Roberrt Movie: ನಾಲ್ಕು ದಿನ ಮೊದಲೇ ಸೋಲ್ಡ್​ ಔಟ್​ ಆದ ‘ರಾಬರ್ಟ್’​ ಟಿಕೆಟ್​; ಇದು ದರ್ಶನ್​ ಹವಾ!

Roberrt Online Ticket Booking: ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಚಂದ್ರೋದಯ ಸೇರಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಗೆ ರಾಬರ್ಟ್​ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇವುಗಳಲ್ಲಿ ಕೆಲವು ಈಗಾಗಲೇ ಸೋಲ್ಡ್​ಔಟ್​ ಆಗಿದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಹೌಸ್​ಫುಲ್​ ಆಗುವ ಸಾಧ್ಯತೆ ಇದೆ.

Roberrt Movie: ನಾಲ್ಕು ದಿನ ಮೊದಲೇ ಸೋಲ್ಡ್​ ಔಟ್​ ಆದ ರಾಬರ್ಟ್​ ಟಿಕೆಟ್​; ಇದು ದರ್ಶನ್​ ಹವಾ!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

Updated on: Mar 08, 2021 | 7:22 PM

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ರಿಲೀಸ್​ಗೆ ಸಿದ್ಧವಾಗಿದೆ. ಇದೇ ಗುರುವಾರದಿಂದ (ಮಾ.11) ರಾಜ್ಯಾದ್ಯಂತ ದರ್ಶನ್​ ಹವಾ ಆರಂಭವಾಗಲಿದೆ. ಟಾಲಿವುಡ್​ನಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ. ಇನ್ನು, ಸಾಮಾಜಿಕ ಜಾಲತಾಣಗಳಲ್ಲೂ ಸಿನಿಮಾ ಹವಾ ಜೋರಾಗಿದೆ. ಈಗ ಟಿಕೆಟ್​ ಬುಕ್ಕಿಂಗ್​ನಲ್ಲೂ ‘ರಾಬರ್ಟ್’​ ತನ್ನ ಅಬ್ಬರವನ್ನು ತೋರಿದ್ದಾನೆ. ಸಿನಿಮಾ ರಿಲೀಸ್​ಗೆ ಕೆಲವು ದಿನ ಬಾಕಿ ಇರುವಾಗಲೇ ಅನೇಕ ಚಿತ್ರಮಂದಿರಗಳಲ್ಲಿ ಶೋಗಳು ಸೋಲ್ಡ್​ ಔಟ್​ ಆಗಿವೆ.

ಸಿನಿಮಾ ರಿಲೀಸ್​ಗೂ ಕೆಲ ದಿನ ಮೊದಲು ಆನ್​ಲೈನ್​ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ನೀಡೋದು ವಾಡಿಕೆ. ಈಗ ‘ರಾಬರ್ಟ್’​ ಸಿನಿಮಾ ತಂಡ ಕೂಡ ನಾಲ್ಕು ದಿನ ಮೊದಲೇ ಆನ್​ಲೈನ್​ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ನೀಡಿದೆ. ಇಂದು ಬೆಂಗಳೂರು ಸೇರಿ ಕೆಲ ಪ್ರಮುಖ ನಗರಗಳಲ್ಲಿರುವ ಚಿತ್ರ ಮಂದಿರದ ಆನ್​ಲೈನ್​ ಟಿಕೆಟ್​ ಬುಕ್ಕಿಂಗ್​ ಪ್ರಾರಂಭವಾಗಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ.

ದರ್ಶನ್​ ನಟನೆಯ ಬಹುತೇಕ ಸಿನಿಮಾಗಳು ರಿಲೀಸ್​ ಆದ ಮೊದಲ ದಿನ ಹೌಸ್​ಫುಲ್​ ಆಗಿವೆ. ಬಾಕ್ಸ್​ ಆಫೀಸ್​ನಲ್ಲೂ ದೊಡ್ಡ ಮಟ್ಟದ ಗಳಿಕೆ ಮಾಡಿ,  ಸಾಕಷ್ಟು ದಾಖಲೆಗಳನ್ನು ಕೂಡ ಸೃಷ್ಟಿಸಿದೆ. ಈಗ ರಿಲೀಸ್​​ ಆಗುತ್ತಿರುವ ‘ರಾಬರ್ಟ್’​ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಈ ದಾಖಲೆಗಳನ್ನು ಧೂಳಿಪಟ ಮಾಡುವ ಎಲ್ಲಾ ಲಕ್ಷಣ ಕಾಣುತ್ತಿದೆ. ಗುರುವಾರ ಶಿವರಾತ್ರಿ ಪ್ರಯುಕ್ತ ರಜೆ ಇದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲೇ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಾರೆ. ಶುಕ್ರವಾರ ಚಿತ್ರರಂಗದ ಪಾಲಿಗೆ ವಿಶೇಷ ದಿನ. ಹೀಗಾಗಿ, ಅಂದು ಕೂಡ ಪ್ರೇಕ್ಷಕರು ಥಿಯೇಟರ್​ಗೆ ಬರುತ್ತಾರೆ. ಇನ್ನು, ಶನಿವಾರ-ಭಾನುವಾರ ವೀಕೆಂಡ್​ ಆದ್ದರಿಂದ ಅಂದು ಕೂಡ ದರ್ಶನ್​ ಸಿನಿಮಾ ಬಾಕ್ಸ್​ ಆಫೀಸ್​ ಧೂಳೆಬ್ಬಿಸುವ ಲಕ್ಷಣ ಇದೆ.

ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಚಂದ್ರೋದಯ, ಜೆಪಿ ನಗರದ ಸಿದ್ಧೇಶ್ವರ ಸೇರಿ ಸಾಕಷ್ಟು ಚಿತ್ರಮಂದರಿಗಳಲ್ಲಿ ಮುಂಜಾನೆ 6 ಗಂಟೆಗೆ ರಾಬರ್ಟ್​ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇವುಗಳಲ್ಲಿ ಕೆಲವು ಈಗಾಗಲೇ ಸೋಲ್ಡ್​ಔಟ್​ ಆಗಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಹೌಸ್​ಫುಲ್​ ಆಗುವ ಸಾಧ್ಯತೆ ಇದೆ. ಇದು ದರ್ಶನ್​ ಸಿನಿಮಾದ ಹೈಪ್​ಗೆ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದಾರೆ. ಆಶಾ ಭಟ್​ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Roberrt: ಪ್ರೇಕ್ಷಕರು ‘ರಾಬರ್ಟ್​’ ಸಿನಿಮಾ ಯಾಕೆ ನೋಡಬೇಕು? ಇಲ್ಲಿದೆ 5 ಪ್ರಮುಖ ಕಾರಣಗಳು!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us