AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2020 Year in Review | ಇಲ್ಲಿದೆ ಜನಮೆಚ್ಚಿದ ಹಾಡುಗಳ ಪಟ್ಟಿ; ಕೇಳಿ ಆನಂದಿಸಿ

2020ರ ಕೊನೆಯಲ್ಲಿ ನಾವಿದ್ದೇವೆ. ಈ ಬಾರಿ ಕೊರೊನಾ ಬಂದ ಕಾರಣ ವರ್ಷದ ಆರಂಭ ಹಾಗೂ ವರ್ಷದ ಕೊನೆಯಲ್ಲಿ ಮಾತ್ರ ಸಿನಿಮಾಗಳು ರಿಲೀಸ್​ ಆಗಿವೆ. ಹೀಗಾಗಿ, ಸಹಜವಾಗಿಯೇ ಹಾಡುಗಳ ಸಂಖ್ಯೆ ಕೂಡ ಕಡಿಮೆ. ಆದರೆ, ಕೆಲ ಹಾಡುಗಳು ನಮ್ಮ ಕಿವಿಯಲ್ಲಿ ಗುನುಗುವ ರೀತಿಯಲ್ಲೇ ಇವೆ. ಈ ಬಾರಿಯ ಟಾಪ್​ ಟೆನ್​ ಹಾಡುಗಳನ್ನು ಟಿವಿ9 ತಂಡ ಸೆಲೆಕ್ಟ್​ ಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

2020 Year in Review | ಇಲ್ಲಿದೆ ಜನಮೆಚ್ಚಿದ ಹಾಡುಗಳ ಪಟ್ಟಿ; ಕೇಳಿ ಆನಂದಿಸಿ
ಪೊಗರು ಚಿತ್ರದ ‘ಕರಾಬು’ ಹಾಡು ಜನಪ್ರಿಯವಾಗಿದೆ...
ರಾಜೇಶ್ ದುಗ್ಗುಮನೆ
| Edited By: |

Updated on:Dec 30, 2020 | 7:31 PM

Share

ಹಾಡು: ಕರಾಬು, ಚಿತ್ರ: ಪೊಗರು ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ಕಾಣಿಸಿಕೊಂಡಿರುವ ‘ಪೊಗರು’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದ ‘ಕರಾಬು…’ ಸಾಂಗು 2020ರಲ್ಲಿ ಧೂಳೆಬ್ಬಿಸಿದೆ. ಚಂದನ್​ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಈ ಹಾಡನ್ನು ಹಾಡಿದ್ದಾರೆ. ಈ ಸಾಂಗ್​ ಯೂಟ್ಯೂಬ್​ನಲ್ಲಿ 18.3 ಕೋಟಿ ಬಾರಿ ವೀಕ್ಷಣೆ ಕಂಡು ದಾಖಲೆ ಬರೆದಿದೆ.

ಹಾಡು: ಮರಳಿ ಮನಸಾಗಿದೆ, ಚಿತ್ರ: ಜಂಟಲ್​ಮನ್​ ವರ್ಷದ ಆರಂಭದಲ್ಲಿ ತೆರೆಕಂಡ ಜಂಟಲ್​ಮನ್​ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾದ ‘ಮರಳಿ ಮನಸಾಗಿದೆ…’ ಹಾಡೂ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತ್ತು. ಅದ್ಭುತ ಸಂಗೀತ ಸಂಯೋಜನೆ, ಕಾಡುವ ಸಾಹಿತ್ಯದಿಂದ ಈ ಹಾಡು ಎಲ್ಲರ ಗಮನ ಸೆಳೆದಿದೆ. ಸಂಜಿತ್​ ಹೆಗಡೆ, ಸಿ.ಆರ್.​ ರಾಬಿ ಈ ಹಾಡನ್ನು ಹಾಡಿದ್ದರು.

ಹಾಡು: ಲವ್​ ಯು ಚಿನ್ನಾಮ ಚಿತ್ರ: ಲವ್​ ಮಾಕ್ಟೇಲ್​ ಈ ಬಾರಿಯ ಅತಿ ರೊಮ್ಯಾಂಟಿಕ್​ ಸಿನಿಮಾಗಳ ಸಾಲಿನಲ್ಲಿ ಮೊದಲಿಗೆ ನಿಲ್ಲೋದು ‘ಲವ್​ ಮಾಕ್ಟೇಲ್’​ ಚಿತ್ರ. ಕೃಷ್ಣ ಹಾಗೂ ಮಿಲನಾ ನಾಗರಾಜ್ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ‘ಲವ್​ ಯು ಚಿನ್ನ’ ಹಾಡು ಎಲ್ಲರ ಕಿವಿಯಲ್ಲಿ ಗುನುಗುವಂತೆ ಮಾಡಿತ್ತು. ರಘು ದೀಕ್ಷಿತ್​ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ಶ್ರುತಿ ವಿ.ಎಸ್.​ ಹಾಗೂ ನಕುಲ್​ ಅಭಯಂಕರ್​ ಹಾಡಿದ್ದರು.

