AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರ ವಿರೋಧ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಜಾಮೀನು ಅರ್ಜಿಯನ್ನು ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಕೋರ್ಟ್‌ನಲ್ಲಿ ತೀವ್ರವಾಗಿ ವಿರೋಧಿಸಿದ್ದಾರೆ. ಸಾಕ್ಷ್ಯ ವಿಚಾರಣೆ ಮುಗಿಯುವವರೆಗೂ ಆತನಿಗೆ ಜಾಮೀನು ನೀಡಬಾರದು ಎಂದು ವಾದಿಸಿದ್ದು, ಪ್ರದೋಷ್ ಪರ ವಕೀಲರು ಇದಕ್ಕೆ ತಕರಾರು ತೆಗೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರ ವಿರೋಧ
ದರ್ಶನ್​-ರೇಣುಕಾಸ್ವಾಮಿ-ಪ್ರದೋಷ್
ರಮೇಶ್​ ಎಮ್​.
| Edited By: |

Updated on:Oct 27, 2026 | 2:04 PM

Share

ಮುಖ್ಯಾಂಶಗಳು

  • ಪ್ರದೋಷ್ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ
  • ಮಾಫಿ ಸಾಕ್ಷಿಗೆ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ
  • ದರ್ಶನ್ ಪರ ವಕೀಲರ ವಾದಕ್ಕೆ ಪ್ರದೋಷ್ ಪರ ವಕೀಲರಿಂದ ತೀವ್ರ ಆಕ್ಷೇಪ ಹಾಗೂ ಪ್ರತಿವಾದ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಪ್ರಕರಣದ ಆರೋಪಿಯಿಂದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ತಂದೆಯ ವಾರ್ಷಿಕ ಪುಣ್ಯ ಕಾರ್ಯ ನೆರವೇರಿಸಬೇಕು ಎಂಬುದು ಪ್ರದೋಷ್ ಕೋರಿಕೆ. ಇದಕ್ಕೆ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ವಿಚಾರಣೆ ವೇಳೆ ಕೋರ್ಟ್‌ನಲ್ಲಿ ವಾದ-ಪ್ರತಿವಾದಗಳು ಜೋರಾಗಿ ನಡೆದಿವೆ.

ಮಾಫಿ ಸಾಕ್ಷಿಯಾಗಿರುವ ವ್ಯಕ್ತಿಗೆ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹಷ್ಮತ್ ಪಾಷಾ ವಾದ ಮಂಡಿಸಿದ್ದಾರೆ. ಸಾಕ್ಷ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ ಮುಗಿಯುವವರೆಗೂ ಆತ ಜೈಲಿನಲ್ಲಿಯೇ ಇರಬೇಕು ಎಂಬ ಕಟ್ಟುನಿಟ್ಟಿನ ಷರತ್ತು ವಿಧಿಸಿಯೇ ಕೋರ್ಟ್ ಆತನನ್ನು ಮಾಫಿ ಸಾಕ್ಷಿಯಾಗಿ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಹೊರಗೆ ಬಿಟ್ಟರೆ ಕೋರ್ಟ್ ವಿಧಿಸಿರುವ ಷರತ್ತುಗಳು ನಿಷ್ಪಲವಾಗುತ್ತವೆ ಎಂದು ವಾದಿಸಿದ್ದಾರೆ.

ಪ್ರದೋಷ್ ಮೇಲೆ ಈಗಾಗಲೇ ಒತ್ತಡ ಹಾಗೂ ಪ್ರಭಾವ ಬೀರಲಾಗಿದೆ ಎಂಬ ಆರೋಪವಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಆತನಿಗೆ ಯಾವುದೇ ಬೆಂಗಾವಲು ನೀಡಬಾರದೆಂದು ಕೋರ್ಟ್ ಆದೇಶಿಸಿದೆ. ಒಂದು ದಿನದ ಮಟ್ಟಿಗೂ ಪ್ರದೋಷ್​​ಗೆ ಜಾಮೀನು ನೀಡಬಾರದು ಹಾಗೂ ಹೊರ ಜಗತ್ತಿನೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಅವಕಾಶ ಕಲ್ಪಿಸಬಾರದು. ಒಂದು ವೇಳೆ ಜಾಮೀನು ಮಂಜೂರು ಮಾಡಿದರೆ ಇದು ಇತರೆ ಆರೋಪಿಗಳೂ ಜಾಮೀನು ಕೋರುತ್ತಾರೆ ಎಂದು ವಾದಿಸಿದ್ದಾರೆ.

ಇದನ್ನೂ ಓದಿ: ದರ್ಶನ್, ರೇಣುಕಾಸ್ವಾಮಿ ಕೇಸ್: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ವಿನಯ್

ಮತ್ತೊಂದೆಡೆ, ದರ್ಶನ್ ಪರ ವಕೀಲರ ಈ ವಾದಕ್ಕೆ ಪ್ರದೋಷ್ ಪರ ವಕೀಲರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರದೋಷ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸುವ ಯಾವುದೇ ಹಕ್ಕು ದರ್ಶನ್‌ಗೆ ಇಲ್ಲ ಎಂದು ವಾದಿಸಿದ್ದಾರೆ. ಅಲ್ಲದೆ, ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಪುತ್ರನೇ ತಂದೆಯ ಅಂತಿಮ ಕಾರ್ಯಗಳನ್ನು ನೆರವೇರಿಸಬೇಕು ಎಂದು ವಾದ ಮಂಡಿಸಿ, ಜಾಮೀನು ನೀಡುವಂತೆ ಕೋರಿದ್ದಾರೆ. ವಿಚಾರಣೆಯನ್ನು ಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:36 pm, Tue, 27 October 26

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More