ಬೆಂಗಳೂರು: ವಿಷ್ಣು ಸರ್ ಆಯ್ಕೆ ಮಾಡಿಕೊಳ್ಳುತ್ತಿದ್ದ ಕತೆಗಳು ಮತ್ತು ಪಾತ್ರಗಳು ನೋಡುಗರನ್ನು ಆವರಿಸಿಕೊಳ್ಳುತ್ತಿದ್ದವು. ಇದೇ ಕಾರಣದಿಂದ ಅವರ ಸಿನಿಮಾಗಳು ಅಂದ್ರೆ ನಮಗೆಲ್ಲ ಇಷ್ಟ ಆಗೋದು. ವರ್ಷಗಳು ಉರುಳಿದರೂ ಅವರ ಸಿನಿಮಾಗಳ ಗುಂಗಿನಿಂದ ಹೊರಬರಲು ಆಗುತ್ತಿರಲಿಲ್ಲ.
ಹಿಂದೆಲ್ಲಾ ಸಿನಿಮಾಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ ಹೀಗೆ ಕುಟುಂಬ ಸಮೇತ ಹೋಗುತ್ತಿದ್ದೆವು. ವಿಷ್ಣು ಸರ್ ಸಿನಿಮಾ ಅಂದ ತಕ್ಷಣ ಯಾವುದೇ ಮುಜುಗರವಿಲ್ಲದೆ ನೋಡಬಹುದಾಗಿತ್ತು. ಅವರ ಸಿನಿಮಾ ಅಂದರೆ ಕುಟುಂಬ ಸಹಿತ ನೋಡಬಹುದು ಎಂದು ಎಲ್ಲರಿಗೂ ಒಂದು ಗಟ್ಟಿಯಾದ ನಂಬಿಕೆ ಇತ್ತು, ವಿಷ್ಣು ಸರ್ ಆ ನಂಬಿಕೆಯನ್ನ ಕೊನೆಯವರೆಗೂ ಉಳಿಸಿಕೊಂಡಿದ್ದರು. ಅವರ ಚಿತ್ರಗಳಲ್ಲಿ ಸ್ವಚ್ಛ ಮನರಂಜನೆಯ ಗ್ಯಾರಂಟಿ ಇತ್ತು.
ನವಿರಾದ ಪ್ರೇಮಕತೆ, ಮೈನವಿರೇಳಿಸುವ ಸಾಹಸ, ಅದ್ಭುತವಾದ ಸಂಗೀತ, ರಸಭರಿತವಾದ ಶೃಂಗಾರ, ನವನವೀನ ಕತೆ, ಕಣ್ಣಂಚಲ್ಲಿ ನೀರು ತರಿಸುವ ಭಾವುಕತೆ ಒಟ್ಟಾರೆ ಈ ಎಲ್ಲಾ ಅಂಶಗಳನ್ನೂ ಒಳಗೊಂಡ ಸಿನಿಮಾ ವಿಷ್ಣು ಸರ್ ಅವರದ್ದಾಗಿರುತ್ತಿತ್ತು. ಕನ್ನಡ ಸಿನಿಮಾ ಶ್ರೀಮಂತವಾಗಲು ವಿಷ್ಣು ಸರ್ ಕಾಣಿಕೆ ಅಪಾರವಾದದ್ದು. ಇಂದಿನ ಯುವನಟರಿಗೆ ಅವರು ಆದರ್ಶಪ್ರಾಯರಾಗಿದ್ದರು .
ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಬಲಗೈ ಆದರೆ ವಿಷ್ಣು ಸಾರ್ ಎಡಗೈ. ಅದಕ್ಕೇ ಅವರ ಆಪ್ತರು ಅವರನ್ನು ಪ್ರೀತಿಯಿಂದ ಲೊಡ್ಡೆ ಎಂದು ಕರೆಯುತ್ತಿದ್ದರು.
ಮಾಸ್ತಿ ಪರಿಚಯ: ಮಾಸ್ತಿ ಅವರು ಸಿನಿಮಾ ಬರಹಗಾರರು. ಕಡ್ಡಿಪುಡಿ, ಟಗರು, ಅಯೋಗ್ಯ, ಕಾಲೇಜ್ ಕುಮಾರ, ಸಲಗ ಚಿತ್ರಗಳ ಸಂಭಾಷಣೆಕಾರರು.
ವಿಷ್ಣುವರ್ಧನ್ 11ನೇ ವರ್ಷದ ಪುಣ್ಯತಿಥಿ: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ
Published On - 3:58 pm, Wed, 30 December 20