ಬೆಂಗಳೂರು: ರಂಗು ರಂಗಿನ ಚಿತ್ತಾರ. ಕಿವಿ ಕಿತ್ತು ಬರುವಂಥಾ ಸಂಗೀತದ ಅಬ್ಬರ. ಮೋಜು-ಮಸ್ತಿಯಲ್ಲೇ ಮುಳುಗಿದ್ದ ನಟಿಮಣಿ ಸಂಜನಾ ಪಾರ್ಟಿ ಲೈಫ್ಗೆ ಇದೀಗ ಬ್ರೇಕ್ ಬಿದ್ದಿದೆ. ವಿದೇಶದಲ್ಲಿ ಜೋರಾಗಿ, ಬಿಂದಾಸ್ ಅಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ಗಂಡ ಹೆಂಡತಿ ಬೆಡಗಿಗೆ ಈ ಸಲ ಕೃಷ್ಣನ ಜನ್ಮಸ್ಥಾನದಲ್ಲೇ ಹುಟ್ಟುಹಬ್ಬವನ್ನು ಆಚರಿಸುವ ಸ್ಥಿತಿ ಎದುರಾಗಿದೆ. ಬಿಂದಾಸ್ ಬೆಡಗಿಯ ಜೈಲ್ ದಿನಚರಿಯ ಎಕ್ಸ್‌ಕ್ಲೂಸಿವ್ ಸ್ಟೋರಿ ಟಿವಿ 9ನಲ್ಲಿ ಜಾಹಿರವಾಗಿದೆ.
ಹಾಗಾಗಿ, ನಟಿ ಜೈಲು ಅಧಿಕಾರಿಗಳು ಅನುಮತಿಗೆ ಕಾಯುತ್ತಿದ್ದಾರಂತೆ. ಒಂದು ವೇಳೆ, ಅವರು ಅನುಮತಿ ನೀಡಿದರೆ ಪರಪ್ಪನ ಅಗ್ರಹಾರದಲ್ಲೇ ತಮ್ಮ ಬರ್ತ್‌ಡೇ ಆಚರಿಸಲು ಸಂಜನಾ ಸಜ್ಜಾಗಿದ್ದಾರೆ. ಜೈಲಿನಲ್ಲಿಯೇ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸುವ ಸಾಧ್ಯತೆಯಿದೆ.