‘ವಿಜಿ ಜೊತೆಗಿನ ಒಡನಾಟ ಒಂದು ಕಮರ್ಷಿಯಲ್ ಸಿನಿಮಾ ರೀತಿ ಆಗೋಯ್ತು’
ಇಂದು ನೀನಾಸಂ ಸತೀಶ್ ಜನ್ಮದಿನ. ಆದರೆ, ಈ ವಿಶೇಷ ದಿನವನ್ನು ಅವರು ಆಚರಿಸಿಕೊಂಡಿಲ್ಲ. ಸತೀಶ್ ಗೆಳೆಯ ಸಂಚಾರಿ ವಿಜಯ್ ನಿಧನ ಹಿನ್ನೆಲೆಯಲ್ಲಿ ಅವರು ಬರ್ತ್ಡೇ ಆಚರಣೆ ಮಾಡಿಕೊಂಡಿಲ್ಲ. ಈಗ ಅವರು ವಿಜಯ್ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.
ಇಂದು ನೀನಾಸಂ ಸತೀಶ್ ಜನ್ಮದಿನ. ಆದರೆ, ಈ ವಿಶೇಷ ದಿನವನ್ನು ಅವರು ಆಚರಿಸಿಕೊಂಡಿಲ್ಲ. ಸತೀಶ್ ಗೆಳೆಯ ಸಂಚಾರಿ ವಿಜಯ್ ನಿಧನ ಹಿನ್ನೆಲೆಯಲ್ಲಿ ಅವರು ಬರ್ತ್ಡೇ ಆಚರಣೆ ಮಾಡಿಕೊಂಡಿಲ್ಲ. ಈಗ ಅವರು ವಿಜಯ್ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.
ಜೂನ್ 20 ಸತೀಶ್ ಜನ್ಮದಿನ. ಪ್ರತಿ ವರ್ಷ ಅವರು ಅಭಿಮಾನಿಗಳ ಜತೆ ಸೇರಿ ಕೇಕ್ ಕತ್ತರಿಸುತ್ತಿದ್ದರು. ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಸಂಚಾರಿ ವಿಜಯ್ ಮೃತಪಟ್ಟ ನೋವನ್ನು ಸತೀಶ್ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಇತ್ತೀಚೆಗೆ ಸಂಚಾರಿ ವಿಜಯ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ವಿಧಿಯಾಟವೇ ಮೇಲುಗೈ ಸಾಧಿಸಿತು. ಸಂಚಾರಿ ವಿಜಯ್ ಮೃತಪಟ್ಟ ಬಗ್ಗೆ ಜೂನ್ 15ರಂದು ವೈದ್ಯರು ಘೋಷಣೆ ಮಾಡಿದರು. ನಂತರ ಅವರ ಕಳೇಬರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಗೆಳೆಯನ ತೋಟದಲ್ಲಿ ವಿಜಯ್ ಅಂತ್ಯಸಂಸ್ಕಾರ ನೆರವೇರಿತು.