‘ಬಿಗ್​ ಡ್ಯಾಡಿ’ ಜೊತೆ ಬರ್ತಾನೆ ‘ಬೀರ್​ಬಲ್​’: ಮುಗಿಯಿತು ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಚಿತ್ರೀಕರಣ

‘ಘೋಸ್ಟ್​’ ಚಿತ್ರವನ್ನು ಆದಷ್ಟು ಬೇಗ ನೋಡಬೇಕು ಎಂದು ಶಿವರಾಜ್​ಕುಮಾರ್​ ಫ್ಯಾನ್ಸ್​ ಕಾದಿದ್ದಾರೆ. ಅಂಥವರಿಗೆಲ್ಲ ಒಂದು ಸಿಹಿ ಸುದ್ದಿ ಸಿಕ್ಕಿದೆ. ಈ ಸಿನಿಮಾಗೆ ಶೂಟಿಂಗ್​ ಮುಕ್ತಾಯ ಆಗಿದ್ದು, ಇನ್ನೂ ಕೆಲವು ಇಂಟರೆಸ್ಟಿಂಗ್​ ವಿಷಯಗಳ ಬಗ್ಗೆ ಅಪ್​ಡೇಟ್​ ಸಿಕ್ಕಿದೆ.

‘ಬಿಗ್​ ಡ್ಯಾಡಿ’ ಜೊತೆ ಬರ್ತಾನೆ ‘ಬೀರ್​ಬಲ್​’: ಮುಗಿಯಿತು ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಚಿತ್ರೀಕರಣ
ಶಿವರಾಜ್​ಕುಮಾರ್​, ಶ್ರೀನಿ

Updated on: Aug 10, 2023 | 7:15 PM

ನಟ ಶಿವರಾಜ್​ಕುಮಾರ್​ (Shivarajkumar) ಅವರ ಬಗ್ಗೆ ಸಿನಿಪ್ರಿಯರು ಇಟ್ಟುಕೊಂಡಿರುವ ಕ್ರೇಜ್​ ಅಷ್ಟಿಷ್ಟಲ್ಲ. ಶಿವಣ್ಣ ಡಿಫರೆಂಟ್​ ಆಗಿ ಕಾಣಿಸಿಕೊಂಡ ಎಲ್ಲ ಸಿನಿಮಾಗಳು ಕೂಡ ಈವರೆಗೆ ಪ್ರೇಕ್ಷಕರ ಮನಗೆದ್ದಿವೆ. ಅಂಥದ್ದೇ ದೊಡ್ಡ ಗೆಲುವಿನ ಭರವಸೆ ಮೂಡಿಸಿರುವ ‘ಘೋಸ್ಟ್​’ ಸಿನಿಮಾ (Ghost Movie) ಬಗ್ಗೆ ಹೊಸ ಹೊಸ ಅಪ್​ಡೇಟ್​ಗಳು ಕೇಳಿಬರುತ್ತಿವೆ. ಅದ್ದೂರಿಯಾಗಿ ಈ ಸಿನಿಮಾ ಮೂಡಿಬರುತ್ತಿದೆ. ನಿರ್ದೇಶಕ ಶ್ರೀನಿ (Director Srini) ಅವರು ತುಂಬ ಮಾಸ್​ ಆಗಿ ಈ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ ಎಂಬುದಕ್ಕೆ ಈಗಾಗಲೇ ‘ಬಿಗ್​ ಡ್ಯಾಡಿ’ ಟೀಸರ್​ ಮೂಲಕ ಸುಳಿವು ಸಿಕ್ಕಿದೆ. ‘ಘೋಸ್ಟ್​’ ಸಿನಿಮಾವನ್ನು ಆದಷ್ಟು ಬೇಗ ನೋಡಬೇಕು ಎಂದು ಶಿವರಾಜ್​ಕುಮಾರ್​ ಅಭಿಮಾನಿಗಳು ಕಾದಿದ್ದಾರೆ. ಅಂಥವರಿಗೆಲ್ಲ ಒಂದು ಗುಡ್​ ನ್ಯೂಸ್​ ಸಿಕ್ಕಿದೆ. ಈ ಸಿನಿಮಾಗೆ ಶೂಟಿಂಗ್​ ಮುಕ್ತಾಯ ಆಗಿದೆ. ಅಷ್ಟೇ ಅಲ್ಲದೇ, ಇನ್ನೂ ಕೆಲವು ಇಂಟರೆಸ್ಟಿಂಗ್​ ವಿಷಯಗಳು ಈ ಸಿನಿಮಾದಲ್ಲಿವೆ.

