AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಳಿ ಬನ್ನಿ ಚಿತ್ರಮಂದಿರಗಳಿಗೆ.. ಕಲಾವಿದರಿಂದ ಪ್ರೇಕ್ಷಕ ಮಹಾಪ್ರಭುಗೆ ವೀಡಿಯೊ ಆಹ್ವಾನ!

ಶುಕ್ರವಾರ ಬಂತೆಂದರೆ ಸಿನಿಪ್ರೇಮಿಗಳಿಗೆ ಹಬ್ಬ. ತಮ್ಮ ನೆಚ್ಚಿನ ನಟ, ನಟಿ, ಕಲಾವಿದರನ್ನು ದೊಡ್ಡ ಪರದೆಯಲ್ಲಿ ಕಂಡು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಮುಂದೆ ಮುಂಜಾವಿನಿಂದಲೇ ಕಾದು ನಿಲ್ಲುವ ಜನರ ಪ್ರೀತಿಯೇ ಸಿನಿಮಾ ಜಗತ್ತಿನ ಶಕ್ತಿ. ಸೋಲಿಸಿದರೂ, ಗೆಲ್ಲಿಸಿದರೂ ಕಲಾವಿದರಿಗೆ ಅಭಿಮಾನಿಗಳೇ ದೇವರುಗಳು. ಆದರೆ ಈಗ ಅತ್ತು, ನಕ್ಕು, ಕೇಕೆ ಹೊಡೆಯುತ್ತಿದ್ದ, ತಮ್ಮ ನೆಚ್ಚಿನ ನಟ ಪರದೆಯ ಮೇಲೆ ಏಟು ತಿಂದಾಗ ಅದನ್ನು ತಾವೇ ಅನುಭವಿಸುವಷ್ಟು ಆಳವಾಗಿ ಸಿನಿಮಾವನ್ನು ಅನುಭವಿಸುತ್ತಿದ್ದ, ಫಸ್ಟ್ ಡೇ ಫಸ್ಟ್ ಶೋನಿಂದ ನೂರು ದಿನ ತುಂಬುವ ತನಕವೂ […]

ಮರಳಿ ಬನ್ನಿ ಚಿತ್ರಮಂದಿರಗಳಿಗೆ.. ಕಲಾವಿದರಿಂದ ಪ್ರೇಕ್ಷಕ ಮಹಾಪ್ರಭುಗೆ ವೀಡಿಯೊ ಆಹ್ವಾನ!
ಸಾಧು ಶ್ರೀನಾಥ್​
| Updated By: ಪೃಥ್ವಿಶಂಕರ|

Updated on:Nov 17, 2020 | 11:56 AM

Share

ಶುಕ್ರವಾರ ಬಂತೆಂದರೆ ಸಿನಿಪ್ರೇಮಿಗಳಿಗೆ ಹಬ್ಬ. ತಮ್ಮ ನೆಚ್ಚಿನ ನಟ, ನಟಿ, ಕಲಾವಿದರನ್ನು ದೊಡ್ಡ ಪರದೆಯಲ್ಲಿ ಕಂಡು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಮುಂದೆ ಮುಂಜಾವಿನಿಂದಲೇ ಕಾದು ನಿಲ್ಲುವ ಜನರ ಪ್ರೀತಿಯೇ ಸಿನಿಮಾ ಜಗತ್ತಿನ ಶಕ್ತಿ. ಸೋಲಿಸಿದರೂ, ಗೆಲ್ಲಿಸಿದರೂ ಕಲಾವಿದರಿಗೆ ಅಭಿಮಾನಿಗಳೇ ದೇವರುಗಳು. ಆದರೆ ಈಗ ಅತ್ತು, ನಕ್ಕು, ಕೇಕೆ ಹೊಡೆಯುತ್ತಿದ್ದ, ತಮ್ಮ ನೆಚ್ಚಿನ ನಟ ಪರದೆಯ ಮೇಲೆ ಏಟು ತಿಂದಾಗ ಅದನ್ನು ತಾವೇ ಅನುಭವಿಸುವಷ್ಟು ಆಳವಾಗಿ ಸಿನಿಮಾವನ್ನು ಅನುಭವಿಸುತ್ತಿದ್ದ, ಫಸ್ಟ್ ಡೇ ಫಸ್ಟ್ ಶೋನಿಂದ ನೂರು ದಿನ ತುಂಬುವ ತನಕವೂ ಸಿನಿಮಾ ಮಂದಿರಕ್ಕೆ ಮೆರುಗು ತುಂಬುತ್ತಿದ್ದ ಪ್ರೇಕ್ಷಕ ಮಹಾಪ್ರಭುಗಳಿಲ್ಲದೇ ಚಿತ್ರಮಂದಿರಗಳು ಖಾಲಿ ಬಿದ್ದು ಭರ್ಜರಿ ಎಂಟು ತಿಂಗಳು ತುಂಬಿದೆ.

