ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು

ಶಿವರಾಜ್ ಕುಮಾರ್ ಅವರು ಸುಧಾರಾಣಿ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸುಧಾರಾಣಿ ನಿರ್ಮಿಸಿ ನಟಿಸಿರುವ ‘ಘೋಸ್ಟ್’ ಶಾರ್ಟ್ ಫಿಲ್ಮ್‌ಗೆ ಶಿವಣ್ಣ, ಶುಭ ಹಾರೈಸಿದರು. ತಮ್ಮ ದೀರ್ಘಕಾಲದ ಗೆಳೆತನ ಮತ್ತು ಪರಸ್ಪರ ವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು
ಶಿವರಾಜ್​ಕುಮಾರ್-ಸುಧಾರಾಣಿ

Updated on: Apr 16, 2025 | 8:48 AM

ಸುಧಾರಾಣಿ (Sudharani) ಹಾಗೂ ಶಿವರಾಜ್​ಕುಮಾರ್ ಮಧ್ಯೆ ಇರುವ ಗೆಳೆತನಕ್ಕೆ ಹಲವು ದಶಕಗಳು ಕಳೆದಿವೆ. 1986ರಲ್ಲಿ ಬಂದ ‘ಆನಂದ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಬಳಿಕ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಈ ಫ್ರೆಂಡ್​ಶಿಪ್ ಈಗಲೂ ಮುಂದುವರಿದಿದೆ. ಈ ಕಾರಣದಿಂದಲೇ ಸುಧಾರಾಣಿ ನಿರ್ಮಾಣ ಮಾಡಿ, ನಟಿಸಿರೋ ‘ಘೋಸ್ಟ್’ ಶಾರ್ಟ್ ಫಿಲ್ಮ್​ ಪೋಸ್ಟರ್ ಬಿಡುಗಡೆ ಮಾಡಿ ಶಿವಣ್ಣ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್​ಕುಮಾರ್ ಅವರು ಸುಧಾರಾಣಿಗೆ ಪ್ರೀತಿಯಿಂದ ಕರೆಯೋದು ಏನು ಎಂಬುದನ್ನೂ ರಿವೀಲ್ ಮಾಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಚುಮ್ಮಿ, ನಾನು ಸುಧಾರಾಣಿಯನ್ನು ಪ್ರೀತಿಯಿಂದ ಹೀಗೆ ಕರೆಯೋದು. ಅವರನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದೇನೆ. ಹೀರೋಯಿನ್ ಆದ್ಮೇಲೆ ಇದೊಂದು ಅವತಾರ ನೋಡುತ್ತಿದ್ದೇನೆ. ಘೋಸ್ಟ್, ದಿ ದೆವ್ವ ಹೆಸರಿನ ಶಾರ್ಟ್​ ಫಿಲ್ಮ್​ನ ನಿರ್ಮಾಣ ಮಾಡಿದ್ದಾರೆ. ಪೋಸ್ಟರ್ ಚೆನ್ನಾಗಿದೆ’ ಎಂದಿದ್ದಾರೆ ಶಿವರಾಜ್​ಕುಮಾರ್.

ಇದನ್ನೂ ಓದಿ
‘ಕೊನೆ ಉಸಿರಿನವರೆಗೂ ಐಶ್ವರ್ಯಾ ಪರವಾಗಿ ಹೋರಾಡುತ್ತೇನೆ’; ಅಮಿತಾಭ್
ರಶ್ಮಿಕಾ ಸಸ್ಯಾಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಆಗುವುದೇ ಇಲ್ಲ
ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; 5 ಕೋಟಿಗೆ ಡಿಮ್ಯಾಂಡ್
ಸೋತು ಸುಣ್ಣವಾದ ‘ಅಪ್ಪು’ ನಿರ್ದೇಶಕನಿಗೆ ವಿಜಯ್ ಅವಕಾಶ ಕೊಟ್ಟಿದ್ದೇಕೆ?

‘ಸೈಕಲಾಜಿಕಲ್ ಥ್ರಿಲ್ಲರ್ ರೀತಿ ಅನಿಸುತ್ತಿದೆ. ಸುದೇಶ್ ಕೆ. ರಾವ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಅವರ ತಂಡಕ್ಕೆ ಆಲ್​ ದಿ ಬೆಸ್ಟ್ ಹೇಳುತ್ತೇನೆ’ ಎಂದು ವಿಶ್ ಮಾಡಿದ್ದಾರೆ ಶಿವರಾಜ್​ಕುಮಾರ್. ‘ನಮ್ಮಿಬ್ಬರದ್ದು ಯಾವ ರೀತಿಯ ಸಂಬಂಧ ಎಂದು ಹೇಳೋಕೆ ಸಾಧ್ಯವಿಲ್ಲ. ಒಳ್ಳೆಯ ಗೆಳತಿ, ಸಹ ಕಲಾವಿದೆ. ನನಗಾಗಿ ಅವರು ಯಾವಾಗಲೂ ಇದ್ದಾರೆ. ಅತ್ತಾಗ, ನಕ್ಕಾಗ, ಸಕ್ಸಸ್ ನೋಡಿದಾಗ ಜೊತೆಗಿದ್ದರು. ನಾವಿಬ್ಬರೂ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇವೆ’ ಎಂದು ಶಿವಣ್ಣ ಸಂತಸ ಹೊರಹಾಕಿದರು.

ಇದನ್ನೂ ಓದಿ: ‘ಇತ್ತೀಚೆಗೆ ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಆಗಲೇ ಇಲ್ಲ’; ಬೇಸರ ಹೊರಹಾಕಿದ ಸುಧಾರಾಣಿ

‘ನಮ್ಮ ಮಧ್ಯೆ ಇನ್ನೂ ಇಷ್ಟು ಫ್ರೆಂಡ್​ಶಿಪ್ ಇದೆ ಎಂದರೆ ನಮ್ಮಿಬ್ಬರ ನಡುವೆ ಪ್ರೀತಿ-ವಿಶ್ವಾಸ ಕಾರಣ. ಈ ಸಿನಿಮಾ ಯುಕೆಯಲ್ಲಿ ಪ್ರೀಮಿಯರ್ ಆಗುತ್ತಿದೆ. ಅಲ್ಲಿನ ಕನ್ನಡಿಗರು ನೋಡಿ. ನಾನು ನೋಡುತ್ತೇನೆ’ ಎಂದು ಶಿವಣ್ಣ ಭರವಸೆ ನೀಡಿದ್ದಾರೆ.

ಸುಧಾರಾಣಿ ಅವರು ರಾಜ್​ಕುಮಾರ್ ಕುಟುಂಬದ ಮೂರು ಜನರೇಶನ್ ಜೊತೆ ಕೆಲಸ ಮಾಡಿದ್ದಾರೆ. ಈ ಮೊದಲು ರಾಜ್​ಕುಮಾರ್ ಜೊತೆ ಅವರು ನಟಿಸಿದ್ದರು. ಆ ಬಳಿಕ ಶಿವರಾಜ್​ಕುಮಾರ್ ಜೊತೆ ಬಣ್ಣ ಹಚ್ಚಿದರು. ಈಗ ರಾಜ್​ಕುಮಾರ್ ಮೊಮ್ಮೊಗ ಯುವ ರಾಜ್​ಕುಮಾರ್ ಜೊತೆ ‘ಯುವ’ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಅಪರೂಪದ ಸಾಧನೆಯನ್ನು ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us