ದೈಹಿಕವಾಗಿ ಫಿಟ್ ಆಗಿರಲು ಇವುಗಳನ್ನ ಫಾಲೋ ಮಾಡ್ತಾರಂತೆ ಈ ಚೆಲುವೆ

|

Updated on: Nov 10, 2019 | 10:53 PM

ಈಕೆ ಚಂದನವನದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ತನ್ನ ನಟನೆಯ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹಲ್​ ಚಲ್ ಎಬ್ಬಿಸಿದ ಬ್ಯೂಟಿ. ತನ್ನ ಸೌಂದರ್ಯದಿಂದಲೇ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ಕ್ರೇಜಿ ಬಾಯ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ. ತಮ್ಮ ಮೊದಲ ಚಿತ್ರದಲ್ಲೇ ಭರವಸೆಯನ್ನು ಮೂಡಿಸಿ, ಇದೀಗ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ. ಆಶಿಕಾ ಅವರು ನಟನೆಯ ಜೊತೆಜೊತೆಗೆ ಫರ್ಪೆಕ್ಟ್​ ಫಿಟ್ನೆಸ್ ಕೂಡಾ ಮೇಂಟೇನ್ ಮಾಡಿದ್ದಾರೆ. ಹಾಲುಗೆನ್ನೆ ಚೆಲುವೆ ಆಶಿಕಾ ಅವರ ಫಿಟ್ನೆಸ್ ಗುಟ್ಟು ನಿತ್ಯದ […]

ದೈಹಿಕವಾಗಿ ಫಿಟ್ ಆಗಿರಲು ಇವುಗಳನ್ನ ಫಾಲೋ ಮಾಡ್ತಾರಂತೆ ಈ ಚೆಲುವೆ
Follow us on

ಈಕೆ ಚಂದನವನದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ತನ್ನ ನಟನೆಯ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹಲ್​ ಚಲ್ ಎಬ್ಬಿಸಿದ ಬ್ಯೂಟಿ. ತನ್ನ ಸೌಂದರ್ಯದಿಂದಲೇ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ಕ್ರೇಜಿ ಬಾಯ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ. ತಮ್ಮ ಮೊದಲ ಚಿತ್ರದಲ್ಲೇ ಭರವಸೆಯನ್ನು ಮೂಡಿಸಿ, ಇದೀಗ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ.

ಆಶಿಕಾ ಅವರು ನಟನೆಯ ಜೊತೆಜೊತೆಗೆ ಫರ್ಪೆಕ್ಟ್​ ಫಿಟ್ನೆಸ್ ಕೂಡಾ ಮೇಂಟೇನ್ ಮಾಡಿದ್ದಾರೆ. ಹಾಲುಗೆನ್ನೆ ಚೆಲುವೆ ಆಶಿಕಾ ಅವರ ಫಿಟ್ನೆಸ್ ಗುಟ್ಟು ನಿತ್ಯದ ಜಿಮ್​ ವರ್ಕೌಟ್ ಅಂತೆ. ಇವರು ವಾರದಲ್ಲಿ 3 ಅಥವಾ 4 ದಿನ ತಪ್ಪದೆ ಜಿಮ್ ವರ್ಕೌಟ್ ಮಾಡ್ತಾರಂತೆ. ಬೇರೆ ಎಕ್ಸ್​ಸೈಜ್ ಶುರು ಮಾಡುವುದಕ್ಕಿಂತ ಮೊದಲು ವಾರ್ಮ್​ ಅಫ್ ಎಕ್ಸ್​ಸೈಜ್​ಗಳ ಕಡೆ ಗಮನ ಹರಿಸೋ ಇವರು ಕಾರ್ಡಿಯೋದಿಂದ ವರ್ಕೌಟ್ ಸ್ಟಾರ್ಟ್ ಮಾಡ್ತಾರಂತೆ.

ಮೂರರಿಂದ ಐದು ನಿಮಿಷ ಈ ಎಕ್ಸ್​ಸೈಜ್ ಮಾಡ್ತಾರಂತೆ. ಹಾಗೆಯೇ ಸ್ಟ್ರೆಚಸ್ ಕೂಡಾ ಮಾಡ್ತಾರೆ. ಈ ಎಕ್ಸ್​ಸೈಜ್​ಗಳು ಇವರನ್ನು ದೈಹಿಕವಾಗಿ ರಿಲ್ಯಾಕ್ಸ್​ ಮಾಡುತ್ತಂತೆ. ಟ್ರೇನರ್ ಸಲಹೆಯಂತೆ ಜಿಮ್ ವರ್ಕೌಟ್​ಗಳನ್ನು ಫಾಲೋ ಮಾಡ್ತೀನಿ ಅಂತಾರೆ ಆಶಿಕಾ.

ಹಾಗೆಯೇ ಆಶಿಕಾ ಅವರ ಸೌಂದರ್ಯದ ಇನ್ನೊಂದು ಗುಟ್ಟು, ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಮತ್ತು ಜ್ಯೂಸ್. ಇದು ತ್ಚಚೆಯನ್ನು ತೇವಾಂಶದಿಂದ ಇರುವಂತೆ ಮಾಡಿ ಫಿಟ್ ಆಗಿಡಲು ಸಹಕಾರಿಯಾಗಿದೆಯಂತೆ.

Published On - 10:52 pm, Sun, 10 November 19