‘ನನ್ನ ಮುಂದಿನ ಎರಡು ಸಿನಿಮಾಗೆ ಇದುವೇ ಸ್ಫೂರ್ತಿ’; ವಿಶೇಷ ವಿಡಿಯೋ ಮೂಲಕ ಹಲವು ವಿಷಯ ತಿಳಿಸಿದ ರಕ್ಷಿತ್ ಶೆಟ್ಟಿ

‘ರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ರಕ್ಷಿತ್ ಮಾತನಾಡಿದ್ದಾರೆ.

‘ನನ್ನ ಮುಂದಿನ ಎರಡು ಸಿನಿಮಾಗೆ ಇದುವೇ ಸ್ಫೂರ್ತಿ’; ವಿಶೇಷ ವಿಡಿಯೋ ಮೂಲಕ ಹಲವು ವಿಷಯ ತಿಳಿಸಿದ ರಕ್ಷಿತ್ ಶೆಟ್ಟಿ
ರಕ್ಷಿತ್

Updated on: Jul 03, 2023 | 2:23 PM

ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಬರಹಗಾರನಾಗಿ ರಕ್ಷಿತ್ ಶೆಟ್ಟಿ (Rakshit Shetty) ಅವರು ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದಾರೆ ಅನ್ನೋದು ವಿಶೇಷ. ಗುರುಪೂರ್ಣಿಮೆ ದಿನ ರಕ್ಷಿತ್ ಶೆಟ್ಟಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಾವು ನಡೆದು ಬಂದ ದಾರಿ ಹಾಗೂ ಮುಂದೆ ತುಳಿಯ ಬೇಕಿರುವ ಹಾದಿಯ ಬಗ್ಗೆ ವಿವರಿಸಿದ್ದಾರೆ. ಸಿನಿಮಾದ ಮೇಲೆ ಪ್ರೀತಿ ಮೂಡಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆಯೂ ಅವರು ವಿವರಿಸಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ರಿಲೀಸ್​ಗೆ ರೆಡಿ ಇದೆ. ಸೆಪ್ಟೆಂಬರ್ 1ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಅವರು ನಿರ್ದೇಶನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ರಕ್ಷಿತ್ ಮಾತನಾಡಿದ್ದಾರೆ.

‘ರಿಚರ್ಡ್​ ಆಂಟನಿ’ ಸಿನಿಮಾದ ಪ್ರೋಮೋ ಶೂಟ್ ಮಾಡಿದ ಸ್ಥಳದಿಂದ ರಕ್ಷಿತ್ ಶೆಟ್ಟಿ ವಿಡಿಯೋ ಆರಂಭ ಆಗುತ್ತದೆ. ನಂತರ ರಕ್ಷಿತ್ ಅವರು ಕನಸುಗಳ ಬಗ್ಗೆ ಮಾತನಾಡಿದ್ದಾರೆ. ‘ಕೆಲವರಿಗೆ ಯಶಸ್ಸು ರಾತ್ರೋರಾತ್ರಿ ಕಥೆ ಆದ್ರೆ, ಇನ್ನೂ ಕೆಲವರಿಗೆ ಅದೆಷ್ಟೋ ವರ್ಷಗಳ ತಪಸ್ಸು ಆಗಿಬಿಡುತ್ತದೆ ಎಂದು ಹೇಳುವ ಮೂಲಕ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಯಶಸ್ಸು ಸಿಕ್ಕ ಬಳಿಕ ಆ ಯಶಸ್ಸಿನಲ್ಲಿ ತೇಲಬೇಕಾ ಅಥವಾ ಮತ್ತೊಂದು ಯಶಸ್ಸನ್ನು ಪಡೆಯಲು ಹೋಗಬೇಕಾ ಎನ್ನುವ ಪ್ರಶ್ನೆಯನ್ನು ಅವರು ಕೇಳಿಕೊಂಡಿದ್ದಾರೆ.


ಇದನ್ನೂ ಓದಿ: Rakshit Shetty Birthday: ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ ಅಭಿಮಾನಿಗಳ ಪಾಲಿಗೆ ‘ಭರವಸೆಯ ಸ್ಟಾರ್’​ ಆಗಿದ್ದು ಹೇಗೆ?

ರಕ್ಷಿತ್ ಶೆಟ್ಟಿ ಹುಟ್ಟಿದ್ದು ಉಡುಪಿಯಲ್ಲಿ. ಸಿನಿಮಾ ಕನಸು ಹುಟ್ಟಿಕೊಳ್ಳಲು ಉಡುಪಿ ಕಾರಣ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ‘ನನ್ನ ಮುಂದಿನ ಎರಡು ಸಿನಿಮಾಗಳಿಗೆ (‘ರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿ ಸ್ಫೂರ್ತಿ. ಇದರ ಜೊತೆ ಈಗಾಗಲೇ ನಾಲ್ಕು ವರ್ಷ ಕಳೆದಿದ್ದೀನಿ, ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ’ ಎಂದಿದ್ದಾರೆ. ಇದರ ಜೊತೆಗೆ ನಿರ್ದೇಶನದ ಮೇಲಿನ ಪ್ರೀತಿ ಕುರಿತು, ಆ ಅನುಭವದ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us