ಹಾಡು: ಸೋಲ್​ ಆಫ್​ ದಿಯಾ ಚಿತ್ರ ದಿಯಾ ಈ ಬಾರಿ ಕನ್ನಡದಲ್ಲಿ ತೆರೆಗೆ ಬಂದ ಅತ್ಯಂತ ಟ್ರ್ಯಾಜಡಿ ಸಿನಿಮಾಗಳ ಸಾಲಿನಲ್ಲಿ ‘ದಿಯಾ’ ಮೊದಲಿದೆ. ಈ ಚಿತ್ರದ ‘ಸೋಲ್​ ಆಫ್​ ದಿಯಾ’ ಹಾಡು ಎಲ್ಲರ ಕಿವಿಯಲ್ಲಿ ಗುನುಗುಟ್ಟಿತ್ತು. ಅಜನೀಶ್​ ಲೋಕನಾಥ್​ ಅವರ ಸಂಗೀತ ಸಂಯೋಜನೆ ಈ ಹಾಡಿಗೆ ಹೊಸ ಬಲ ತುಂಬಿತ್ತು.

ಹಾಡು: ಪಟಾಕಿ ಪೊರಿಯೋ, ಚಿತ್ರ: ಕೋಟಿಗೊಬ್ಬ 3 ಸುದೀಪ್​ ನಟನೆಯ ಕೋಟಿಗೊಬ್ಬ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದೆ. ಈ ಸಿನಿಮಾದ ಪಟಾಕಿ ಪೊರಿಯೋ ಹಾಡು ಸಖತ್​ ವೈರಲ್​ ಆಗಿತ್ತು. ಈ ವಿಶೇಷ ಹಾಡಿನಲ್ಲಿ ಆಶಿಕಾ ಸ್ಟೆಪ್​ ಹಾಕಿದ್ದಾರೆ.

ಹಾಡು: ಬಾ ಬಾ ನಾ ರೆಡಿ, ಚಿತ್ರ: ರಾಬರ್ಟ್ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದ ಬಾ ಬಾ ನಾ ರೆಡಿ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಈಗಾಗಲೇ ತೆರೆಕಾಣಬೇಕಿತ್ತು.

ಹಾಡು: ಮಾದೇವ ಚಿತ್ರ: ಪಾಪ್​ಕಾರ್ನ್​ ಮಂಕಿ ಟೈಗರ್ ಸುಕ್ಕಾ ಸೂರಿ ನಿರ್ದೇಶನದ ‘ಪಾಪ್​ಕಾರ್ನ್​ ಮಂಕಿ ಟೈಗರ್​’ ಸಿನಿಮಾ ರಾ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರದ ‘ಮಾದೇವ’ ಹಾಡು ಎಲ್ಲರನ್ನು ಹೊಸ ನಶೆಯಲ್ಲಿ ತೇಲಿಸಿಬಿಟ್ಟಿತ್ತು. ಸಂಜಿತ್​ ಹೆಗಡೆ ಕಂಠದಿಂದ ಮೂಡಿ ಬಂದ ಈ ಹಾಡಿಗೆ ಎಲ್ಲರೂ ತಲೆದೂಗಿದ್ದರು.

ಹಾಡು: ಸೂರಿ ಅಣ್ಣ, ಚಿತ್ರ: ಸಲಗ ಸಲಗ ಸಿನಿಮಾ ಮೂಲಕ ಇದೇ ಮೊದಕ ಬಾರಿಗೆ ದುನಿಯಾ ವಿಜಿ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಈ ಚಿತ್ರದ ಹಾಡು ಸೂರಿ ಅಣ್ಣ ಪಕ್ಕಾ ರಾ ಶೈಲಿಯಲ್ಲಿ ಮೂಡಿ ಬಂದಿದೆ. ಕಳೆದ ವರ್ಷ ಜನವರಿಯಲ್ಲಿ ರಿಲೀಸ್​ ಆಗಿದ್ದ ಈ ಹಾಡು ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.

ಹಾಡು: ಹೋಗ್ಬಿಟ್ಟಾ ಚಾರ್ಲ್ಸ್​ ಹೋಗ್ಬಿಟ್ಟಾ, ಬೆಂಗಳೂರು ಸಾಂಗ್​ ಚಿತ್ರ: ಫ್ರೆಂಚ್ ಬಿರಿಯಾನಿ ಡ್ಯಾನಿಶ್​ ಸೇಟ್​ ನಟನೆಯ ಫ್ರೆಂಚ್​ ಬಿರಿಯಾನಿ ಚಿತ್ರ ಒಟಿಪಿಯಲ್ಲಿ ರಿಲೀಸ್​ ಆಗಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ಹೋಗ್ಬಿಟ್ಟಾ ಚಾರ್ಲ್ಸ್​ ಹೋಗ್ಬಿಟ್ಟಾ ಹಾಗೂ ಬೆಂಗಳೂರು ಸಾಂಗ್​ ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರಲ್ಲೂ ಚಾರ್ಲ್ಸ್​ ಹಾಡುಗಳು ಮೀಮ್​ ವಲಯದಲ್ಲಿ ಹೆಚ್ಚು ಬಳಕೆ ಆಗಿತ್ತು.

Published On - 7:26 pm, Wed, 30 December 20

Follow Us
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು