ಮನೆ ಊಟದ ವಿಷಯದಲ್ಲಿ ತೀರ್ಪು ಮಾರ್ಪಾಡು ಮಾಡಿದ ಕೋರ್ಟ್; ಪವಿತ್ರಾಗೆ ಶಾಕ್

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಪವಿತ್ರಾ ಗೌಡಗೆ ಮನೆ ಊಟ ನೀಡುವ ಬಗ್ಗೆ ನ್ಯಾಯಾಲಯ ಆದೇಶ ಬದಲಿಸಿದೆ. ಜೈಲು ಊಟದಿಂದ ಚರ್ಮರೋಗ, ಫುಡ್‌ಪಾಯ್ಸನ್ ಆಗುತ್ತಿದೆ ಎಂಬ ಪವಿತ್ರಾ ಮನವಿಗೆ ಆರಂಭದಲ್ಲಿ ಮನೆ ಊಟಕ್ಕೆ ಅನುಮತಿ ನೀಡಲಾಗಿತ್ತು. ಜೈಲಾಧಿಕಾರಿಗಳ ವಾದ ಪುರಸ್ಕರಿಸಿದ ಕೋರ್ಟ್, ಈಗ ವಾರಕ್ಕೆ ಒಮ್ಮೆ ಮಾತ್ರ ಮನೆ ಊಟ ನೀಡಲು ಆದೇಶಿಸಿದೆ.

ಮನೆ ಊಟದ ವಿಷಯದಲ್ಲಿ ತೀರ್ಪು ಮಾರ್ಪಾಡು ಮಾಡಿದ ಕೋರ್ಟ್; ಪವಿತ್ರಾಗೆ ಶಾಕ್
ಪವಿತ್ರಾ ಗೌಡ
Edited By:

Updated on: Jan 12, 2026 | 1:08 PM

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲಿನಲ್ಲಿರೋ ಪವಿತ್ರಾ ಗೌಡಗೆ (Pavithra Gowda) ಮನೆ ಊಟ ನೀಡುವಂತೆ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಈ ಮೊದಲು ಆದೇಶ ನೀಡಿತ್ತು. ಈ ಆದೇಶವನ್ನು ಜೈಲಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವಿಷಯದಲ್ಲಿ ಕೋರ್ಟ್ ತನ್ನದೇ ತೀರ್ಪನ್ನು ಮಾರ್ಪಾಡು ಮಾಡಿದೆ. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿದೆ. ಇದರಿಂದ ಪವಿತ್ರಾಗೆ ಹಿನ್ನಡೆ ಆಗಿದೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ, ಜೈಲೂಟದಿಂದ ಸಮಸ್ಯೆ ಆಗುತ್ತಿದೆ ಎಂಬುದನ್ನು ಹೈಲೈಟ್ ಮಾಡಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ, ಮೈಮೇಲೆ ಗುಳ್ಳೆಗಳು ಆಗುತ್ತಿವೆ ಎಂದು ವಾದ ಮಂಡಿಸಿದ್ದರು. ಜೈಲೂಟದಿಂದ ಫುಡ್‌ಪಾಯಿಸನ್ ಕೂಡ ಆಗುತ್ತಿದೆ ಎಂದು ಕೋರ್ಟ್ ಎದುರು ಹೇಳಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್ ಮನೆ ಊಟಕ್ಕೆ ಅವಕಾಶ ನೀಡಿತ್ತು.

ಆದರೆ, ಇದನ್ನು ಜೈಲಾಧಿಕಾರಿಗಳು ವಿರೋಧಿಸಿದ್ದರು. ಜೈಲಿನ ಊಟ ಉತ್ತಮವಾಗಿದೆ, ಶುಚಿಯಾಗಿದೆ ಎಂದು ವಾದಿಸಿದ್ದರು. ‘ಈ ವರೆಗೆ ಜೈಲಿನಲ್ಲಿ ಊಟ ತಿಂದು ಪವಿತ್ರಾ ಸೇರಿದಂತೆ ಇನ್ಯಾರೂ ಸಹ ಅಸ್ವಸ್ತಗೊಂಡಿಲ್ಲ. ಹೀಗಿರುವಾಗ ಪ್ರತ್ಯೇಕವಾಗಿ ಮನೆ ಊಟದ ಅವಶ್ಯಕತೆ ಇಲ್ಲ’ ಎಂಬುದು ಪೊಲೀಸರ ವಾದ ಆಗಿತ್ತು.

ಇದನ್ನೂ ಓದಿ: ಕೊಲೆ ಕೇಸ್ ವಿಚಾರಣೆ: ಪವಿತ್ರಾ ಗೌಡ ಮುಖದಲ್ಲಿ ಕಾಣಿಸಿತು ಸಿಕ್ಕಾಪಟ್ಟೆ ಟೆನ್ಷನ್

ಜೈಲಧಿಕಾರಿಗಳ ವಾದವು ನ್ಯಾಯಾಲಯಕ್ಕೆ ಸರಿ ಎನಿಸಿದೆ. ಹೀಗಾಗಿ, 57 ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡಿದೆ. ವಾರಕ್ಕೆ ಒಮ್ಮೆ ಮಾತ್ರ ಊಟ ನೀಡಲು ಆದೇಶ ಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ದರ್ಶನ್ ಅವರು ಎ2 ಆರೋಪಿ ಆಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟೂ 17 ಆರೋಪಿಗಳು ಇದ್ದಾರೆ. ಸದ್ಯ ಕೆಳ ಹಂತದ ಕೋರ್ಟ್​​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.