ಜಗ್ಗೇಶ್​​ ಕೈಗೆ ದುಬಾರಿ ವಾಚು ಕಟ್ಟಿದ ಶಿವರಾಜ್ ಕುಮಾರ್-ಗೀತಾ ದಂಪತಿ

ಇದೀಗ ನಟ ಜಗ್ಗೇಶ್ ಅವರು ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿದ್ದು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಮನೆಗೆ ಬಂದ ಅತಿಥಿ ಜಗ್ಗೇಶ್ ಅವರಿಗೆ ದುಬಾರಿ ವಾಚನ್ನು ತೊಡಿಸಿ ಖುಷಿ ಪಟ್ಟಿದ್ದಾರೆ. ನಟ ಜಗ್ಗೇಶ್ ಅವರು, ಶಿವಣ್ಣ ಮತ್ತು ಗೀತಕ್ಕ ಕಟ್ಟಿದ ವಾಚಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಶಿವಣ್ಣನ ಆತ್ಮೀಯತೆ ಬಗ್ಗೆ ಬರೆದುಕೊಂಡಿದ್ದಾರೆ.

ಜಗ್ಗೇಶ್​​ ಕೈಗೆ ದುಬಾರಿ ವಾಚು ಕಟ್ಟಿದ ಶಿವರಾಜ್ ಕುಮಾರ್-ಗೀತಾ ದಂಪತಿ
Jaggesh Shiva Rajkumar

Updated on: Sep 13, 2026 | 10:21 PM

ಮುಖ್ಯಾಂಶಗಳು

  • ಶಿವರಾಜ್ ಕುಮಾರ್ ಮತ್ತು ಜಗ್ಗೇಶ್ ಗೆಳೆತನ
  • ಶಿವಣ್ಣನಿಗೆ ರಾಖಿ ಕಟ್ಟಿದ ಗೆಳೆಯ ಜಗ್ಗೇಶ್
  • ಜಗ್ಗೇಶ್​ ಕೈಗೆ ದುಬಾರಿ ವಾಚು ಕಟ್ಟಿದ ಶಿವಣ್ಣ-ಗೀತಕ್ಕ

ಇತ್ತೀಚೆಗಷ್ಟೆ ರಕ್ಷಾ ಬಂಧನ ಮುಗಿದು ಎರಡು ವಾರಗಳಾಗಿದೆ. ಶಿವರಾಜ್ ಕುಮಾರ್ ಅವರನ್ನು ಚಿತ್ರರಂಗದ ಹಲವರು ಸಹೋದರನಂತೆ ಭಾವಿಸುತ್ತಾರೆ. ಹಲವರು ಅಂದು ಶಿವಣ್ಣನಿಗೆ ರಾಖಿ ಕಟ್ಟಿದ್ದೂ ಸಹ ಇದೆ. ಇದೀಗ ನಟ ಜಗ್ಗೇಶ್ ಅವರು ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿದ್ದು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಮನೆಗೆ ಬಂದ ಅತಿಥಿ ಜಗ್ಗೇಶ್ ಅವರಿಗೆ ದುಬಾರಿ ವಾಚನ್ನು ತೊಡಿಸಿ ಖುಷಿ ಪಟ್ಟಿದ್ದಾರೆ. ನಟ ಜಗ್ಗೇಶ್ ಅವರು, ಶಿವಣ್ಣ ಮತ್ತು ಗೀತಕ್ಕ ಕಟ್ಟಿದ ವಾಚಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಶಿವಣ್ಣನ ಆತ್ಮೀಯತೆ ಬಗ್ಗೆ ಬರೆದುಕೊಂಡಿದ್ದಾರೆ.

