ಸಂಜನಾ-ನಿವೃತ್ತ ಪೊಲೀಸ್ ಅಧಿಕಾರಿ ಜೊತೆಗಿನ ಫೋಟೋ ರಿಲೀಸ್

ಸಂಜನಾ-ನಿವೃತ್ತ ಪೊಲೀಸ್ ಅಧಿಕಾರಿ ಜೊತೆಗಿನ ಫೋಟೋ ರಿಲೀಸ್

[lazy-load-videos-and-sticky-control id=”wDLPo5b70Do”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿಗೆ ನಿವೃತ್ತ ಪೊಲೀಸ್ ಅಧಿಕಾರಿ ಜೊತೆ ನಂಟಿದೆ ಎಂದು ಟಿವಿ9ಗೆ ಪ್ರಶಾಂತ್ ಸಂಬರಗಿ ಈ ಹಿಂದೆಯೇ ಹೇಳಿದ್ದರು.

ದೇಶದಲ್ಲಿ ಮಾಡ್ತಿರೋ ಡ್ರಗ್ಸ್ ಕೇಸ್ ದೇಶದ್ರೋಹದ ಕೆಲಸ. ಪೇಜ್​ 3 ಪಾರ್ಟಿಗಳಲ್ಲಿ, ಟೆನ್ನಿಸ್ ಆಡುವ ಹುಚ್ಚು ಆ ಅಧಿಕಾರಿಗಿತ್ತು. ನಾನು ಹಲವು ದಿನಗಳಿಂದ ಹೇಳಿದ್ದೇನೆ ರಾಜಕಾರಣಿ ಶ್ರೀರಕ್ಷೆ ಸಂಜನಾಗೆ ಇದೆ ಎಂದು. ಸೆಪ್ಟೆಂಬರ್ 3ರಂದು ನಾನು ಹೇಳಿದ್ದ 3 ಸತ್ಯಗಳು ಹೊರ ಬಂದಿದೆ.

ಪೊಲೀಸ್ ಅಧಿಕಾರಿಗಳು ನಿವೃತ್ತರಾದ್ರೂ ದೇಶಸೇವೆಗೆ ಸಿದ್ಧರಿರಬೇಕು. ಸಂಜನಾ-ನಿವೃತ್ತ ಪೊಲೀಸ್ ಅಧಿಕಾರಿ ಜೊತೆಗಿನ ಫೋಟೋ ರಿಲೀಸ್ ಆಗಿದೆ. ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳ ಕುರಿತು ಮಾಹಿತಿ ನೀಡಿದ್ದೇನೆ. ಇವರು ಕೇವಲ ಕಾನೂನಿನ ಕ್ರಮಗಳ ಕುರಿತು ನೆರವು ನೀಡಿರಬಹುದು ಎಂದು ಟಿವಿ9ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗತಾನೆ ಹೇಳಿದ್ದಾರೆ.

ಈಗಿನ ಸರ್ಕಾರ, ಈಗಿನ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ‘ಡ್ರಗ್ಸ್’ ವಿರುದ್ಧದ ಹೋರಾಟದ ಕುರಿತು ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿದೆ. ಆಗಸ್ಟ್ 25ರಿಂದ ಡ್ರಗ್​ ಪೆಡ್ಲರ್​ಗಳಿಗೆ ಶ್ರೀರಕ್ಷೆ ನೀಡಲಾಗಿದೆ. ರಾಜಕೀಯ ಶ್ರೀರಕ್ಷೆ ಇರುವುದರಿಂದಲೇ ಡ್ರಗ್​ ಪೆಡ್ಲರ್​ಗಳ ಡೀಲ್ ಆಗುತ್ತಿದೆ.

ಇನ್ನೂ ಅನೇಕರ ಬಗ್ಗೆ ನನಗೆ ಸರಿಯಾದ ಮಾಹಿತಿ ಇದುವರೆಗೆ ಸಿಕ್ಕಿಲ್ಲ. ಕ್ಲಬ್​​ಗಳಲ್ಲಿ, ಪಾರ್ಟಿಗಳಲ್ಲಿ ನಟಿಯರ ಜೊತೆ ಊಟ ಮಾಡಿದ್ದಾರೆ. ಇಂದಿರಾನಗರ ಕ್ಲಬ್​ನಲ್ಲಿ ಇವರು ಟೆನ್ನಿಸ್ ಆಡೋದನ್ನ ನೋಡಿದ್ದೇನೆ. ಡ್ರಗ್ಸ್​ ಜಾಲ ರಾಜಕೀಯ ಶ್ರೀರಕ್ಷೆ ಇಲ್ಲದೆ ಎಂದೂ ನಡೆಯೋದಿಲ್ಲ.

ಐಎಂಎ ಕೇಸ್​ನಲ್ಲಿ ರಾಜಕಾರಣಿಯೊಬ್ಬರಿಗೆ ಹಣ ನೀಡಿದ ಮಾಹಿತಿ ಕೂಡ ಇದೆ. ನಾನು 15 ದಿನದಿಂದ ಫಾಝಿಲ್ ವಿರುದ್ಧ ಆರೋಪ ಮಾಡಿದ್ದೇನೆ. ಶಾಸಕ ಜಮೀರ್ ಅಹ್ಮದ್ ಖಾನ್ ಬಗ್ಗೆ ನಾನು ಆರೋಪ ಮಾಡಿಲ್ಲ.

ಆದರೆ ಪೊಲೀಸರ ತನಿಖೆಯಲ್ಲಿ ಜಮೀರ್-ಫಾಝಿಲ್ ನಂಟು ಬಯಲಾಗಿದೆ. ಜಮೀರ್​-ಫಾಝಿಲ್​ ನಂಟಿನ ಬಗ್ಗೆ ಶಾಸಕರೇ ಮಾಹಿತಿ ನೀಡಲಿ. ಸ್ಯಾಂಡಲ್​ವುಡ್​ನಲ್ಲಿ ‘ಪಾಪದ ಹಣ’ದ ಬಗ್ಗೆ ಅಂಕಣ ಬರೆದಿದ್ದೇನೆ. ನಾನು ಬರೆದ ಅಂಕಣದಲ್ಲಿ ಒಗಟಿನ ರೂಪದ ಪ್ರಶ್ನೆಗಳನ್ನ ಕೇಳಿದ್ದೇನೆ ಎಂದು ಪ್ರಶಾಂತ್ ಸಂಬರಗಿ ತಿಳಿಸಿದ್ರು.

Click on your DTH Provider to Add TV9 Kannada