ಕುಡಿದು ರಂಪಾಟ ಮಾಡಿಕೊಂಡ್ರಾ ಕನ್ನಡ ನಟಿ ಮತ್ತು ಬಾಲಿವುಡ್ ನಿರ್ಮಾಪಕಿ?

ಬೆಂಗಳೂರು: ಸ್ಟಾರ್ ಹೋಟೆಲ್​ನಲ್ಲಿ ಕನ್ನಡದ ಸ್ಟಾರ್ ನಟಿ ಮತ್ತು ಬಾಲಿವುಡ್ ನಿರ್ಮಾಪಕಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಭಾನುವಾರ ರಾತ್ರಿ ರಿಚ್​ಮಂಡ್ ಟೌನ್​ನ ಸ್ಟಾರ್ ಹೋಟೆಲ್​ನಲ್ಲಿ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದಾರೆ. ಮೊದಲಿಗೆ ಹೋಟೆಲ್​ನಲ್ಲಿ ಕುಡಿದು ನಟಿ ಮತ್ತು ನಿರ್ಮಾಪಕಿ ರಂಪಾಟ ಮಾಡಿಕೊಂಡಿದ್ದಾರೆ. ಈ ವೇಳೆ ನಿರ್ಮಾಪಕಿಗೆ ವಿಸ್ಕಿ ಗ್ಲಾಸ್​ನಿಂದ ತಲೆಗೆ ಹೊಡೆದಿದ್ದಾರೆಂದು ನಟಿ ವಿರುದ್ಧ ಆರೋಪಿಸಲಾಗಿದೆ. ಮೊದಲಿಗೆ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಹಲ್ಲೆಗೊಳಗಾದ ನಿರ್ಮಾಪಕಿ ದೂರು ನೀಡಿದ್ದಾರೆ. ನಂತ್ರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸದೆ […]

ಕುಡಿದು ರಂಪಾಟ ಮಾಡಿಕೊಂಡ್ರಾ ಕನ್ನಡ ನಟಿ ಮತ್ತು ಬಾಲಿವುಡ್ ನಿರ್ಮಾಪಕಿ?
ಸಾಧು ಶ್ರೀನಾಥ್​

Updated on: Dec 27, 2019 | 2:33 PM

ಬೆಂಗಳೂರು: ಸ್ಟಾರ್ ಹೋಟೆಲ್​ನಲ್ಲಿ ಕನ್ನಡದ ಸ್ಟಾರ್ ನಟಿ ಮತ್ತು ಬಾಲಿವುಡ್ ನಿರ್ಮಾಪಕಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಭಾನುವಾರ ರಾತ್ರಿ ರಿಚ್​ಮಂಡ್ ಟೌನ್​ನ ಸ್ಟಾರ್ ಹೋಟೆಲ್​ನಲ್ಲಿ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದಾರೆ.

ಮೊದಲಿಗೆ ಹೋಟೆಲ್​ನಲ್ಲಿ ಕುಡಿದು ನಟಿ ಮತ್ತು ನಿರ್ಮಾಪಕಿ ರಂಪಾಟ ಮಾಡಿಕೊಂಡಿದ್ದಾರೆ. ಈ ವೇಳೆ ನಿರ್ಮಾಪಕಿಗೆ ವಿಸ್ಕಿ ಗ್ಲಾಸ್​ನಿಂದ ತಲೆಗೆ ಹೊಡೆದಿದ್ದಾರೆಂದು ನಟಿ ವಿರುದ್ಧ ಆರೋಪಿಸಲಾಗಿದೆ. ಮೊದಲಿಗೆ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಹಲ್ಲೆಗೊಳಗಾದ ನಿರ್ಮಾಪಕಿ ದೂರು ನೀಡಿದ್ದಾರೆ. ನಂತ್ರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸದೆ ನಟಿ ಮತ್ತು ನಿರ್ಮಾಪಕಿ ರಾಜಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನನಗೆ ಪಬ್ಲಿಸಿಟಿ ಪಡೆಯುವ ಅವಶ್ಯಕತೆಯಿಲ್ಲ:
ನನ್ನ, ಗೆಳತಿಯ ಮಧ್ಯೆ ಸಣ್ಣಪುಟ್ಟ ವಾಗ್ವಾದವಾಗಿದೆ. ಅದು ಬಿಟ್ಟರೆ ಬೇರೆ ಯಾವುದೇ ರೀತಿಯ ಘಟನೆ ನಡೆದಿಲ್ಲ. ವಾಗ್ವಾದವನ್ನು ವಿಡಿಯೋ ಮಾಡಿ ದೂರು ನೀಡಲಾಗಿದೆ. ಆದರೆ ನಮ್ಮ ಮಧ್ಯೆ ಯಾವುದೇ ಜಗಳ ನಡೆದಿಲ್ಲ. ನಾನು ನನ್ನ ಮನೆಯಲ್ಲಿ ಆರಾಮವಾಗಿ ಇದ್ದೇನೆ, ಸ್ನೇಹಿತೆ ಅವರ ಮನೆಯಲ್ಲಿ ಆರಾಮವಾಗಿದ್ದಾರೆ. ಆದರೆ ನಾನು ಇದನ್ನು ಪಬ್ಲಿಸಿಟಿಗೆ ಬಳಕೆ ಮಾಡುವುದಿಲ್ಲ. ಈ ರೀತಿ ಪಬ್ಲಿಸಿಟಿ ಪಡೆಯುವ ಅವಶ್ಯಕತೆ ನನಗಿಲ್ಲ ಎಂದು ಟಿವಿ9ಗೆ ನಟಿ ಸಂಜನಾ ಸ್ಪಷ್ಟಪಡಿಸಿದ್ದಾರೆ.

Published On - 2:29 pm, Fri, 27 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us