ಸಂಜು ಬಾಬಾ ಆರೋಗ್ಯಕ್ಕೇನೂ ತೊಂದರೆಯಿಲ್ಲ, ಆಸ್ಪತ್ರೆಯಿಂದ ಮನೆಗೆ ವಾಪಸ್ಸು

ಸಂಜು ಬಾಬಾ ಆರೋಗ್ಯಕ್ಕೇನೂ ತೊಂದರೆಯಿಲ್ಲ, ಆಸ್ಪತ್ರೆಯಿಂದ ಮನೆಗೆ ವಾಪಸ್ಸು

ತೀವ್ರ ಉಸಿರಾಟದ ಸಮಸ್ಯೆ ಬಗ್ಗೆ ದೂರಿದ ನಂತರ ಮುಂಬೈನ ಲೀಲಾವತಿ ಆಸ್ಪತ್ರೆಗೆ ಶನಿವಾರದಂದು ದಾಖಲಾಗಿದ್ದ ಖ್ಯಾತ ಬಾಲಿವುಡ್ ಸಂಜಯ್ ದತ್ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಯಿತು. ಆಸ್ಪತ್ರೆಯಿಂದ ಮನೆಗೆ ತೆರಳಿದ ಸಂಜಯ್, ತಮ್ಮ ಬಂಗ್ಲೆ ಹೊರಗಡೆ ಕಾಯುತ್ತಿದ್ದ ಮಾಧ್ಯಮದವರೆಡೆ ಕೈ ಬೀಸುತ್ತಿದ್ದ ದೃಶ್ಯ ಸೋಮವಾರ ಮಧ್ಯಾಹ್ನ ಕಂಡುಬಂತು. ಶನಿವಾರದಂದು ಟ್ವೀಟ್ ಮೂಲಕ ತನಗೆ ಕೊವಿಡ್ ಸೋಂಕು ತಗುಲಿಲ್ಲವೆಂದು ಸ್ಪಷ್ಟಪಡಿಸಿದ್ದ ಸಂಜಯ್, ದೇಹದ ಎಲ್ಲಾ ಆಯಾಮಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಆಬ್ಸರ್ವೇಷನ್ನಲ್ಲಿ ಇಡಲಾಗಿದೆ ಎಂದಿದ್ದರು. “ಲೀಲಾವತಿ ಆಸ್ಪತ್ರೆಯಲ್ಲಿ ನುರಿತ […]

Arun Belly

|

Aug 10, 2020 | 8:47 PM

ತೀವ್ರ ಉಸಿರಾಟದ ಸಮಸ್ಯೆ ಬಗ್ಗೆ ದೂರಿದ ನಂತರ ಮುಂಬೈನ ಲೀಲಾವತಿ ಆಸ್ಪತ್ರೆಗೆ ಶನಿವಾರದಂದು ದಾಖಲಾಗಿದ್ದ ಖ್ಯಾತ ಬಾಲಿವುಡ್ ಸಂಜಯ್ ದತ್ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಯಿತು.

ಆಸ್ಪತ್ರೆಯಿಂದ ಮನೆಗೆ ತೆರಳಿದ ಸಂಜಯ್, ತಮ್ಮ ಬಂಗ್ಲೆ ಹೊರಗಡೆ ಕಾಯುತ್ತಿದ್ದ ಮಾಧ್ಯಮದವರೆಡೆ ಕೈ ಬೀಸುತ್ತಿದ್ದ ದೃಶ್ಯ ಸೋಮವಾರ ಮಧ್ಯಾಹ್ನ ಕಂಡುಬಂತು.

ಶನಿವಾರದಂದು ಟ್ವೀಟ್ ಮೂಲಕ ತನಗೆ ಕೊವಿಡ್ ಸೋಂಕು ತಗುಲಿಲ್ಲವೆಂದು ಸ್ಪಷ್ಟಪಡಿಸಿದ್ದ ಸಂಜಯ್, ದೇಹದ ಎಲ್ಲಾ ಆಯಾಮಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಆಬ್ಸರ್ವೇಷನ್ನಲ್ಲಿ ಇಡಲಾಗಿದೆ ಎಂದಿದ್ದರು.

ಲೀಲಾವತಿ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಮತ್ತು ಕಳಕಳಿಯಿಂದ ನೋಡಿಕೊಳ್ಳುವ ನರ್ಸ್​ಗಳು ಹಾಗೂ ಇತರ ಸಿಬ್ಬಂದಿ ವರ್ಗದವರಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ನಾನು ಮನೆಗೆ ಮರಳಬಹುದು. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದ ಹಾಗೂ ಶುಭ ಹಾರೈಕೆಗಳಿಗೆ ಕೃತಙ್ಞತೆ ಸಲ್ಲಿಸುತ್ತೇನೆ. ಎಲ್ಲರೂ ನಿಮ್ಮ ನಿಮ್ಮ ಸುರಕ್ಷತೆಯ ಕಡೆ ಗಮನ ನೀಡಿ,” ಎಂದು ಸಂಜಯ್ ಟ್ವೀಟ್ ಮಾಡಿದ್ದರು.

ಅಶುತೋಷ್ ಗೊವಾರಿಕರ್ ಅವರ ಪಾಣಿಪತ್‘​ನಲ್ಲಿ ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ಸಂಜಯ್ ಅವರ ಕೈಯಲ್ಲಿ ಹಲವಾರು ಚಿತ್ರಗಳಿವೆ. ಅವರ ಸಡಕ್ 2′ ಚಿತ್ರ ಡಿಸ್ನಿ + ಹಾಟ್​ಸ್ಟಾರ್ ಡಿಜಿಟಲ್ ಪ್ಲಾಟ್​ಫಾರಂನಲ್ಲಿ ಆಗಸ್ಟ 28 ರಂದು ಬಿಡುಗಡೆಯಾಗಲಿದೆ.

Follow us on

Related Stories

Most Read Stories

Click on your DTH Provider to Add TV9 Kannada