ನ್ಯೂ ಇಯರ್​ ದಿನದಂದು.. ಸಿಂಹದ ಮರಿಯನ್ನು ದತ್ತು ಪಡೆದ ‘ಚಿಟ್ಟೆ’ ವಸಿಷ್ಠ ಸಿಂಹ

ನ್ಯೂ ಇಯರ್​ ದಿನದಂದು ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿಕೊಟ್ಟ ನಟ ಸಿಂಹದ ಮರಿಯೊಂದನ್ನು ದತ್ತು ಪಡೆದಿದ್ದಾರೆ. ವಿಶೇಷವೆಂದರೆ ದತ್ತು ಪಡೆದ ಸಿಂಹದ ಮರಿಗೆ ನಟ ತಮ್ಮ ತಂದೆ ವಿಜಯ ನರಸಿಂಹ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

ನ್ಯೂ ಇಯರ್​ ದಿನದಂದು.. ಸಿಂಹದ ಮರಿಯನ್ನು ದತ್ತು ಪಡೆದ ‘ಚಿಟ್ಟೆ’ ವಸಿಷ್ಠ ಸಿಂಹ
ನ್ಯೂ ಇಯರ್​ ದಿನದಂದು ಸಿಂಹದ ಮರಿಯನ್ನು ದತ್ತು ಪಡೆದ ನಟ ವಸಿಷ್ಠ ಸಿಂಹ

Updated on: Jan 01, 2021 | 7:07 PM

ಬೆಂಗಳೂರು: ತಮ್ಮ ಮನೋಜ್ಞ ನಟನೆ ಹಾಗೂ ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರ ಮನಗೆದ್ದು ಚಿಟ್ಟೆ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್​ವುಡ್ ನಟ ವಸಿಷ್ಠ ಸಿಂಹ ಹೊಸ ವರ್ಷವನ್ನು ಕೊಂಚ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.

ಹೌದು, ನ್ಯೂ ಇಯರ್​ ದಿನದಂದು ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿಕೊಟ್ಟ ನಟ ಸಿಂಹದ ಮರಿಯೊಂದನ್ನು ದತ್ತು ಪಡೆದಿದ್ದಾರೆ. ವಿಶೇಷವೆಂದರೆ ದತ್ತು ಪಡೆದ ಸಿಂಹದ ಮರಿಗೆ ನಟ ತಮ್ಮ ತಂದೆ ವಿಜಯ ನರಸಿಂಹ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

ಮರಿಯನ್ನು ದತ್ತು ಪಡೆದ ಬಳಿಕ ವಸಿಷ್ಠ ಸಿಂಹ ಅದರ ಜೊತ ಕೆಲ ಹೊತ್ತು ಸಮಯ ಕಳೆದರು. ಅಂದ ಹಾಗೆ, ಈ ಸಿಂಹದ ಮರಿ ನಟ ಸಾರ್ವಭೌಮ ಡಾ ರಾಜ್​ಕುಮಾರ್ ಅವರ ಜನ್ಮದಿನದಂದೇ ಹುಟ್ಟಿರುವುದು ವಿಶೇಷ.

KBC ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ಸೋನು ಸೂದ್ ಅವರ I’m no Messiah ಪುಸ್ತಕ