ಹೇಗಿದ್ದೆ, ಹೇಗಾದೆ; ಟಮ್ಮಿ ಫ್ಯಾಟ್​ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು?

ನಟ ನಟಿಯರಿಗೆ ಮುಖ್ಯವಾಗಿ ಬೇಕಾಗಿದ್ದು ಫಿಟ್​ನೆಸ್​. ತೆರೆಮೇಲೆ ಉತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದರೆ ಅವರು ಫಿಟ್​ ಆಗಿ ಇರಲೇಬೇಕು. ಇದಕ್ಕಾಗಿ ಅವರು ನಿತ್ಯ ಜಿಮ್​-ಯೋಗ ಮಾಡುತ್ತಾರೆ.

ಹೇಗಿದ್ದೆ, ಹೇಗಾದೆ; ಟಮ್ಮಿ ಫ್ಯಾಟ್​ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು?

Updated on: Apr 14, 2021 | 8:36 PM

ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಡ್ರಗ್​​ ಕೇಸ್​ನಲ್ಲಿ ಅನೇಕರು ಜೈಲು ಪಾಲಾಗಿದ್ದರು. ಇದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು. ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿ ಸಂಜನಾ ಅನೇಕ ದಿನ ಜೈಲಿನಲ್ಲಿದ್ದು ಬಂದಿದ್ದರು. ಈಗ ಜಾಮೀನು ಪಡೆದು ಅವರು ಜೈಲಿನಿಂದ ಹೊರ ಬಂದಿದ್ದಾರೆ. ಆದರೆ, ಖಿನ್ನತೆಯಿಂದ ಬೊಜ್ಜು ಕಾಣಿಸಿಕೊಂಡಿದೆ ಎಂದು ಸಂಜನಾ ಬೇಸರ ಹೊರ ಹಾಕಿದ್ದಾರೆ.

ನಟ ನಟಿಯರಿಗೆ ಮುಖ್ಯವಾಗಿ ಬೇಕಾಗಿದ್ದು ಫಿಟ್​ನೆಸ್​. ತೆರೆಮೇಲೆ ಉತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದರೆ ಅವರು ಫಿಟ್​ ಆಗಿ ಇರಲೇಬೇಕು. ಇದಕ್ಕಾಗಿ ಅವರು ನಿತ್ಯ ಜಿಮ್​-ಯೋಗ ಮಾಡುತ್ತಾರೆ. ಆಹಾರ ಕ್ರಮದ ಮೇಲೂ ತುಂಬಾನೇ ಗಮನ ಹರಿಸುತ್ತಾರೆ. ಸ್ವಲ್ಪ ಬೊಜ್ಜು ಕಾಣಿಸಿಕೊಂಡರೂ ಸೆಲೆಬ್ರಿಟಿಗಳಿಗೆ ಚಿಂತೆ ಶುರುವಾಗಿ ಬಿಡುತ್ತದೆ. ಈಗ ಸಂಜನಾಗೆ ಟಮ್ಮಿ ಫ್ಯಾಟ್​ ಕಾಣಿಸಿಕೊಂಡಿದೆ. ಹಾಗಂತ ಅವರು ಚಿಂತೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರು ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ.

ಈ ಬಗ್ಗೆ ರೀಲ್ಸ್​ ಮಾಡಿ ಇನ್​ಸ್ಟ್ರಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಸಂಜನಾ, ಡಿಪ್ರೆಷನ್​ನಿಂದ ಫ್ಯಾಟ್​ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಫ್ಯಾಟ್​ ಬಂದಿರುವುದನ್ನು ಈ ವಿಡಿಯೋದಲ್ಲಿ ಅವರು ತೋರಿಸಿದ್ದಾರೆ.


ಈ ಬಗ್ಗೆ ಕ್ಯಾಪ್ಶನ್​ ಕೊಟ್ಟಿರುವ ಸಂಜನಾ, ಜನರು ಸಣ್ಣ ಆದರೆ ಬಂದು ಸಣ್ಣ ಆದೆ ಸಣ್ಣ ಆದೆ ಎನ್ನುತ್ತಾರೆ. ಆದರೆ, ಈಗ ನಾನು ದಪ್ಪ ಆಗಿದ್ದೇನೆ. ಬೇರೆಯವರು ಬಂದು ಹೇಳುವ ಮೊದಲೇ ನಾನೇ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ. ಜತೆಗೆ ಫ್ಯಾಟ್​ ಕರಗಿಸೋಕೆ ಅವರು ಸೊಲ್ಯೂಷನ್​ ಕೂಡ ಕೇಳಿದ್ದಾರೆ.

ಇದನ್ನೂ ಓದಿ: ಜಾಲಿ ಮೂಡ್​ನಲ್ಲಿ ಯಾರ್ಕರ್​ ಕಿಂಗ್ ಬುಮ್ರಾ- ಸಂಜನಾ ಗಣೇಶನ್.. ಫುಲ್​ ವೈರಲ್​ ಆಯ್ತು ದಂಪತಿಗಳ ಕ್ಯೂಟ್​ ಲುಕ್!

 ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು

Published On - 8:15 pm, Wed, 14 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us