ಶ್ರೀನಿ ಅಲಿಯಾಸ್​ ಎಂ.ಜಿ. ಶ್ರೀನಿವಾಸ್​ ಅವರು ನಿರ್ದೇಶನ ಮತ್ತು ನಟನೆ ಎರಡರಲ್ಲೂ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ‘ಓಲ್ಡ್​ ಮಾಂಕ್​’, ‘ಬೀರ್​ಬಲ್​’ ಮುಂತಾದ ಸಿನಿಮಾಗಳಿಂದ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರು ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಜೊತೆ ಕೈ ಜೋಡಿಸಿ ‘ಘೋಸ್ಟ್​’ ಸಿನಿಮಾ ಮಾಡುತ್ತಿರುವುದರಿಂದ ನಿರೀಕ್ಷೆ ಜೋರಾಗಿದೆ. ವಿಶೇಷ ಏನೆಂದರೆ, ಈ ಚಿತ್ರಕ್ಕೆ ಶ್ರೀನಿ ಅವರು ಆ್ಯಕ್ಷನ್​-ಕಟ್​ ಹೇಳಿರುವುದು ಮಾತ್ರವಲ್ಲದೇ ಒಂದು ವಿಶೇಷ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ‘ನಮ್ಮ ಇಂಡಸ್ಟ್ರಿ ಬೆಳೆಯಬೇಕು’; ರಮ್ಯಾ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್​ಕುಮಾರ್

‘ಬೀರ್​ಬಲ್​’ ಸಿನಿಮಾ ರೀತಿಯೇ ‘ಘೋಸ್ಟ್​’ ಚಿತ್ರದಲ್ಲಿ ಕೂಡ ಶ್ರೀನಿ ಅವರು ಲಾಯರ್​ ಪಾತ್ರ ಮಾಡಿದ್ದಾರೆ. ಆ ಕಾರಣದಿಂದಾಗಿ ಕೌತುಕ ಮೂಡಿದೆ. ‘ಬೀರ್​ಬಲ್​ 2’ ಚಿತ್ರಕ್ಕೂ ‘ಘೋಸ್ಟ್​’ ಸಿನಿಮಾಗೂ ಲಿಂಕ್​ ಇದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆ ಉತ್ತರ ಸಿಗಬೇಕು ಎಂದರೆ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲೇಬೇಕು. ಈಗಾಗಲೇ ಶಿವಣ್ಣನ ಗೆಟಪ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಮಾಸ್​ ಆಗಿ ಈ ಸಿನಿಮಾ ಮೂಡಿಬರುತ್ತಿದೆ.

ಇದನ್ನೂ ಓದಿ: Ghost Movie: ‘ಬಿಗ್​ ಡ್ಯಾಡಿ’ ಪೋಸ್ಟರ್​ ಮೂಲಕ ಕೌತುಕ ಹೆಚ್ಚಿಸಿದ ‘ಘೋಸ್ಟ್​’; ಹೇಗಿದೆ ನೋಡಿ ಶಿವಣ್ಣನ ಲುಕ್​

‘ಸಂದೇಶ್ ಪ್ರೊಡಕ್ಷನ್ಸ್’ ಬ್ಯಾನರ್​ ಮೂಲಕ ಸಂದೇಶ್ ಎನ್. ಅವರು ನಿರ್ಮಾಣ ಮಾಡುತ್ತಿರುವ ‘ಘೋಸ್ಟ್​’ ಸಿನಿಮಾದಲ್ಲಿ ಬಾಲಿವುಡ್​ ನಟ ಅನುಪಮ್​ ಖೇರ್​ ಅವರು ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ. ಹಾಗಾಗಿ ಹಿಂದಿ ಸಿನಿಪ್ರಿಯರು ಕೂಡ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಅನುಪಮ್​ ಖೇರ್​ ಮಾತ್ರವಲ್ಲದೇ ದತ್ತಣ್ಣ, ಜಯರಾಂ, ಪ್ರಶಾಂತ್ ನಾರಾಯಣನ್, ಸತ್ಯಪ್ರಕಾಶ್, ಅಭಿಜಿತ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us