ಫ್ಲ್ಯಾಟ್​ಗಳಲ್ಲಿ Drugs ಪಾರ್ಟಿ ಆಯೋಜನೆ.. ಕೆಲವರಿಗೆ ಮಾತ್ರ ಎಂಟ್ರಿ, ಯಾಕೆ ಗೊತ್ತಾ?

| Updated By: KUSHAL V

Updated on: Sep 13, 2020 | 11:57 AM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಶೆ ನಂಟು ಪ್ರಕರಣದಲ್ಲಿ ಬಗೆದಷ್ಟೂ ಬಯಲಾಗ್ತಿದೆ ನಟಿಮಣಿಯರ ಪಾತ್ರ. ಇದೀಗ, ಫ್ಲ್ಯಾಟ್​ಗಳಲ್ಲಿ ರಾತ್ರಿಯಿಂದ ಬೆಳಗಾಗೋವರೆಗೂ ನಶೆ ಪಾರ್ಟಿಗಳು ನಡೆಯುತ್ತಿತ್ತು ಎಂಬ ಮಾಹಿತಿ ಬಯಲಾಗಿದೆ. ನಟಿ ಸಂಜನಾ ಗಲ್ರಾನಿ ಮತ್ತು ಆಕೆಯ ಗ್ಯಾಂಗ್ ಪರಿಚಿತರನ್ನೇ ಆಯ್ಕೆ ಮಾಡಿಕೊಂಡು ನೈಟ್​ ಫುಲ್​ ಡ್ರಗ್ ಪಾರ್ಟಿ ನಡೆಸುತ್ತಿದ್ರು ಎಂದು ತಿಳಿದುಬಂದಿದೆ. ಕೆಲವೇ ವ್ಯಕ್ತಿಗಳ ಜೊತೆಗೆ ಬೆಳಗಿನ ಜಾವದವರೆಗೂ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತಂತೆ. ಈ ಪಾರ್ಟಿಗಳಲ್ಲಿ ಮಾದಕ ವಸ್ತು ವ್ಯಸನಿಗಳಿಗೆ ಮಾತ್ರ ಎಂಟ್ರಿ ಇರುತ್ತಿತ್ತು ಎಂಬ ಮಾಹಿತಿ […]

ಫ್ಲ್ಯಾಟ್​ಗಳಲ್ಲಿ Drugs ಪಾರ್ಟಿ ಆಯೋಜನೆ.. ಕೆಲವರಿಗೆ ಮಾತ್ರ ಎಂಟ್ರಿ, ಯಾಕೆ ಗೊತ್ತಾ?
ನಟಿ ಸಂಜನಾ ಗಲ್ರಾನಿ
Follow us on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಶೆ ನಂಟು ಪ್ರಕರಣದಲ್ಲಿ ಬಗೆದಷ್ಟೂ ಬಯಲಾಗ್ತಿದೆ ನಟಿಮಣಿಯರ ಪಾತ್ರ. ಇದೀಗ, ಫ್ಲ್ಯಾಟ್​ಗಳಲ್ಲಿ ರಾತ್ರಿಯಿಂದ ಬೆಳಗಾಗೋವರೆಗೂ ನಶೆ ಪಾರ್ಟಿಗಳು ನಡೆಯುತ್ತಿತ್ತು ಎಂಬ ಮಾಹಿತಿ ಬಯಲಾಗಿದೆ.

ನಟಿ ಸಂಜನಾ ಗಲ್ರಾನಿ ಮತ್ತು ಆಕೆಯ ಗ್ಯಾಂಗ್ ಪರಿಚಿತರನ್ನೇ ಆಯ್ಕೆ ಮಾಡಿಕೊಂಡು ನೈಟ್​ ಫುಲ್​ ಡ್ರಗ್ ಪಾರ್ಟಿ ನಡೆಸುತ್ತಿದ್ರು ಎಂದು ತಿಳಿದುಬಂದಿದೆ. ಕೆಲವೇ ವ್ಯಕ್ತಿಗಳ ಜೊತೆಗೆ ಬೆಳಗಿನ ಜಾವದವರೆಗೂ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತಂತೆ. ಈ ಪಾರ್ಟಿಗಳಲ್ಲಿ ಮಾದಕ ವಸ್ತು ವ್ಯಸನಿಗಳಿಗೆ ಮಾತ್ರ ಎಂಟ್ರಿ ಇರುತ್ತಿತ್ತು ಎಂಬ ಮಾಹಿತಿ ದೊರೆತಿದೆ. ಸಂಜನಾ ಮತ್ತು ಆಕೆಯ ಗ್ಯಾಂಗ್ ಇದಕ್ಕಾಗಿಯೇ ಪ್ರತ್ಯೇಕ ತಂಡ ಸಹ ರಚಿಸಿಕೊಂಡಿದ್ದರಂತೆ. ತಮ್ಮ ಪರಿಚಿತರಿಗೆ ಮಾತ್ರ ಪಾರ್ಟಿ ಆಯೋಜಿಸಿ ಆಹ್ವಾನ ನೀಡುತ್ತಿದ್ದರಂತೆ.

ಈ ವಿಷಯ ಹೊರಲೋಕಕ್ಕೆ ಗೊತ್ತಾಗಬಾರದೆಂದು ಕೆಲ ಫ್ಲ್ಯಾಟ್‌ಗಳನ್ನ ಆಯ್ಕೆ ಮಾಡಿಕೊಂಡು ಅಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮನೆಯಲ್ಲೇ ಡ್ರಗ್ಸ್​ ಸೇವನೆ ಮಾಡುವುದರಿಂದ ಯಾರಿಗೂ ಸಂಶಯ ಬರುವುದಿಲ್ಲ ಎಂಬುವುದು ಇವರ ಯೋಜನೆಯಾಗಿತ್ತು. ಈ ರೀತಿ ಜನರನ್ನು ಒಟ್ಟುಗೂಡಿಸಿ ಮಾದಕ ಲೋಕದಲ್ಲಿ ಮಿಂದೇಳುತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ.