ಸ್ಯಾಂಡಲ್‌ವುಡ್ Drugs ಜಾಲ: ರಾಗಿಣಿ ಮತ್ತು ಸಂಜನಾ ನೀಡಿರುವ ಲಿಸ್ಟ್ನಲ್ಲಿ ಯಾರಿದ್ದಾರೆ?
[lazy-load-videos-and-sticky-control id=”fPm74_LinaQ”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಅಧಿಕಾರಿಗಳು ಬಂಧಿಸಿರುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 201ರಡಿ ಕೇಸ್ ಹಾಕಲು ಸಿದ್ಧತೆ ನಡೆಸಲಾಗಿದೆ.ಆರೋಪಿಗಳು ತಮ್ಮ ಮೊಬೈಲ್ ಮೆಸೇಜ್ ಡಿಲೀಟ್ ಸೇರಿ ಹಲವು ಸಾಕ್ಷ್ಯಗಳನ್ನು ನಾಶ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ದೂರಿಗೆ ಐಪಿಸಿ ಸೆಕ್ಷನ್ 201 ಸೇರಿಸುವ ಬಗ್ಗೆ ಚಿಂತನೆ ನಡೆಸಿರುವ ಸಿಸಿಬಿ ಅಧಿಕಾರಿಗಳು ಈ ಕುರಿತು ಕಾನೂನು ತಜ್ಞರ ಮೊರೆ ಹೋಗಲಿದ್ದಾರೆ. ರಾಗಿಣಿ, ಸಂಜನಾ ಹೇಳಿರುವ ಲಿಸ್ಟ್ನಲ್ಲಿ ಯಾರಿದ್ದಾರೆ? FSL ಕಚೇರಿಯಲ್ಲಿ […]
[lazy-load-videos-and-sticky-control id=”fPm74_LinaQ”]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಅಧಿಕಾರಿಗಳು ಬಂಧಿಸಿರುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 201ರಡಿ ಕೇಸ್ ಹಾಕಲು ಸಿದ್ಧತೆ ನಡೆಸಲಾಗಿದೆ.ಆರೋಪಿಗಳು ತಮ್ಮ ಮೊಬೈಲ್ ಮೆಸೇಜ್ ಡಿಲೀಟ್ ಸೇರಿ ಹಲವು ಸಾಕ್ಷ್ಯಗಳನ್ನು ನಾಶ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ದೂರಿಗೆ ಐಪಿಸಿ ಸೆಕ್ಷನ್ 201 ಸೇರಿಸುವ ಬಗ್ಗೆ ಚಿಂತನೆ ನಡೆಸಿರುವ ಸಿಸಿಬಿ ಅಧಿಕಾರಿಗಳು ಈ ಕುರಿತು ಕಾನೂನು ತಜ್ಞರ ಮೊರೆ ಹೋಗಲಿದ್ದಾರೆ.
ರಾಗಿಣಿ, ಸಂಜನಾ ಹೇಳಿರುವ ಲಿಸ್ಟ್ನಲ್ಲಿ ಯಾರಿದ್ದಾರೆ? FSL ಕಚೇರಿಯಲ್ಲಿ ವಿಚಾರಣೆಗೊಳಗಾಗಿರುವ ರಾಗಿಣಿ ಮತ್ತು ಸಂಜನಾ ನೀಡುವ ಹೇಳಿಕೆಯ ಮೇಲೆ ಸದ್ಯ ಕುತೂಹಲ ಹುಟ್ಟಿದೆ. ಯಾಕಂದ್ರೆ, ಸಂಜನಾ ಮತ್ತು ರಾಗಿಣಿ ಮತ್ತೊಂದಷ್ಟು ಜನರ ಬಗ್ಗೆ ಬಾಯಿ ಬಿಟ್ಟರೆ ಅವರನ್ನೂ ವಿಚಾರಣೆ ಮಾಡುವುದು ಗ್ಯಾರಂಟಿ. ಜೊತೆಗೆ, ಈಗಾಗಲೇ ನಟಿಮಣಿಯರಿಬ್ಬರು 20 ಕ್ಕೂ ಹೆಚ್ಚು ಜನರ ಹೆಸರು ಹೇಳಿರುವ ಸಾಧ್ಯತೆಯಿದೆಯಂತೆ.
ಪಾರ್ಟಿಗಳಲ್ಲಿ ಭಾಗಿಯಾಗಿದ್ದವರ ಮೇಲೂ ಸಿಸಿಬಿ ಅಧಿಕಾರಿಗಳ ಕಣ್ಣಿಟ್ಟಿದ್ದು, ರಾಗಿಣಿ ಹಾಗೂ ಸಂಜನಾ ಹೇಳ್ತಿರೋ ಎಲ್ಲಾ ಹೆಸರುಗಳನ್ನ ಸಿಸಿಬಿ ಅಧಿಕಾರಿ ಅಂಜುಮಾಲಾ ಲಿಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಆರೋಪಿಗಳು ಹೇಳಿದ ವ್ಯಕ್ತಿಗಳ ಪಾತ್ರ ಇದ್ದರೆ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ.
Published On - 2:34 pm, Sun, 13 September 20