ಪುನೀತ್ ರಾಜ್ಕುಮಾರ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಈ ನೋವು ಯಾವಾಗಲೂ ಕಡಿಮೆ ಆಗುವಂಥದ್ದಲ್ಲ. ಅವರು ಅನೇಕ ಕಲಾವಿದರ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಅವರು ಸಣ್ಣ ವಯಸ್ಸಿನಿಂದಲೇ ಇಂಡಸ್ಟ್ರಿಯನ್ನು ಹತ್ತಿರದಿಂದ ಕಂಡವರು. ರಾಜ್ಕುಮಾರ್ ಕಾರಣದಿಂದ ಅವರು ಅನೇಕ ದೊಡ್ಡ ಕಲಾವಿದರ ಜೊತೆ ಒಡನಾಟ ಹೊಂದಿದ್ದರು. ಒಮ್ಮೆ ಶೂಟಿಂಗ್ಗೆ ಹೋದಾಗ ಅವರಿಗೆ ಒಂದು ಕಾರು ಸಖತ್ ಇಷ್ಟ ಆಗಿತ್ತು. ಅದಕ್ಕಾಗಿ ಅವರಯ ಬೇಡಿಕೆ ಇಟ್ಟಿದ್ದರು. ಆ ಬೇಡಿಕೆಯನ್ನು ಎನ್ಟಿಆರ್ ಅವರು ಈಡೇರಿಸಿದ್ದರು!
ಪುನೀತ್ ರಾಜ್ಕುಮಾರ್ ಅವರು ರಾಜ್ಕುಮಾರ್ ಜೊತೆ ಅನೇಕ ಕಡೆಗಳಲ್ಲಿ ತೆರಳುತ್ತಿದ್ದರು. ಶೂಟಿಂಗ್ಗೆ ಹೋದಾಗ ಅನೇಕ ಜನರ ಪರಿಚಯ ಅವರಿಗೆ ಆಗುತ್ತಿತ್ತು. ಅದೇ ರೀತಿ ಪುನೀತ್ ಅವರು ತಂದೆಯ ಜೊತೆ ಒಮ್ಮೆ ಚಿತ್ರೀಕರಣಕ್ಕೆ ತೆರಳಿದಾಗ ಟಾಲಿವುಡ್ ನಟ ಎನ್ಟಿಆರ್ ಸಿಕ್ಕಿದ್ದರು. ಅವರ ಬಳಿ ಒಂದು ರೇಸ್ ಕಾರ್ ಇತ್ತು. ಈ ಕಾರು ಬೇಕು ಎಂದು ಪುನೀತ್ ಹಠ ಹಿಡಿಸಿದ್ದರು.
ಸಾಮಾನ್ಯವಾಗಿ ಸಣ್ಣ ವಯಸ್ಸಲ್ಲಿ ಚಾಕೋಲೇಟ್ ಬೇಕು ಎಂದರೆ ಅದನ್ನು ಕೊಡಿಸಬಹುದು. ಆದರೆ, ಪುನೀತ್ ಕೇಳಿದ್ದು ಕಾರನ್ನು. ಆದರೆ, ಎನ್ಟಿಆರ್ ಅವರು ಇದನ್ನು ಗಂಭೀರವಾಗಿ ಸ್ವೀಕರಿಸಿದರು. ವಿಶೇಷ ಎಂದರೆ ಈ ಕಾರನ್ನು ಎನ್ಟಿಆರ್ ಅವರು ಪುನೀತ್ ಮನೆಗೆ ಕಳುಹಿಸಿದ್ದರು. ಅದು ರೇಸ್ ಕಾರಾಗಿತ್ತು. ಕೊನೆಗೆ ಅದನ್ನು ಹಿಂದಿರುಗಿಸಿ ಕಳುಹಿಸಲಾಗಿತ್ತು. ಈ ವಿಚಾರವನ್ನು ಪುನೀತ್ ಈ ಮೊದಲು ಹೇಳಿಕೊಂಡಿದ್ದರು.
ಪುನೀತ್ ಅವರಿಗೆ ಕಾರಿನ ಬಗ್ಗೆ ಅಪಾರ ಪ್ರೀತಿ ಇತ್ತು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಅವರು ಪ್ರೀತಿಯ ಪತ್ನಿಗೆ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಉಡುಗೊರೆ ಆಗಿ ನೀಡಿದ್ದರು. ಅವರ ಬಳಿಯೂ ಕೆಲವು ದುಬಾರಿ ಕಾರುಗಳು ಇವೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಕೀಳು ಮಟ್ಟದ ಟ್ರೋಲ್: ಕೆಂಡವಾದ ಅಭಿಮಾನಿಗಳು
ಪುನೀತ್ ಅವರು ನಮ್ಮನ್ನು ಅಗಲಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಮೃತಪಟ್ಟ ಬಳಿಕ ಅನೇಕ ರಸ್ತೆಗಳಿಗೆ ಪುನೀತ್ ಅವರ ಹೆಸರನ್ನು ಇಡಲಾಗಿದೆ. ಪುನೀತ್ ಅವರ ಅಗಲುವಿಕೆ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ. ಬಹುತೇಕ ಹೀರೋಗಳ ಜೊತೆ ಅವರು ಒಳ್ಳೆಯ ಸಂಬಂಧ ಹೊಂದಿದ್ದರು. ಅವರನ್ನು ಈಗಲೂ ನೆನಪು ಮಾಡಿಕೊಳ್ಳುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.