‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಯಶ್​ಗೆ ರಾಧಿಕಾ ವ್ಯಾಲೆಂಟೈನ್ಸ್​ ಡೇ ವಿಶ್

ರಾಧಿಕಾ ಪಂಡಿತ್ ಅವರು ಯಶ್‌ಗೆ ವ್ಯಾಲೆಂಟೈನ್ಸ್ ದಿನದ ಶುಭಾಶಯ ಕೋರಿದ್ದಾರೆ. ತಮ್ಮ ಪ್ರೀತಿಯ ಪಯಣ, ಯಶ್ ಅವರ ತ್ಯಾಗ ಮತ್ತು ಬೆಂಬಲವನ್ನು ಹೃದಯಸ್ಪರ್ಶಿಯಾಗಿ ಸ್ಮರಿಸಿದ್ದಾರೆ. ಧಾರಾವಾಹಿಯಿಂದ ಸಿನಿಮಾದವರೆಗಿನ ಅವರ ಬಾಂಧವ್ಯ ಈಗಲೂ ಅಚಲವಾಗಿದೆ. ಯಶ್ 'ಟಾಕ್ಸಿಕ್' ಮತ್ತು 'ರಾಮಾಯಣ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ರಾಧಿಕಾ ಅವರ ವೃತ್ತಿಜೀವನಕ್ಕೆ ಅಚಲ ಬೆಂಬಲವಾಗಿ ನಿಂತಿದ್ದಾರೆ.

‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಯಶ್​ಗೆ ರಾಧಿಕಾ ವ್ಯಾಲೆಂಟೈನ್ಸ್​ ಡೇ ವಿಶ್
ಯಶ್-ರಾಧಿಕಾ

Updated on: Feb 14, 2026 | 2:57 PM

ರಾಧಿಕಾ ಪಂಡಿತ್ ಅವರು ಯಶ್ (Yash) ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದಾರೆ. ಇವರನ್ನು ಮಾದರಿ ಕಪಲ್ ಎಂದರೂ ತಪ್ಪಾಗಲಾರದು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಈ ಜೋಡಿ ವಿವಿಧ ರೀತಿಯ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರಾಧಿಕಾ ಪಂಡಿತ್ ಅವರು ಯಶ್​ಗೆ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಗಮನ ಸೆಳೆಯೋ ರೀತಿಯಲ್ಲಿ ಇದೆ.

ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಪರಿಚಯ ಆಗಿದ್ದು ಧಾರಾವಾಹಿಯಲ್ಲಿ. ಅಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದರು. ಆ ಬಳಿಕ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದರು. ತೆರೆಮೇಲೆ ಜೋಡಿ ಆಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಈಗ ತೆರೆಯ ಹಿಂದೆಯೂ ಕಪಲ್ ಆಗಿದ್ದಾರೆ. ಇವರ ಪ್ರೀತಿಯ ನೌಕೆ ಯಾವುದೇ ಅಡಚಣೆ ಇಲ್ಲದೆ ಸಾಗುತ್ತಿದೆ. ಯಶ್ ಅವರ ಕುರಿತು ರಾಧಿಕಾ ಪಂಡಿತ್ ಹಂಚಿಕೊಂಡಿರೋ ಪೋಸ್ಟ್ ಈಗ ಗಮನ ಸೆಳೆಯುತ್ತಿದೆ.

‘ನನ್ನ ಅಭದ್ರತೆಯನ್ನು ತೆಗೆದು ಹಾಕಿದವನು ನೀನು. ನಿನ್ನ ಕಣ್ಣುಗಳಲ್ಲಿ ದಣಿವು, ಬೇರೆ ಯಾರೂ ಗಮನಿಸದ ತ್ಯಾಗ, ದೂರು ನೀಡದೆ ನೀನು ಹೊತ್ತುಕೊಂಡ ದೀರ್ಘ ಭಾರ ನನಗೆ ಕಾಣುತ್ತಿದೆ. ಅದು ನಮಗಾಗಿ ಎಂದು ನನಗೆ ತಿಳಿದಿದೆ. ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ನಿನಗೆ ಧನ್ಯವಾದ, ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಎಂದು ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ಯಶ್ ಡಬಲ್ ಧಮಾಕ; ‘ಟಾಕ್ಸಿಕ್’ ರಿಲೀಸ್ ಆದ ಒಂದೇ ವಾರಕ್ಕೆ ಇದೆ ಮತ್ತೊಂದು ಸರ್​​ಪ್ರೈಸ್

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಹಿಟ್ ಆಗಲಿ ಎಂಬುದು ಅಭಿಮಾನಿಗಳ ಕೋರಿಕೆ. ಆ ಬಳಿಕ ‘ರಾಮಾಯಣ’ ಸಿನಿಮಾ ಕೂಡ ರಿಲೀಸ್ ಆಗಲಿದೆ. ಅವರ ಸಿನಿಮಾ ವೃತ್ತಿಜೀವನಕ್ಕೆ ರಾಧಿಕಾ ಬೆಂಬಲವಾಗಿ ನಿಂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us