಾಕತ್ತಿದ್ದರೆ ಮಾಡಿ ತೋರಿಸಲಿ: ದರ್ಶನ್​ಗೆ ಉಮಾಪತಿ ಸವಾಲ್
Follow us on

ದರ್ಶನ್ (Darshan) ಹಾಗೂ ಉಮಾಪತಿ ಶ್ರೀನಿವಾಸ್ (Umapathy Srinivas) ನಡುವಿನ ಜಗಳ ತಾರಕ್ಕೇರಿಕೆ. ಕೆಲ ವರ್ಷಗಳ ಹಿಂದೆ ಯಾವುದೋ ಬ್ಯಾಂಕ್ ಲೋನ್ ವಿಚಾರಕ್ಕೆ ಉಮಾಪತಿ ಶ್ರೀನಿವಾಸ್ ಅನ್ನು ಆರೋಪಿ ಸ್ಥಾನದಲ್ಲಿ ದರ್ಶನ್ ನಿಲ್ಲಿಸಿದ್ದರು. ಆ ಪ್ರಕರಣದಲ್ಲಿ ಉಮಾಪತಿ ಅವರದ್ದು ತಪ್ಪಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಆ ಘಟನೆ ಬಳಿಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವೆ ಕಂದಕ ಏರ್ಪಟ್ಟಿತ್ತು. ಇತ್ತೀಚೆಗೆ ‘ಉಪಾಧ್ಯಕ್ಷ’ ಸಿನಿಮಾ ಪ್ರಚಾರ ಸಂದರ್ಭದಲ್ಲಿ ‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿಯೂ, ಸಿನಿಮಾದ ಗೆಲುವಿನ ಬಗ್ಗೆ ಅತೀವ ಖುಷಿ ಇರುವುದಾಗಿಯೂ ಉಮಾಪತಿ ಹೇಳಿದ್ದರು. ಆದರೆ ಇಂದು (ಫೆಬ್ರವರಿ 20) ‘ಕಾಟೇರ’ ಸಿನಿಮಾದ ಯಶಸ್ಸಿನ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ಉಮಾಪತಿ ಶ್ರೀನಿವಾಸ್ ವಿರುದ್ಧ ಹರಿಹಾಯ್ದರು. ಹೆಸರು ಹೇಳದೆ, ‘ತಗಡು’, ‘ಗುಮ್ಮಿಸ್ಕೊಳ್ತೀಯ’ ಎಂಬಿತ್ಯಾದಿ ಪದಗಳನ್ನು ಬಳಸಿದರು. ದರ್ಶನ್​ರ ಮಾತುಗಳಿಗೆ ಉಮಾಪತಿ ಶ್ರೀನಿವಾಸ್ ಖಡಕ್ ಉತ್ತರ ಕೊಟ್ಟಿದ್ದಾರೆ.

‘ಅವರ ಹೊಟ್ಟೆ ತುಂಬಿದೆ ಮಾತನಾಡಿದ್ದಾರೆ, ಮಾತನಾಡಲಿ. ಅವರ ಏನೋ ಅಂದರು ಅಂತ ನಾನು ಅನ್ನೋದು ಸರಿಯಲ್ಲ, ಅನ್ನೋಕೆ ನನಗೆ ಎರಡು ನಿಮಿಷ ಸಾಕು. ನಾನು ಸುಮ್ಮನೆ ಬಂದಿರೋನಲ್ಲ, ತಾಕತ್ತಿರೋದಕ್ಕೆ ಇಲ್ಲಿ ನಿಂತಿದ್ದೀನಿ. ಯಾರಿಗೂ ಭಯ ಪಡೋ ಅವಶ್ಯಕತೆ ಇಲ್ಲ. ಸಮಯ-ಸಂದರ್ಭ ನೋಡಿಕೊಂಡೆ ಉತ್ತರ ಕೊಡ್ತೀನಿ. ಗುಮ್ಮೋ ಟೈಂ ಅಲ್ಲಿ ನಾನು ಸರಿಯಾಗಿಯೇ ಗುಮ್ಮೀದ್ದೀನಿ ಅದು ಅವರಿಗೂ ಗೊತ್ತಿದೆ. ಇದೇ ಪದ ಬಳಕೆಯಿಂದ ಮಾಧ್ಯಮಗಳಿಂದ ಬ್ಯಾನ್ ಆಗಿದ್ದರು. ಬ್ಯಾನ್ ಮಾಡಿದರೂ ಪದಬಳಕೆ ಹೇಗೆ ಮಾಡೋದು ಎಂಬುದನ್ನು ಕಲಿಯದೇ ಹೋದರೆ ಹೇಗೆ? ವೇದಿಕೆ ಸಿಕ್ಕಿದೆ ಅಂತ ಏನು ಬೇಕಾದರೂ ಮಾತನಾಡಬಹುದಾ? ಏನ್ ಬೇಕಾದರೂ ಮಾಡಿಬಿಡ್ತೀರಾ? ತಾಕತ್ತಿದ್ದರೆ ಮಾಡಿ ನೋಡೋಣ’ ಎಂದು ಸವಾಲು ಎಸೆದರು ಉಮಾಪತಿ ಶ್ರೀನಿವಾಸ್.

