
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು CCB ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
‘ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ’
ಇನ್ನು ನಟಿಯರ ಕಸ್ಟಡಿ ಪಡೆದಿರುವ CCB ಅಧಿಕಾರಿಗಳು ರಾಗಿಣಿ ಹಾಗೂ ಸಂಜನಾ ವಿರುದ್ಧ ನಮ್ಮ ಬಳಿ ಪಕ್ಕಾ ಸಾಕ್ಷ್ಯಾಧಾರವಿದೆ. ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಹಾಗಾಗಿ, ಮತ್ತೆ 3 ದಿನಗಳ ಕಾಲ ನಟಿಯರ ವಿಚಾರಣೆ ನಡೆಸುತ್ತೇವೆ ಎಂದು ಟಿವಿ 9ಗೆ CCB ಉನ್ನತ ಮೂಲಗಳು ತಿಳಿಸಿದೆ.
Published On - 6:26 pm, Fri, 11 September 20