Rashmika Mandanna: ‘ಈ ವಿಲಕ್ಷಣ ಅಭ್ಯಾಸ ನಿಮಗೂ ಇದೆಯೇ’; ರಶ್ಮಿಕಾ ಮಂದಣ್ಣ ಪ್ರಶ್ನೆಗೆ ಉತ್ತರಿಸಿ..

ರಶ್ಮಿಕಾ ಅವರು ಚೀಟ್ ಡೇ ಮಾಡುತ್ತಾರೆ. ಅ ದಿನ ರಶ್ಮಿಕಾ ಒಂದು ವಿಲಕ್ಷಣ ಕೆಲಸ ಮಾಡುತ್ತಾರಂತೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.

Rashmika Mandanna: ‘ಈ ವಿಲಕ್ಷಣ ಅಭ್ಯಾಸ ನಿಮಗೂ ಇದೆಯೇ’; ರಶ್ಮಿಕಾ ಮಂದಣ್ಣ ಪ್ರಶ್ನೆಗೆ ಉತ್ತರಿಸಿ..
ರಶ್ಮಿಕಾ

Updated on: Jun 29, 2023 | 9:34 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳನ್ನು ಸೆಳೆಯಲು ಅವರು ನಿತ್ಯ ಹೊಸಹೊಸ ಪೋಸ್ಟ್ ಹಾಕುತ್ತಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 3.8 ಕೋಟಿ ಹಿಂಬಾಲಕರಿದ್ದಾರೆ. ಈಗ ಅವರು ಹಂಚಿಕೊಂಡಿರುವ ಹೊಸ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಅವರು ಕೇಳಿದ ಪ್ರಶ್ನೆಗೆ ಅನೇಕರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಅವರು ಮಾಡಿರುವ ಪೋಸ್ಟ್​ ಚೀಟ್ ಡೇ ಬಗ್ಗೆ ಇದೆ. ಅಷ್ಟಕ್ಕೂ ಏನು ಇದು? ರಶ್ಮಿಕಾ ಬರೆದುಕೊಂಡಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಅವರು ನಿತ್ಯ ಯೋಗ ಹಾಗೂ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಈ ಬಗ್ಗೆ ಆಗಾಗ ಅಪ್​ಡೇಟ್ ನೀಡುತ್ತಾರೆ. ಇದರ ಜೊತೆಗೆ ಅವರು ಚೀಟ್ ಡೇ ಕೂಡ ಮಾಡುತ್ತಾರೆ. ಅಂದರೆ, ತಾವು ಫಾಲೋ ಮಾಡುವ ಡಯಟ್​ಗೆ ಬ್ರೇಕ್ ಕೊಟ್ಟು ತಮ್ಮಿಷ್ಟದ ಆಹಾರ ತಿನ್ನುವುದು. ಚೀಟ್​ ಡೇ ದಿನ ರಶ್ಮಿಕಾ ಒಂದು ವಿಲಕ್ಷಣ ಕೆಲಸ ಮಾಡುತ್ತಾರಂತೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಪ್ಲೇಟ್​ನಲ್ಲಿ ರಶ್ಮಿಕಾ ಸ್ವೀಟ್ ಹಿಡಿದು ಕುಳಿತಿದ್ದಾರೆ. ಊಟ ಆದ ಬಳಿಕ ಸಿಹಿ ತಿನ್ನಲಾಗುತ್ತದೆ. ಆದರೆ, ಊಟಕ್ಕೂ ಮೊದಲು ಸ್ವೀಟ್ ತಿನ್ನುವ ಅಭ್ಯಾಸ ಅವರಿಗೆ ಇದೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ಚೀಟ್​ ಡೇ ದಿನ ನಾನು ಊಟಕ್ಕೂ ಮೊದಲು ಸಿಹಿ ತಿಂಡಿಯನ್ನು ಆರ್ಡರ್ ಮಾಡುತ್ತೇನೆ. ನನ್ನ ಗೆಳೆಯರು ಇದನ್ನು ವಿಲಕ್ಷಣ ಎಂದು ಭಾವಿಸಿದ್ದಾರೆ. ಇದನ್ನು ನಾನೊಬ್ಬಳೇ ಮಾಡುತ್ತೇನಾ? ಅಥವಾ ನನ್ನಂತೆ ಇನ್ನೂ ಅನೇಕರಿದ್ದಾರೆಯೇ ಎಂಬುದು ನನಗೆ ಗೊತ್ತಾಗಬೇಕಿದೆ’ ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿರೋದು ನಿಜ; ವಿಡಿಯೋ ಸಾಕ್ಷಿ ತಂದ ಫ್ಯಾನ್ಸ್

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಹೈದರಾಬಾದ್ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡು ಸುದ್ದಿ ಆಗಿದ್ದರು. ಅವರ ಜೊತೆ ವಿಜಯ್ ದೇವರಕೊಂಡ ಹಾಗೂ ಫ್ಯಾಮಿಲಿ ಕೂಡ ಇತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗೆ ಇದು ಬಲ ನೀಡಿತ್ತು. ರಶ್ಮಿಕಾ ಅವರು ಬ್ಯಾಕ್​ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ‘ಅನಿಮಲ್’ ಸಿನಿಮಾ ಆಗಸ್ಟ್​​​ನಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:28 am, Thu, 29 June 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us