IMAನಲ್ಲಿ ನಾನೂ ಹೂಡಿಕೆ ಮಾಡಿದ್ದೆ: ED ಮುಂದೆ ಬಾಯ್ಬಿಟ್ಟ ನಟಿ ಸಂಜನಾ

| Updated By: ಸಾಧು ಶ್ರೀನಾಥ್​

Updated on: Sep 30, 2020 | 10:09 AM

ಬೆಂಗಳೂರು: ಡ್ರಗ್ಸ್ ಜಾಲದ ನಂಟಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ತಾನೂ ಕೂಡ ಐಎಂಎನಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನಂಬಿ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ. ಸಂಜನಾ ತನ್ನ ಲಕ್ಷಾಂತರ ರೂಪಾಯಿ ಹಣವನ್ನು ಐಎಂಎ ದಲ್ಲಾಳಿಗಳಿಂದ ಹೂಡಿಕೆ ಮಾಡಿಸಿದ್ದರು. ವಿಚಾರಣೆ ವೇಳೆ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿಕೆ‌ ಮಾಡಿದ್ದೆ,‌ ನನ್ನ‌ ಕೆಲವು ಸ್ನೇಹಿತರು […]

IMAನಲ್ಲಿ ನಾನೂ ಹೂಡಿಕೆ ಮಾಡಿದ್ದೆ: ED ಮುಂದೆ ಬಾಯ್ಬಿಟ್ಟ ನಟಿ ಸಂಜನಾ
Follow us on

ಬೆಂಗಳೂರು: ಡ್ರಗ್ಸ್ ಜಾಲದ ನಂಟಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ತಾನೂ ಕೂಡ ಐಎಂಎನಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನಂಬಿ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ.

ಸಂಜನಾ ತನ್ನ ಲಕ್ಷಾಂತರ ರೂಪಾಯಿ ಹಣವನ್ನು ಐಎಂಎ ದಲ್ಲಾಳಿಗಳಿಂದ ಹೂಡಿಕೆ ಮಾಡಿಸಿದ್ದರು. ವಿಚಾರಣೆ ವೇಳೆ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿಕೆ‌ ಮಾಡಿದ್ದೆ,‌ ನನ್ನ‌ ಕೆಲವು ಸ್ನೇಹಿತರು ಸಹ ಹೂಡಿಕೆ ಮಾಡಿದ್ರು. ಆರ್ಥಿಕವಾಗಿ ಸಂಕಷ್ಟ ಎದುರಿಸಿದ್ದೇನೆ. ನನ್ನ ಹಣ ಐಎಂಎ ಕಂಪನಿಯ ಪಾಲಾಗಿದೆ. ಹೀಗೆಂದು ತನ್ನ ಆರ್ಥಿಕ ವ್ಯವಹಾರದ ಕುರಿತು ಇ.ಡಿ. ವಿಚಾರಣೆ ವೇಳೆ ಸಂಜನಾ ಬಾಯ್ಬಿಟ್ಟಿದ್ದಾರೆ.