ಬೆಂಗಳೂರು: ಡ್ರಗ್ ಕೇಸ್ನಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದು ಹೊರ ಬಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಸಂಜನಾ ಹೆಸರು ಕೇಳಿ ಬಂದಿತ್ತು. ರಾಗಿಣಿ ದ್ವಿವೇದಿ ಜೊತೆ ಅವರು ಕೂಡ ಜೈಲು ಸೇರಿದ್ದರು. ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಸಂಜನಾ ಬಿಡುಗಡೆ ಆಗಿದ್ದಾರೆ. ಈ ಸಮಯದಲ್ಲಿ ಕಾಳಜಿ ತೋರಿದ ಇನ್ಸ್ಟಾಗ್ರಾಂ ಖಾತೆಯ 10 ಲಕ್ಷ ಹಿಂಬಾಲಕರಿಗೆ ಸಂಜನಾ ಧನ್ಯವಾದ ಹೇಳಿದ್ದಾರೆ.
ಇನ್ಬಾಕ್ಸ್ನಲ್ಲಿ ಮೆಸೇಜ್ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ನಿಮ್ಮ ಪ್ರತಿ ಸಂದೇಶಗಳನ್ನು ನಾನು ಓದಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದ. ನನ್ನ ಆರೋಗ್ಯ ಸರಿ ಆದ ನಂತರದಲ್ಲಿ ನಾನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗುತ್ತೇನೆ. ನಿಮ್ಮ ಪ್ರೀತಿ-ಕಾಳಜಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದಿದ್ದಾರೆ.
ಸದ್ದು ಮಾಡಿದ್ದ ಸಂಜನಾ ಮತಾಂತರ ವಿಚಾರ
ನಟಿ ಸಂಜನಾರನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಕಾಟನ್‌ಪೇಟೆ ಠಾಣೆಗೆ ನೀಡಿರುವ ದೂರಿನಲ್ಲಿ ವಕೀಲರೊಬ್ಬರು ಆರೋಪಿಸಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಕಾನೂನು ಸಲಹೆ ಪಡೆಯಲು ಮುಂದಾಗಿದ್ದರು. ಸಂಜನಾರನ್ನು ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಂಡ ಬಳಿಕ ಮಹಿರಾ ಎಂದು ಮರುನಾಮಕರಣ ಮಾಡಲಾಗಿತ್ತು ಎನ್ನಲಾಗಿದೆ. ಜೈಲಿನಿಂದ ಬಿಡುಗಡೆ ಬಳಿಕ ಸಂಜನಾ ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿದ್ದರು.