ರಮ್ಯಾರ ಮುದ್ದಿನ ನಾಯಿ ಕಾಣೆಯಾಗಿದೆ: ಹುಡುಕಿಕೊಟ್ಟವರಿಗೆ ಬಹುಮಾನವೂ ಇದೆ

Ramya: ನಟಿ ರಮ್ಯಾರ ಮುದ್ದಿನ ನಾಯಿ ಚಾಂಪ್ ಕಾಣೆಯಾಗಿದೆ. ತಾಜ್ ವೆಸ್ಟ್​ಎಂಡ್ ಹೋಟೆಲ್​ನಿಂದ ನಾಯಿ ಕಾಣೆಯಾಗಿದ್ದು, ನಾಯಿ ಹುಡುಕಿಕೊಟ್ಟವರಿಗೆ ಬಹುಮಾನವೂ ಉಂಟು.

ರಮ್ಯಾರ ಮುದ್ದಿನ ನಾಯಿ ಕಾಣೆಯಾಗಿದೆ: ಹುಡುಕಿಕೊಟ್ಟವರಿಗೆ ಬಹುಮಾನವೂ ಇದೆ
ರಮ್ಯಾರ ಮುದ್ದಿನ ನಾಯಿ

Updated on: May 06, 2023 | 7:41 PM

ಕಾಂಗ್ರೆಸ್ (Congress) ಪರ ಚುನಾವಣೆ ಪ್ರಚಾರದಲ್ಲಿ ನಟಿ ರಮ್ಯಾ (Ramya) ಬ್ಯುಸಿಯಾಗಿರುವ ಹೊತ್ತಿನಲ್ಲೇ ಅವರ ಮುದ್ದಿನ ನಾಯಿ (Dog) ಕಾಣೆಯಾಗಿಬಿಟ್ಟಿದೆ. ರಮ್ಯಾ, ಶ್ವಾನಪ್ರೇಮಿ (Dog Lover) ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ, ನಾಯಿಗಳು ಅವರಿಗೆ ಮಕ್ಕಳಿದ್ದಂತೆ. ಆದರೆ ಅವರು ಅತಿಯಾಗಿ ಹಚ್ಚಿಕೊಂಡಿರುವ ನಾಯಿಯೊಂದು ಕಳೆದು ಹೋಗಿದೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ನಾಯಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.

”ನನ್ನ ನಾಯಿ ಚಾಂಪ್ ಕಾಣೆಯಾಗಿದೆ. ಕಪ್ಪು ಬಣ್ಣದ ನಾಯಿ ಅದಾಗಿದ್ದು, ಅದಕ್ಕೆ ತುಸು ಕಣ್ಣು ಮಂಜಾಗಿದೆ. ಚಾಂಪ್ ಎಂದು ಕರೆದರೆ ಪ್ರತಿಕ್ರಿಯಿಸುತ್ತದೆ. ಮೇ 6 ರಂದು ಬೆಳಿಗ್ಗೆ ರೇಸ್​ಕೋರ್ಸ್ ರಸ್ತೆಯ ತಾಜ್ ವೆಸ್ಟ್​ಎಂಡ್​ನಿಂದ ನಾಯಿ ಕಾಣೆಯಾಗಿದೆ. ಸುರಕ್ಷಿತವಾಗಿ ಮರಳಿಸಿದವರಿಗೆ ಸೂಕ್ತ ಉಡುಗೊರೆ ನೀಡಲಾಗುತ್ತದೆ. ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ” ಎಂದು ರಮ್ಯಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ಚಾಂಪ್​ ನಾಯಿಯ ಬಗ್ಗೆ ಮಾತನಾಡಿದ್ದರು. ರಮ್ಯಾ ಅತಿಯಾಗಿ ಪ್ರೀತಿಸುವ ನಾಯಿ ಚಾಂಪ್​ಗೆ 16 ವರ್ಷ. ಅದಕ್ಕೆ ಹೃದಯ ಸಮಸ್ಯೆ ಇದೆಯಂತೆ. ಕಣ್ಣು ಸಹ ಪೂರ್ಣವಾಗಿ ಕಾಣುವುದಿಲ್ಲ. ಆ ನಾಯಿಯೆಂದರೆ ರಮ್ಯಾಗೆ ಬಹಳ ಇಷ್ಟ. ಇದರ ಹೊರತಾಗಿ ರಮ್ಯಾ ಬಳಿ ರಾಣಿ ಹೆಸರಿನ ನಾಯಿ ಒಂದಿದೆ. ಇದು ಬೀದಿನಾಯಿಯಾಗಿದ್ದು, ನಟಿ ರಮ್ಯಾ ಅದನ್ನು ರಕ್ಷಿಸಿ ಮನೆಗೆ ಕರೆತಂದಿದ್ದರು.

ಇದನ್ನೂ ಓದಿ:ಮದುವೆ ಆಗಿಲ್ಲ ಏಕೆ ಎಂದವರಿಗೆ, ಇಂಥಹಾ ಹುಡುಗನ ಹುಡುಕಿಕೊಡಿ ಎಂದ ರಮ್ಯಾ

ರಮ್ಯಾ ಗೋವಾನಲ್ಲಿದ್ದಾಗ ಯಾರೋ ಈ ನಾಯಿಯ ಮೇಲೆ ಕಾರು ಹತ್ತಿಸಿದ್ದರಂತೆ. ಆಗ ರಮ್ಯಾ ಅದನ್ನು ಸಂರಕ್ಷಿಸಿ ಅದಕ್ಕೆ ಚಿಕಿತ್ಸೆ ನೀಡಿ ಹೊರಗೆ ಬಿಟ್ಟಿದ್ದರು. ಆದರೆ ಆ ನಾಯಿ ಒಂದು ತಿಂಗಳ ಬಳಿಕ ಮತ್ತೆ ರಮ್ಯಾ ಅವರನ್ನೇ ಹುಡುಕಿ ಬಂತಂತೆ ಆಗಿನಿಂದ ಅದನ್ನು ರಮ್ಯಾ ಸಾಕಿಕೊಂಡಿದ್ದು ಅದಕ್ಕೆ ರಾಣಿ ಎಂದು ಹೆಸರಿಟ್ಟಿದ್ದಾರೆ. ಈ ಮೊದಲು ರಮ್ಯಾ ಬಳಿ ಬ್ರ್ಯಾಂಡಿ ಹೆಸರಿನ ನಾಯಿ ಇತ್ತು, ಅದು ತೀರಿ ಹೋಯಿತು. ಆ ನಾಯಿಯೆಂದರೆ ರಮ್ಯಾಗೆ ಬಹಳ ಪ್ರೀತಿ. ಆ ನಾಯಿಯನ್ನು ನಟ ಅಂಬರೀಶ್ ಅವರು ರಮ್ಯಾಗೆ ನೀಡಿದ್ದರು. ಆ ನಾಯಿ ತೀರಿಕೊಂಡಾಗ ತೀವ್ರವಾಗಿ ದುಖಃ ಪಟ್ಟಿದ್ದರಂತೆ ರಮ್ಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Sat, 6 May 23

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us