ದಾದಾ ಸಾಹೇಬ್​ ಫಾಲ್ಕೆ ಸೌತ್​ 2020 ಪ್ರಶಸ್ತಿ: ರಕ್ಷಿತ್​-ರಶ್ಮಿಕಾಗೆ ಅವಾರ್ಡ್​

ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ರಕ್ಷಿತ್​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ಸಿನಿಮಾ 2020ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ರಕ್ಷಿತ್​​ ಶೆಟ್ಟಿ ಈ ಸಿನಿಮಾದಲ್ಲಿ ಅತ್ಯುತ್ತಮ ನಟನೆ ತೋರಿದ್ದರು. 

  • TV9 Web Team
  • Published On - 16:26 PM, 3 Jan 2021
ದಾದಾ ಸಾಹೇಬ್​ ಫಾಲ್ಕೆ ಸೌತ್​ 2020 ಪ್ರಶಸ್ತಿ: ರಕ್ಷಿತ್​-ರಶ್ಮಿಕಾಗೆ ಅವಾರ್ಡ್​
ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಿಣ್ಣ

ದಾದಾ ಸಾಹೇಬ್​ ಫಾಲ್ಕೆ ಸೌತ್​ 2020 ಪ್ರಶಸ್ತಿ ಪ್ರಕಟಗೊಂಡಿದೆ. ಕನ್ನಡದಲ್ಲಿ ರಕ್ಷಿತ್​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕರೆ, ತೆಲುಗಿನಲ್ಲಿ ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ರಕ್ಷಿತ್​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ಸಿನಿಮಾ 2020ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ರಕ್ಷಿತ್​​ ಶೆಟ್ಟಿ ಈ ಸಿನಿಮಾದಲ್ಲಿ ಅತ್ಯುತ್ತಮ ನಟನೆ ತೋರಿದ್ದರು.

ಇನ್ನು, ಸಿನಿಮಾದಿಂದ ಸಿನಿಮಾಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ಗೆ ಬಹುಮುಖ ನಟ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಯಜಮಾನ ಸಿನಿಮಾದ ನಾಯಕಿ ತಾನ್ಯಾ ಹೋಪ್​ಗೆ ಲಭಿಸಿದೆ. ಪ್ರೀಮಿಯರ್​ ಪದ್ಮಿನಿ ನಿರ್ದೇಶಕ ರಮೇಶ್​ ಇಂದಿರಾ ಅತ್ಯುತ್ತಮ ನಿರ್ದೇಶಕ ಅವಾರ್ಡ್​ ಮುಡಿಗೇರಿಸಿಕೊಂಡಿದ್ದಾರೆ. ಶಿವರಾಮ​ ಕಾರಂತರು ಬರೆದ ಮೂಕಜ್ಜಿಯ ಕನಸುಗಳು ಕಾದಂಬರಿ ಸಿನಿಮಾ ಆಗಿತ್ತು. ಇದು ಅತ್ಯುತ್ತಮ ಚಿತ್ರವಾಗಿ ಹೊರ ಹೊಮ್ಮಿದೆ. ವಿ. ಹರಿಕೃಷ್ಣಗೆ ಅತ್ಯುತ್ತಮ ಸಿನಿಮಾ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ತಮಿಳಿನಲ್ಲಿ ಅಸುರನ್​ ಸಿನಿಮಾದಲ್ಲಿ ಅದ್ಭುತ ನಟನೆ ತೋರಿದ ಧನುಶ್​ಗೆ ಬೆಸ್ಟ್​​ ಆ್ಯಕ್ಟರ್​ ಪ್ರಶಸ್ತಿ ದೊರೆತಿದೆ. ಜ್ಯೋತಿಕಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ ಅವಾರ್ಡ್​ ಗೆದ್ದಿದ್ದಾರೆ. ನವೀನ್​ ಪಾಲಿಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹುಟ್ಟೂರಿನಲ್ಲಿ ನೆಲದ ಮೇಲೆ ಉಂಡ ನಟ ರಕ್ಷಿತ್ ಶೆಟ್ಟಿ..! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಫೋಟೋ