Ramya: ‘ನನಗೆ ಆ ಅನುಭವಗಳೇ ಆಗಿರಲಿಲ್ಲ’: ಸೂರ್ಯ ಜೊತೆಗಿನ ನೆನಪು ಮೆಲುಕು ಹಾಕಿದ ನಟಿ ರಮ್ಯಾ

Ramya Divya Spandana: 15 ವರ್ಷಗಳ ಹಿಂದಿನ ವಿಷಯವನ್ನು ರಮ್ಯಾ ಅವರು ಈಗ ನೆನಪಿಸಿಕೊಂಡಿದ್ದಾರೆ. ‘ಬದುಕು, ನಷ್ಟ, ಸಂಬಂಧಗಳ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ’ ಎಂದು ಅವರು ಬರೆದುಕೊಂಡಿದ್ದಾರೆ.

Ramya: ‘ನನಗೆ ಆ ಅನುಭವಗಳೇ ಆಗಿರಲಿಲ್ಲ’: ಸೂರ್ಯ ಜೊತೆಗಿನ ನೆನಪು ಮೆಲುಕು ಹಾಕಿದ ನಟಿ ರಮ್ಯಾ
ಸೂರ್ಯ, ರಮ್ಯಾ

Updated on: Jul 16, 2023 | 1:15 PM

ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಈಗ ಮತ್ತೆ ಬಣ್ಣದ ಲೋಕದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಅಂಥ ಅಭಿಮಾನಿಗಳಿಗೆ ಜುಲೈ 21 ವಿಶೇಷ ದಿನ. ಯಾಕೆಂದರೆ, ಅಂದು ರಮ್ಯಾ (Ramya) ನಟನೆಯ ಎರಡು ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಬಹುದು. ಹೌದು, ರಮ್ಯಾ ನಟಿಸಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಜುಲೈ 21ರಂದು ಬಿಡುಗಡೆ ಆಗಲಿದೆ. ಅದೇ ದಿನ, ರಮ್ಯಾ ಮತ್ತು ಸೂರ್ಯ ಜೋಡಿಯ ಹಳೇ ಸಿನಿಮಾ ‘ಸೂರ್ಯ ಸನ್​ ಆಫ್​ ಕೃಷ್ಣನ್​’ (Surya S/O Krishnan) ಕೂಡ ಮರು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ರಮ್ಯಾ ಅವರು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ತಮಿಳಿನ ‘ವಾರನಂ ಆಯಿರಂ’ ಸಿನಿಮಾ ತೆಲುಗಿಗೆ ‘ಸೂರ್ಯ ಸನ್​ ಆಫ್​ ಕೃಷ್ಣನ್​’ ಎಂದು ಡಬ್​ ಆಗಿ 2008ರಲ್ಲಿ ತೆರೆಕಂಡಿತ್ತು. ಆ ಸಿನಿಮಾದ ಪೋಸ್ಟರ್​ ಅನ್ನು ರಮ್ಯಾ ಈಗ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ಬರೆದುಕೊಂಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣದ ದಿನಗಳು ಹೇಗಿದ್ದವು ಎಂಬುದನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪ್ರಿಯಾ ಎಂಬ ಪಾತ್ರ ಮಾಡಿದ್ದರು.

‘ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬ ಖುಷಿ ನೀಡಿತ್ತು. ಇದರ ಚಿತ್ರೀಕರಣ ನಡೆದಾಗ ನನಗೆ 22 ವರ್ಷ ವಯಸ್ಸು. ನಾನು ಒಂದಷ್ಟು ಎಮೋಷನ್​ಗಳಿಗೆ ತೆರೆದುಕೊಳ್ಳಬೇಕಿತ್ತು. ಆ ಪ್ರಾಯದಲ್ಲಿ ನನಗೆ ಅಂಥ ಅನುಭವಗಳೇ ಆಗಿರಲಿಲ್ಲ. ಬದುಕು, ನಷ್ಟ, ಸಂಬಂಧಗಳ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ಪ್ರಿಯಾ ಎಂಬ ಪಾತ್ರ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಂಕೇತವಾಗಿ ಇರುತ್ತದೆ. ನಾನೂ ಆ ರೀತಿ ಪ್ರೀತಿಸುವಂತಿದ್ದರೆ ಚೆನ್ನಾಗಿರುತ್ತಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ, ಕಲ್ಟ್​ ಕ್ಲಾಸ%

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us