ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ಟೀಸರ್ ಅಂದುಕೊಂಡಿದ್ದಕ್ಕಿಂತಲೂ ಒಂದು ದಿನ ಮೊದಲೇ ರಿಲೀಸ್ ಆಗಿದೆ. ರಾಕಿ ಭಾಯ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ಚಿತ್ರದ ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಕೆಜಿಎಫ್-1 ಚಿತ್ರದಲ್ಲಿ ‘ಪವರ್ಫುಲ್ ಪೀಪಲ್ ಕೇಮ್ ಫ್ರಮ್ ಪವರ್ಫುಲ್ ಪ್ಲೇಸಸ್’ ಎನ್ನುವ ಡೈಲಾಗ್ ಬಳಕೆ ಮಾಡಲಾಗಿತ್ತು. ಈ ಬಾರಿ ‘ಪವರ್ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ಫುಲ್’ ಎನ್ನುವ ಡೈಲಾಗ್ ಬಳಸಲಾಗಿದ್ದು, ಸಖತ್ ಥ್ರಿಲ್ ನೀಡಿದೆ. ಅಲ್ಲದೆ, ಸಿನಿಮಾದಲ್ಲಿ ಸಂಜಯ್ ದತ್ ಹಾಗೂ ಯಶ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೆಷಿನ್ ಗನ್ನಲ್ಲಿ ಬುಲೆಟ್ ಹಾರಿಸೋದು, ಕಾದ ಗನ್ನಿನ ನಳಿಕೆ ಮೂಲಕ ರಾಕಿ ಭಾಯ್ ಸಿಗರೇಟ್ ಹಚ್ಚಿಕೊಳ್ಳೋ ದೃಶ್ಯಗಳು ಕಣ್ಣಿಗೆ ಸಾಕಷ್ಟು ಮುದ ನೀಡಿದೆ. ಇನ್ನು, ರವೀನಾ ಟಂಡನ್ ರಾಜಕಾರಣಿ ಲುಕ್ನಲ್ಲಿ ಮಿಂಚಿದ್ದಾರೆ.
ಇನ್ನು, ಚಿತ್ರದ ಟೀಸರ್ ಲೀಕ್ ಆದ ಬಗ್ಗೆ ಯಶ್ ಉತ್ತರ ನೀಡಿದ್ದಾರೆ. ಯಾರೋ ಪುಣ್ಯಾತ್ಮರು, ಮಹಾನುಭಾವರು ಟೀಸರ್ ಲೀಕ್ ಮಾಡಿದ್ದಾರೆ. ಅವರಿಗೆ ಇದರಿಂದ ಏನು ಖುಷಿ ಸಿಗತ್ತೋ ಗೊತ್ತಿಲ್ಲ. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ. ಅಭಿಮಾನಿಗಳಿಗೋಸ್ಕರ ರಾತ್ರಿಯೇ ರಿಲೀಸ್ ಮಾಡಿದ್ದೇವೆ, ಎಂದಿದ್ದಾರೆ ಯಶ್.
Published On - 9:58 pm, Thu, 7 January 21