ಗಾನ ಕೋಗಿಲೆ ಎಸ್ ಜಾನಕಿ ಅಂತ್ಯಕ್ರಿಯೆ ಎಲ್ಲಿ? ಯಾವಾಗ?

S Janaki Songs: ಗಾಯಕಿ ಎಸ್ ಜಾನಕಿ ಅವರು ನಿಧನ ಹೊಂದಿದ್ದು ನಿನ್ನೆ ರಾತ್ರಿಯಿಂದಲೂ ಲಕ್ಷಾಂತರ ಜನ ತಂಡೋಪತಂಡವಾಗಿ ಆಗಮಿಸಿ ಜಾನಕಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆ ಚಿತ್ರರಂಗದ ಗಣ್ಯರು ಸಹ ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ರಾಜ್ಯದ ಕೆಲ ಪ್ರಮುಖ ರಾಜಕಾರಣಿಗಳು ಸಹ ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಗಾನ ಕೋಗಿಲೆ ಎಸ್ ಜಾನಕಿ ಅಂತ್ಯಕ್ರಿಯೆ ಎಲ್ಲಿ? ಯಾವಾಗ?
S Janaki Final
Edited By:

Updated on: Jul 13, 2026 | 12:06 PM

ಸುಮಾರು ಅರ್ಧ ಲಕ್ಷದಷ್ಟು ಹಾಡುಗಳನ್ನು ಹಾಡಿರುವ ಎಸ್ ಜಾನಕಿ (S Janaki) ಅವರು ನಿನ್ನೆ (ಜುಲೈ 11) ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನಲ್ಲೇ ನೆಲೆಸಿದ್ದ ಜಾನಕಿ ಅವರ ಆಸೆಯಂತೆ ಮೈಸೂರಿನಲ್ಲೇ ಕೊನೆ ಉಸಿರೆಳೆದಿದ್ದಾರೆ. ನಿನ್ನೆ ರಾತ್ರಿಯಿಂದಲೂ ಲಕ್ಷಾಂತರ ಜನ ತಂಡೋಪತಂಡವಾಗಿ ಆಗಮಿಸಿ ಜಾನಕಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆ ಚಿತ್ರರಂಗದ ಗಣ್ಯರು ಸಹ ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ರಾಜ್ಯದ ಕೆಲ ಪ್ರಮುಖ ರಾಜಕಾರಣಿಗಳು ಸಹ ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಸಿಎಂ ಡಿಕೆ ಶಿವಕುಮಾರ್, ಈ ಕುರಿತು ಮಾತನಾಡಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಜಾನಕಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದಿದ್ದಾರೆ. ಎಸ್ ಜಾನಕಿ ಅವರು ಮೂಲತಃ ತೆಲುಗಿನವರು, ಜನಿಸಿದ್ದು ಅವಿಭಜಿತ ಆಂಧ್ರ ಪ್ರದೇಶದ ಗುಂಟೂರಿನಲ್ಲಿ. ಆದರೆ ಅವರ ಜೀವನದ ಕೊನೆಯ ದಿನಗಳನ್ನು ಅವರು ಕಳೆದಿದ್ದು ಕರ್ನಾಟಕದ ಮೈಸೂರಿನಲ್ಲಿ. ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಾನಕಿ ಅವರಿಗೆ ಮೈಸೂರಿನ ಮೇಲೆ ಅಪಾರ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದು ಮಾತ್ರವೇ ಅಲ್ಲದೆ, ತಾವು ಮೈಸೂರಿನಲ್ಲೇ ಮಣ್ಣಾಗಬೇಕು ಎಂದು ಬಯಸಿದ್ದರು. ಅವರ ಆಸೆಯಂತೆ ಇದೀಗ ಜಾನಕಿ ಅವರನ್ನು ಮೈಸೂರಿನಲ್ಲೇ ಮಣ್ಣು ಮಾಡಲಾಗುತ್ತಿದೆ.

ಎಸ್ ಜಾನಕಿ ಅವರ ಅಂತಿಮ ಸಂಸ್ಕಾರ ಮೈಸೂರು ಜಿಲ್ಲೆ ಎಚ್​​ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯಲ್ಲಿ ನಡೆಯಲಿದೆ. ಇಲ್ಲಿಯೇ ಮಣ್ಣಾಗಬೇಕು ಎಂಬುದು ಎಸ್ ಜಾನಕಿ ಅವರ ಆಸೆಯೂ ಆಗಿತ್ತು. ಈಗಾಗಲೇ ಸ್ಥಳೀಯ ಆಡಳಿತದವರು ಸ್ಥಳಕ್ಕೆ ಹೋಗಿ ಜಾನಕಿ ಅವರ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಸ್ಥಳವನ್ನು ಸ್ವಚ್ಛಗೊಳಿಸಿ, ಅಂತಿಮ ಸಂಸ್ಕಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಇದನ್ನೂ ಓದಿ:ಒಂದು ಹಾಡು ನಾಲ್ಕು ಧ್ವನಿ: ಎಸ್ ಜಾನಕಿ ಹಾಡಿರುವ ಈ ಹಾಡು ಕೇಳಿದ್ದೀರಾ?

ಎಸ್ ಜಾನಕಿ ಅವರ ಮೊಮ್ಮಗಳು ಅಪ್ಸರಾ ಅಂತಿಮ ಕಾರ್ಯವನ್ನು ನಡೆಸಿಕೊಡಲಿದ್ದಾರೆ. ತೆಲುಗು ಬ್ರಾಹ್ಮಣ ವಿಧಿ ವಿಧಾನದ ಅನುಸಾರ ಅಂತಿಮ ಸಂಸ್ಕಾರ ನಡೆಯಲಿದೆ. ಪಂಚಗವ್ಯ ಶುದ್ಧೀಕರಣ ಸೇರಿದಂತೆ ಹಲವು ಕಾರ್ಯಗಳು ನಡೆಯಲಿವೆ. ಅದಾದ ಬಳಿಕ ಪೊಲೀಸ್ ಗೌರವ ಇರಲಿದೆ. ಬಳಿಕ ಎಸ್ ಜಾನಕಿ ಅವರು ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು, ಈಗಾಗಲೇ ಜಾನಕಿ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭಿಸಲಾಗಿದ್ದು ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ ಎಚ್​​ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿಗೆ ತೆಗೆದುಕೊಂಡು ಬರಲಾಗುತ್ತದೆ. ಬಳಿಕ ಸುಮಾರು ಆರು ಗಂಟೆ-ಆರೂವರೆ ವೇಳೆಗೆ ಅವರ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sun, 12 July 26

Loading...
Unable to load recommendations.
Follow Us