‘ಕಾಂತಾರ: ಚಾಪ್ಟರ್ 1’: ನಿರಂತರವಾಗಿ 2 ತಿಂಗಳು ಶೂಟ್ ಮಾಡಲಿದ್ದಾರೆ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. 60 ದಿನಗಳ ಚಿತ್ರೀಕರಣದಲ್ಲಿ ಅವರು ಭಾಗಿ ಆಗಲಿದ್ದಾರೆ. 2025ರಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಮೋಹನ್‌ಲಾಲ್ ಅವರ ಪಾತ್ರದ ಬಗ್ಗೆ ವದಂತಿಗಳಿವೆ ಆದರೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಇಲ್ಲ.

‘ಕಾಂತಾರ: ಚಾಪ್ಟರ್ 1’: ನಿರಂತರವಾಗಿ 2 ತಿಂಗಳು ಶೂಟ್ ಮಾಡಲಿದ್ದಾರೆ ರಿಷಬ್ ಶೆಟ್ಟಿ
ರಿಷಬ್

Updated on: Nov 06, 2024 | 11:43 AM

ರಿಷಬ್ ಶೆಟ್ಟಿ ಅವರು ಸದ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದು ‘ಕಾಂತಾರ’ ಚಿತ್ರದ ಪ್ರೀಕ್ವೆಲ್. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಕೆಲ ಹಂತದಲ್ಲಿ ಶೂಟಿಂಗ್ ಪೂರ್ಣಗೊಳಿಸಲಾಗಿದೆ. ಈಗ ಮುಂದಿನ 60 ದಿನಗಳ ಕಾಲ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟ್​ನಲ್ಲಿ ರಿಷಬ್ ಬ್ಯುಸಿ ಆಗಲಿದ್ದಾರೆ ಎನ್ನಲಾಗಿದೆ.

ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಚಿತ್ರದ ಅರ್ಧದಷ್ಟು ಶೂಟ್​ನ ಪೂರ್ಣಗೊಳಿಸಿದ್ದಾರಂತೆ. ಮುಂದಿನ 60 ದಿನಗಳ ಕಾಲ ಅವರು ಆ್ಯಕ್ಷನ್ ಹಾಗೂ ಇತರ ಪ್ರಮುಖ ದೃಶ್ಯಗಳ ಶೂಟ್​ನಲ್ಲಿ ಭಾಗಿ ಆಗಲಿದ್ದಾರಂತೆ. ರಿಷಬ್ ಅವರು ಈಗಾಗಲೇ ಕುದುರೆ ಸವಾರಿ ಹಾಗೂ ಕಳರಿಪಯಟ್ಟು ವಿದ್ಯೆಗಳನ್ನು ಕಲಿತಿದ್ದಾರೆ. ಈ ಮೊದಲು ‘ಕಾಂತಾರ’ ಚಿತ್ರಕ್ಕಾಗಿ ಕೋಣ ಓಡಿಸುವುದನ್ನು ಕಲಿತಿದ್ದರು. ಇದು ಚಿತ್ರದಲ್ಲಿ ಉತ್ತಮವಾಗಿ ಮೂಡಿ ಬಂದಿತ್ತು.

ಕದಂಬರು ಬನವಾಸಿಯನ್ನು ಆಳಿದ್ದರು. ‘ಕಾಂತಾರ: ಚಾಪ್ಟರ್ 1’ ಕದಂಬರ ಕಾಲದಲ್ಲಿ ನಡೆಯುವ ಕಥೆ. ಅಂದರೆ ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿ ಸಾಗಲಿದೆ. 60 ದಿನಗಳ ಬಳಿಕ ತಂಡ ಸಾಂಗ್ ಶೂಟ್​ ನಡೆಸಲಿದೆ. ‘ಕಾಂತಾರ’ ಸಿನಿಮಾದಲ್ಲಿ ಶಿವ ಹಾಗೂ ಪಂಜುರ್ಲಿ ದೈವದ ಕಥೆ ಇತ್ತು. ಪ್ರೀಕ್ವೆಲ್​ನಲ್ಲಿ ಅದು ಹೇಗೆ ಆರಂಭ ಆಯಿತು ಎನ್ನುವ ಬಗ್ಗೆ ಮಾಹಿತಿ ನೀಡೋ ಸಾಧ್ಯತೆ ಇದೆ.

‘ಕಾಂತಾರ: ಚಾಪ್ಟರ್ 1’ 2025ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಮೊದಲು ಸಿನಿಮಾದ ಫಸ್ಟ್​ ಪೋಸ್ಟರ್​​ನ ತಂಡ ರಿಲೀಸ್ ಮಾಡಿತ್ತು. ಇದಲ್ಲದೆ, ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್, ಕೆಲವರ ಕೊಂಕು, ಹಲವರ ಸ್ವಾಗತ

ರಿಷಬ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಸೆಟ್​ಗಳನ್ನು ಕುಂದಾಪುರದಲ್ಲಿ ಹಾಕಿದ್ದಾರೆ. ಅವರ ತಂದೆ ಪಾತ್ರದಲ್ಲಿ ಮೋಹನ್​ಲಾಲ್ ನಟಿಸುತ್ತಾರೆ ಎನ್ನುವ ವದಂತಿ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us