ಭೈರವನ ಅವತಾರದಲ್ಲಿ ಬಂದ ಶಿವಣ್ಣ; ಹಿಂದೆಂದೂ ನೋಡಿರದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ

|

Updated on: Jul 09, 2024 | 7:32 AM

‘ಭೈರವನ ಕೊನೆಯ ಪಾಠ’ ಚಿತ್ರದ ಮೊದಲ ಲುಕ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಈ ಮೊದಲು ಸೋಶಿಯಲ್‍ ಮೀಡಿಯಾದಲ್ಲಿ ಹೇಳಿಕೊಂಡಿತ್ತು. ಅದರಂತೆ ಚಿತ್ರದ ಪೋಸ್ಟರ್‍ ಬಿಡುಗಡೆಯಾಗಿದ್ದು, ಶಿವಣ್ಣ ಬಿಳಿ ಗಡ್ಡ-ಮೀಸೆಯ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆದಿದೆ.

ಭೈರವನ ಅವತಾರದಲ್ಲಿ ಬಂದ ಶಿವಣ್ಣ; ಹಿಂದೆಂದೂ ನೋಡಿರದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ
ಶಿವಣ್ಣ
Follow us on

ಶಿವರಾಜ್​ಕುಮಾರ್ ಅವರು ಚಿತ್ರರಂಗದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಒಂದು ದಿನ ಅವರು ಸುಮ್ಮನೆ ಕೂತವರಲ್ಲ. ಸದಾ ಶೂಟಿಂಗ್​ನಲ್ಲಿ ಬ್ಯುಸಿ ಇರುತ್ತಾರೆ. ಅವರು ಮಚ್ಚು-ಲಾಂಗ್ ಹಿಡಿದರೆ ಸಿನಿಮಾ ಸಖತ್ ಹಿಟ್ ಆಗುತ್ತದೆ. ಹಾಗಂತ ಅವರು ಅದೇ ರೀತಿಯ ಪಾತ್ರಗಳಿಗೆ ಒಗ್ಗಿ ಕೂತವರಲ್ಲ. ಅವರು ಹೊಸ ಹೊಸ ರೀತಿಯ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ‘ಭೈರವನ ಕೊನೆ ಪಾಠ’ ಸಿನಿಮಾ ಉತ್ತಮ ಉದಾಹರಣೆ. ಇತ್ತೀಚೆಗೆ ಟೈಟಲ್ ಮೂಲಕ ಸಿನಿಮಾ ಗಮನ ಸೆಳೆದಿತ್ತು. ಈಗ ಬಿಡುಗಡೆ ಆಗಿರೋ ಪೋಸ್ಟರ್ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

ಭೈರವನ (ಶಿವರಾಜ್​ಕುಮಾರ್) ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಅವನು ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾನೆ. ಅವನ ಕಡೆಯೂ ಒಂದಷ್ಟು ಬಾಣಗಳು ಬರುತ್ತಿವೆ. ಹಿಂಭಾಗದಲ್ಲಿ ಕುದುರೆ ಇದೆ. ‘ಭೈರವನ ಕೊನೆ ಪಾಠ’ ಎಂಬುದರ ಜೊತೆಗೆ ‘ರಾಜನಿಗೆ ಪಾಠಗಳು’ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ. ಒಟ್ಟಾರೆ ಈ ಸಿನಿಮಾ ಭರ್ಜರಿ ನಿರೀಕ್ಷೆ ಹುಟ್ಟುಹಾಕಿದೆ.

ಹೇಮಂತ್ ರಾವ್ ಅವರು ಈ ಮೊದಲು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಈಗ ಅವರು ಶಿವರಾಜ್​ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಶಿವಣ್ಣ-ಹೇಮಂತ್​ ರಾವ್ ಕಾಂಬಿನೇಷನ್​ನ ಹೊಸ ಸಿನಿಮಾಗೆ ‘ಭೈರವನ ಕೊನೆ ಪಾಠ’ ಶೀರ್ಷಿಕೆ

‘ಭೈರವನ ಕೊನೆ ಪಾಠ’ ಚಿತ್ರವನ್ನು ‘ವೈಶಾಖ್‍ ಜೆ ಫಿಲ್ಮ್ಸ್​’ ಬ್ಯಾನರ್​ ಅಡಿಯಲ್ಲಿ ಡಾ. ವೈಶಾಖ್‍ ಜೆ ಗೌಡ ನಿರ್ಮಿಸುತ್ತಿದ್ದಾರೆ. ಶಿವರಾಜ್​ಕುಮಾರ್ ಅವರು ‘ಭೈರತಿ ರಣಗಲ್’ ಮತ್ತು ‘ಉತ್ತರಾಕಾಂಡ’ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಳು ರಿಲೀಸ್ ಆದ ಬಳಿಕ ‘ಭೈರವನ ಕೊನೆ ಪಾಠ’ ಸೆಟ್ಟೇರೋ ಸಾಧ್ಯತೆ ಇದೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.