ಯಾರಾದರೂ ನಮಿಸಿದರೆ ರಾಜ್‌ಕುಮಾರ್ ಏನು ಹೇಳುತ್ತಿದ್ದರು? ರಜನಿ ಕೂಡ ಅಚ್ಚರಿಪಟ್ಟರು
ಚಿತ್ರರಂಗದ ಮೇರುನಟ ಡಾ. ರಾಜ್‌ಕುಮಾರ್ ಅವರ ಅದಮ್ಯ ವಿನಯ ಗುಣವನ್ನು ಉಪೇಂದ್ರ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಮಸ್ಕರಿಸಿದಾಗ, ಅದು ತನಗೆ ಸಲ್ಲುವ ಗೌರವವಲ್ಲ, ತನ್ನೊಳಗೆ ಇರುವ ಕಲಾ ದೇವಿಗೆ ಎಂದು ರಾಜ್‌ಕುಮಾರ್ ಹೇಳುತ್ತಿದ್ದರಂತೆ. ಈ ಘಟನೆ ಅವರ ಅಹಂಕಾರ ರಹಿತ ವ್ಯಕ್ತಿತ್ವಕ್ಕೆ ಸಾಕ್ಷಿ.

ರಾಜ್‌ಕುಮಾರ್ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಕಾಲ ಆ್ಯಕ್ಟೀವ್ ಆಗಿದ್ದರು. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗದಲ್ಲಿ ಮೇರು ನಟನಾಗಿ ಮೆರೆದರು. ಅವರಿಗೆ ಸರಿಸಾಟಿಯಾಗಿ ಮತ್ತೋರ್ವ ಹೀರೋ ನಿಲ್ಲೋಕೆ ಸಾಧ್ಯವಿಲ್ಲ. ರಾಜ್‌ಕುಮಾರ್ ಅವರು ಇಷ್ಟು ದೊಡ್ಡ ಹೀರೋ ಆದರು ಎಂದಿಗೂ ಅಹಂನಿಂದ ಮೆರೆದವರು ಅಲ್ಲ. ಇದಕ್ಕೆ ಉಪೇಂದ್ರ ಅವರು ಕೊಟ್ಟ ಒಳ್ಳೆಯ ಉದಾಹರಣೆಯನ್ನು ಇಲ್ಲಿ ನೋಡೋಣ.
ಉಪೇಂದ್ರ ನಟನೆಯ ‘45’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ಶಿವಣ್ಣ, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರವನ್ನು ಇಡೀ ತಂಡ ಮಾಡಿದೆ. ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆ ಕೂಡ ಅವರದ್ದೇ. ಇಡೀ ತಂಡ ಡಿಕೆಡಿ ವೇದಿಕೆ ಏರಿತ್ತು. ಈ ಸಂದರ್ಭದಲ್ಲಿ ಉಪೇಂದ್ರ ಅವರು ಅಪರೂಪದ ಮಾಹಿತಿ ಹಂಚಿಕೊಂಡಿದ್ದರು.
‘ಶೂಟಿಂಗ್ ವೇಳೆ ರಾಜ್‌ಕುಮಾರ್ ಅವರಿಗೆ ರಜನಿ ಮೈಸೂರಲ್ಲಿ ಸಿಕ್ತಿದ್ರಂತೆ. ರಾಜ್ಕುಮಾರ್ಗೆ ಎಲ್ಲರೂ ನಮಸ್ಕಾರ ಮಾಡ್ತಿದ್ರಂತೆ. ಇದನ್ನು ನೋಡಿ ರಜನಿಗೆ ಅಚ್ಚರಿ ಆಗಿತ್ತು. ನಿಮಗೆ ಎಲ್ಲರೂ ನಮಸ್ಕಾರ ಮಾಡುತ್ತಾರಲ್ಲ, ಅದು ಹೇಗೆ ಅನಿಸುತ್ತದೆ ಎಂದು ಕೇಳಿದಾಗ, ಅವರು ನಮಸ್ಕಾರ ಮಾಡುತ್ತಿರುವುದು ನನಗಲ್ಲ, ನನ್ನ ಒಳಗೆ ಇರುವ ಕಲಾ ದೇವಿಗೆ ಎಂದು ಹೇಳುತ್ತಿದ್ದರಂತೆ. ಇದು ಅವರ ದೊಡ್ಡ ಗುಣ’ ಎಂದರು ಉಪೇಂದ್ರ.
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚಿದ ‘ಪ್ರಣಯ ಪಯಣ’ ಗೀತೆ; ಡಿ.27ಕ್ಕೆ ಬಿಡುಗಡೆ
ಯಾರಾದರೂ ನಮಸ್ಕಾರ ಮಾಡಿದರೆ ಹೆಮ್ಮೆ ಆಗುತ್ತದೆ. ನನಗೆ ಅವರು ನಮಸ್ಕಾರ ಮಾಡುತ್ತಾರೆ ಎಂದು ಮೆರೆಯುತ್ತಾರೆ. ಆದರೆ, ರಾಜ್‌ಕುಮಾರ್ ಮಾತ್ರ ಆ ರೀತಿ ಆಗಿರಲೇ ಇಲ್ಲ. ಈ ಘಟನೆಯೇ ಅದಕ್ಕೆ ಸಾಕ್ಷಿ ‘ನಾನು ಸಿನಿಮಾ ತಿಳಿದುಕೊಂಡು ಮಾಡಿದ್ರೆ ಏನು ಮಾಡ್ತಿದ್ನೋ ಗೊತ್ತಿಲ್ಲ. ಆದರೆ, ಕಲಿಯದೆ ಮಾಡಿಕೊಂಡು ಹೋದೆ. ಶಕ್ತಿ ಎಲ್ಲವನ್ನೂ ಮಾಡಿಸುತ್ತದೆ ಎಂದು ರಾಜ್‌ಕುಮಾರ್ ಹೇಳುತ್ತಿದ್ದರು. ಕಾರಂತರಿಗೆ ಪ್ರಕೃತಿಯಲ್ಲಿ, ಕುವೆಂಪುಗೆ ಅಕ್ಷರಗಳಲ್ಲಿ ಹಾಗೂ ರಾಜ್ಕುಮಾರ್ಗೆ ಅಭಿಮಾನಿಗಳಲ್ಲಿ ದೇವರು ಕಾಣಿಸಿದರು. ನನಗೆ ಈಗ ಎಲ್ಲ ಕಡೆಗಳಲ್ಲಿ ದೇವರು ಕಾಣಿಸುತ್ತಿದ್ದಾರೆ’ ಎಂದರು ಉಪ್ಪಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Mon, 12 January 26