ಜಗ್ಗೇಶ್ ಅವರು ರಕ್ಷಾಬಂಧನವನ್ನು ಶಿವರಾಜ್ ಕುಮಾರ್ ಅವರಿಗೆ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಕ್ಕ ಅವರು 2.60 ಲಕ್ಷ ರೂಪಾಯಿ ಬೆಲೆ ವರ್ಸಾಶೆಯ ಗ್ರೆಸಾ ರಿಯಾಕ್ಷನ್ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ. ಐಶಾರಾಮಿ ವಾಚುಗಳಲ್ಲಿ ವರ್ಸಾಷೆಯ ವಾಚು ಸಹ ಒಂದು. ಅಪರೂಪದ ತಂತ್ರಜ್ಞಾನ ಮತ್ತು ಮೌಲ್ಯಯುತ ವಸ್ತುಗಳನ್ನು ಬಳಸಿ ನಿರ್ಮಿಸಿದ ವಾಚುಗಳು ಇವಾಗಿವೆ. ವರ್ಸಾಷೆ ವಾಚುಗಳನ್ನು ಮಾತ್ರವೇ ಅಲ್ಲದೆ ಹಲವು ಫ್ಯಾಷನ್ ಉಡುಗೆಗಳನ್ನು ಸಹ ನಿರ್ಮಿಸಿ ಮಾರಾಟ ಮಾಡುತ್ತದೆ.

‘ಇಂದು ನನ್ನ ನಲ್ಮೆಯ ಸಹೋದರ ಶಿವರಾಜ್ ಕುಮಾರ್ ರವರ ಮನೆಗೆ ನನ್ನ ಆತ್ಮೀಯ ಮಿತ್ರ ಶ್ರೀನಿಧಿ ರವರೊಂದಿಗೆ ತೆರಳಿ ಅರ್ಧಘಂಟೆ ಕಾಲಕಳೆದು ಬಂದೆ, 40ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗೆ ಉಳಿದಿದೆ. ಅವರ ಶ್ರೀಮತಿ ಗೀತ ಮನೆಗೆ ಬಂದ ಅಣ್ಣನಂತೆ ತಮ್ಮ ಮಮತೆ ನನಗೆ ವ್ಯೆಕ್ತಪಡಿಸಿ ಕೈಗಡಿಯಾರ ಕೊಡಿಸಿದ್ದು ಕಂಡು ಭಾವುಕನಾದೆ. ನನ್ನ ಪ್ರೀತಿಯ ರಾಜಣ್ಣ ಅವರ ಸರ್ವಗುಣ ಮಗನಿಗೆ ಧಾರೆ ಎರೆದು ಹೋಗಿದ್ದಾರೆ. ರಾಜಣ್ಣನ ಜೊತೆ ಕೂತ ದಿನಗಳು ಮನಸ್ಸಿನಲ್ಲಿ ತರಂಗದಂತೆ ಮರುಕಳಿಸಿದವು, ಅವರ ಕುಟುಂಬಕ್ಕೆ ಸಂತೋಷ ಸಡಗರ ಚಿರಾಸ್ಥಿಯಂತೆ ನಿತ್ಯ ನಿರಂತರ ರಾಯರಕೃಪೆಯಿಂದ ಸಿಗಲಿ’ ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಸ್ಟೈಲ್​ ನೋಡಿ, ಊಟಕ್ಕೆ ಹೋದಾಗಲೂ ತಮಾಷೆ ಬಿಡರು

ಜಗ್ಗೇಶ್ ಮತ್ತು ಶಿವರಾಜ್ ಕುಮಾರ್ ಅವರದ್ದು ದಶಕಗಳ ಅನುಬಂಧ ಮತ್ತು ಸ್ನೇಹ. ಜಗ್ಗೇಶ್ ಅವರು ಹಲವು ವೇದಿಕೆಗಳನ್ನು ಶಿವಣ್ಣನನ್ನು ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಜಗ್ಗೇಶ್ ಅವರು, ಡಾ ರಾಜ್​​ಕುಮಾರ್ ಅವರ ಅಪ್ಪಟ ಅಭಿಮಾನಿಯೂ ಆಗಿರುವ ಜಗ್ಗೇಶ್ ಅವರು ಅವರೊಟ್ಟಿಗೆ ತಾವು ಕಳೆದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಿವಣ್ಣನ ಬಗ್ಗೆ ಅವರ ಉದಾರತೆಯ ಬಗ್ಗೆಯೂ ಬರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us