Celebrate Cinema Again: ಕೊರೊನಾ ಬಾರದಿದ್ದರೆ ಅದೆಷ್ಟೋ ಸಿನಿಮಾಗಳು ಈ ಅವಧಿಯಲ್ಲಿ ಬಂದು ಹೋಗಬೇಕಿತ್ತು. ಅದೆಷ್ಟೋ ಹೊಸ ಕಲಾವಿದರು ಪರದೆಯ ಮೇಲೆ ಕಾಣಿಸಿಕೊಳ್ಳಬೇಕಿತ್ತು. ಪ್ರತಿ ಶುಕ್ರವಾರ ಪತ್ರಿಕೆಯ ಪುಟಪುಟಗಳಲ್ಲಿ ಸಿನಿ ಸುದ್ದಿ ರಾರಾಜಿಸಬೇಕಿತ್ತು. ಆದರೆ, ಕೊರೊನಾ ದೆಸೆಯಿಂದ ಎಲ್ಲವೂ ಖಾಲಿ ಖಾಲಿ.

ಇದೀಗ ಸರ್ಕಾರ ಕೊರೊನಾ ತಡೆಗಟ್ಟಲು ಹೇರಿದ್ದ ನಿಯಮಗಳನ್ನು ಹಂತಹಂತವಾಗಿ ಸಡಿಲಿಸಿದೆ. ತಿಂಗಳುಗಟ್ಟಲೆ ಬಾಗಿಲೆಳೆದಿದ್ದ ಸಿನಿ ಮಂದಿರಗಳಿಗೆ ನಿಧಾನಕ್ಕೆ ಜೀವ ಬರುತ್ತಿದೆ. ಅದೇನೇ ಆದರೂ ಜನರಲ್ಲಿ ಕೊರೊನಾ ಭಯ ದಟ್ಟವಾಗಿರುವುದರಿಂದ ಮೊದಲಿನಂತೆ ಥಿಯೇಟರ್​ಗಳು ಕಳೆಗಟ್ಟುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಸಿನಿ ಪ್ರೇಮಿಗಳನ್ನು ಚಿತ್ರಮಂದಿರತ್ತ ಮರಳಿ ಕರೆಯಲು ಕೆಆರ್​ಜಿ ಕನೆಕ್ಟ್ಸ್ ಹೊಸ ವೀಡಿಯೋವನ್ನು ಬಿಡುಗಡೆಮಾಡಿದೆ.

ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಆಮಂತ್ರಣ ವೀಡಿಯೋದಲ್ಲಿ ಕಲಾವಿದರಾದ ಗಿರೀಶ್ ಜಟ್ಟಿ ಹಾಗೂ ಬಿ.ಪಿ.ಗೋಪಾಲ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಧೂಳು ತುಂಬಿದ್ದ ಚಿತ್ರ ಮಂದಿರವೊಂದನ್ನು ಪುನಃ ತೆರೆಯುತ್ತಿರುವ ಪರಿಕಲ್ಪನೆಯಲ್ಲಿ ಚಿತ್ರಿಸಲಾಗಿದೆ. ನಡುವಲ್ಲಿ ಚಿತ್ರಮಂದಿರದ ಗತಕಾಲದ ವೈಭವಗಳನ್ನು ನೆನಪಿಸುವ ಪ್ರೇಕ್ಷಕರ ಗುಂಪು, ಸಂಭ್ರಮಗಳನ್ನು ತೋರಿಸಲಾಗಿರುವ ವೀಡಿಯೋ ಮಾಸ್ಕ್ ಧರಿಸಿ ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಧಾವಿಸುವ ಆಶಾವಾದದೊಂದಿಗೆ ಕೊನೆಗೊಂಡಿದೆ.

ವೀಡಿಯೋದ ಅಂತ್ಯದಲ್ಲಿ ನಟರಾದ ಡಾ.ಶಿವರಾಜ್​ ಕುಮಾರ್, ದುನಿಯಾ ವಿಜಯ್, ಶ್ರೀ ಮುರುಳಿ, ಧನಂಜಯ್​, ಗಣೇಶ್​, ಪುನೀತ್ ರಾಜ್​ಕುಮಾರ್ ಪ್ರೇಕ್ಷಕ ಪ್ರಭುಗಳನ್ನು ಚಿತ್ರಮಂದಿರಗಳಿಗೆ ಆಹ್ವಾನಿಸಿದ್ದು ಮರಳಿ ಬನ್ನಿ ಮತ್ತೆ ಸಂಭ್ರಮಿಸೋಣ ಎಂದಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 15,000ಕ್ಕೂ ಅಧಿಕ ವೀಕ್ಷಣೆ ಗಳಿಸಿದ ವೀಡಿಯೋ ಮನಮುಟ್ಟುವಂತೆ ಮೂಡಿಬಂದಿದೆ.

Published On - 11:55 am, Tue, 17 November 20

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್