ಇದನ್ನೂ ಓದಿ:ದರ್ಶನ್​ ವರ್ಸಸ್​ ಉಮಾಪತಿ: ‘ಕಾಟೇರ’ ಶೀರ್ಷಿಕೆ ಬಗ್ಗೆ ​ಕೊನೆಗೂ ಮೌನ ಮುರಿದ ಡಿ ಬಾಸ್​

‘ಸಿನಿಮಾ ಅಂತ ಬಂದಾಗ ಎಲ್ಲರೂ ತಗ್ಗಿ-ಬಗ್ಗಿ ನಡೀಬೇಕು. ಯಾರೋ ಒಬ್ಬರು-ಇಬ್ಬರಿಂದ ಸಿನಿಮಾ ಆಗಲ್ಲ. ನಾನೂ ಸಹ ‘ಉಪಾಧ್ಯಕ್ಷ’ ಗೆಲ್ಲಿಸಿಕೊಂಡಿದ್ದೀನಿ. ಚಿಕ್ಕಣ್ಣ ಇಂದು ಸ್ಟಾರ್ ಆದರು. ನನಗೆ ಆ ಬಗ್ಗೆ ಖುಷಿ ಇದೆ. 30-40 ಕೋಟಿ ಹಾಕಿ 50 ಕೋಟಿ ಮಾಡೋಕು, ಏಳು ಕೋಟಿ ಹಾಕಿ 14 ಕೋಟಿ ಮಾಡೋಕು ವ್ಯತ್ಯಾಸ ಇಲ್ಲವಾ? ಯಾವುದರಿಂದ ಲಾಭ ಹೆಚ್ಚಾಯ್ತು? ’ ಎಂದು ಉಮಾಪತಿ ಪಶ್ನೆ ಮಾಡಿದ್ದಾರೆ.

‘ಕಾಟೇರ’ ಸಿನಿಮಾ ಕತೆಯನ್ನು ನನ್ನ ಸಹಾಯದಿಂದಲೇ ಮಾಡಿದ್ದು. ನನ್ನಿಂದ ಹಣಕಾಸಿನ ಸಹಾಯ ತಗೊಂಡು ಶ್ರವಣ ಬೆಳಗೊಳದ ಬಳಿ ರೆಸಾರ್ಟ್​ಗೆ ಹೋಗಿ ಕತೆ ಮಾಡಿದರು. ವರಮಹಾಲಕ್ಷ್ಮಿ ಹಬ್ಬದ ದಿನದಂದು ಅಡ್ವಾನ್ಸ್ ಕೊಟ್ಟಿದ್ದೆ. ನಿಜ ಮಾತನಾಡೋಕೆ ಯಾಕೆ ಭಯ ಪಡಬೇಕು. ತಗಡು ಅಂತಾರೆ, ಇಂಥಹಾ ತಗಡುಗಳನ್ನು ಸಾಕಷ್ಟು ಜನರನ್ನು ನೋಡಿದ್ದೀನಿ. ತಗಡುಗಳು ಕಣ್ಣೆದುರೇ ಮರೆ ಆಗಿರೋದನ್ನು ನೋಡಿದ್ದೀನಿ. ವಾರ್ನಿಂಗ್​ಗಳಿಗೆಲ್ಲ ನಾನು ಕೇರ್ ಮಾಡಲ್ಲ. ಇಂಥಹಾ ವಾರ್ನಿಂಗ್​ಗಳನ್ನು ಸಾಕಷ್ಟು ನೋಡಿಬಿಟ್ಟಿದ್ದೀನಿ. ಇಂಥಹಾ ಎಷ್ಟೋ ವಾರ್ನಿಂಗ್​ಗಳನ್ನು ಡಸ್ಟ್​ಬಿನ್​ಗೆ ಬಿಸಾಕಿದ್ದೀನಿ. ಸಮಯ ಬಂದಾಗ ನಾನು ಸರಿಯಾಗಿಯೇ ಉತ್ತರ ಕೊಡ್ತೀನಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Tue, 20 February 24