ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಪತ್ನಿ ವಿಧಿವಶ

|

Updated on: Jan 16, 2021 | 9:21 AM

ಯಾರಿಗೂ ಹೇಳ್ಬೇಡಿ ಚಿತ್ರದ ಮರೆಯಲಾಗದಂತಹ "ಚೆನ್ನಾಗ್ ಹೇಳಿದ್ರಿ" ಅನ್ನೋ ಸಂಭಾಷಣೆಯಿಂದ ಫೇಮಸ್ ಆಗಿದ್ದ ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶ.

ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಪತ್ನಿ ವಿಧಿವಶ
ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಹಾಗೂ ಪತ್ನಿ ಸರ್ವಮಂಗಳ
Follow us on

ಬೆಂಗಳೂರು: ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ(68) ನಿನ್ನೆ ರಾತ್ರಿ 8.30ರ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮ್ಮನಳ್ಳಿಯ ಚಿತಾಗಾರದಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ.

ಭಂಡ ನನ್ನ ಗಂಡ, ಹೆಂಡ್ತಿಯರೇ ಹುಷಾರ್ ಸೇರಿ ಹಲವು ಸಿನಿಮಾಗಳಲ್ಲಿ ಸರ್ವಮಂಗಳ ನಟಿಸಿದ್ದರು. ಯಾರಿಗೂ ಹೇಳ್ಬೇಡಿ ಚಿತ್ರದ ಮರೆಯಲಾಗದಂತಹ “ಚೆನ್ನಾಗ್ ಹೇಳಿದ್ರಿ” ಅನ್ನೋ ಸಂಭಾಷಣೆಯಿಂದ ಫೇಮಸ್ ಆಗಿದ್ರು.