Drugs ವಿರೋಧಿ ಅಭಿಯಾನದಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ CCB ನೋಟಿಸ್!

ಬೆಂಗಳೂರು: ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ಚಟುವಟಿಕೆಯಲ್ಲಿ ತೊಡಗಿದ್ದ ನಟಿ ರಾಗಿಣಿ ದ್ವಿವೇದಿಗೇ ಡ್ರಗ್ಸ್ ದಂಧೆ ವಿಚಾರವಾಗಿ CCB ನೋಟಿಸ್ ಸಿಕ್ಕಿದೆ. ಹೌದು, ನಾನ್ ಕಮ್ಯುನಿಕೇಬಲ್ ಡ್ರಗ್ಸ್ ಅವೇರ್​ನೆಸ್ ಫೋರಂ ಮೂಲಕ ಶಾಲಾ‌ ಮಕ್ಕಳಲ್ಲಿ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಬಗ್ಗೆ ರಾಗಿಣಿ ದ್ವಿವೇದಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಲಾಕ್​ಡೌನ್ ಅವಧಿಯಲ್ಲಿ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟು ಬಿಜೆಪಿ ನಾಯಕರೊಂದಿಗೆ ಈ ಕುರಿತು ರಾಗಿಣಿ ಚರ್ಚೆ ಸಹ ನಡೆಸಿದ್ದರಂತೆ. ಇದಲ್ಲದೆ, ಈ […]

Drugs ವಿರೋಧಿ ಅಭಿಯಾನದಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ CCB ನೋಟಿಸ್!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 03, 2020 | 2:11 PM

ಬೆಂಗಳೂರು: ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ಚಟುವಟಿಕೆಯಲ್ಲಿ ತೊಡಗಿದ್ದ ನಟಿ ರಾಗಿಣಿ ದ್ವಿವೇದಿಗೇ ಡ್ರಗ್ಸ್ ದಂಧೆ ವಿಚಾರವಾಗಿ CCB ನೋಟಿಸ್ ಸಿಕ್ಕಿದೆ.

ಹೌದು, ನಾನ್ ಕಮ್ಯುನಿಕೇಬಲ್ ಡ್ರಗ್ಸ್ ಅವೇರ್​ನೆಸ್ ಫೋರಂ ಮೂಲಕ ಶಾಲಾ‌ ಮಕ್ಕಳಲ್ಲಿ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಬಗ್ಗೆ ರಾಗಿಣಿ ದ್ವಿವೇದಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಈ ವಿಚಾರವಾಗಿ ಲಾಕ್​ಡೌನ್ ಅವಧಿಯಲ್ಲಿ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟು ಬಿಜೆಪಿ ನಾಯಕರೊಂದಿಗೆ ಈ ಕುರಿತು ರಾಗಿಣಿ ಚರ್ಚೆ ಸಹ ನಡೆಸಿದ್ದರಂತೆ. ಇದಲ್ಲದೆ, ಈ ಹಿಂದೆ ಶಾಲಾ‌ ಮಕ್ಕಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಘಟಕ ಬೃಹತ್ ಅಭಿಯಾನ ನಡೆಸಿತ್ತು. ಆಗ, ರಾಗಿಣಿ ದ್ವಿವೇದಿ ಬಿಜೆಪಿ‌ ನಾಯಕರನ್ನು ಭೇಟಿ ಮಾಡಿ ಜಾಗೃತಿ ಕಾರ್ಯಕ್ರಮ ಬಗ್ಗೆ ಮಾಹಿತಿ ಪಡೆದಿದ್ದರೆಂದು ಕೆಲ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.